ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಜಾಗತಿಕ ಶಿಕ್ಷಣ ಮೇಳ|Global Education Fair

blank

ಬೆಂಗಳೂರು: ಬೆಂಗಳೂರಿನ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಅಧ್ಯಯನ ಮಾಡಲು ಸುವರ್ಣಾವಕಾಶ ನೀಡುವ ಸಲುವಾಗಿ, ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ ಮೆಗಾ ಶಿಕ್ಷಣ ಮೇಳ(Global Education Fair at Presidency University) ಆಯೋಜಿಸಿತ್ತು.

14 ದೇಶಗಳಿಂದ ಅಂತರರಾಷ್ಟ್ರೀಯ ಮೆಚ್ಚುಗೆ ಪಡೆದ 60 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಈ ಮೇಳದಲ್ಲಿ ಭಾಗವಹಿಸಿದ್ದವು. ಯುಸಿಎಲ್, ಕಿಂಗ್ಸ್ ಕಾಲೇಜು ಲಂಡನ್, ಆಕ್ಲೆಂಡ್ ವಿಶ್ವವಿದ್ಯಾಲಯ, ಮ್ಯಾಕ್ವಾರಿ ವಿಶ್ವವಿದ್ಯಾಲಯ, ಯುಸಿ ಡೇವಿಸ್ ಮತ್ತು ಇಂಡಿಯಾನಾ ವಿಶ್ವವಿದ್ಯಾಲಯದಂತಹ ಉನ್ನತ ವಿಶ್ವವಿದ್ಯಾಲಯಗಳು ಯಲಹಂಕದ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಆವರಣದಲ್ಲಿ ಉಪಸ್ಥಿತರಿದ್ದು, ವಿದೇಶದಲ್ಲಿ ಯುಜಿ, ಪಿಜಿ ಅಥವಾ ಪಿಎಚ್‌ಡಿ ಕೋರ್ಸ್‌ಗಳನ್ನು ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದವು.

ಹಲವಾರು ಶಾಲೆಗಳು ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಜಾಗತಿಕ ಶಿಕ್ಷಣ ಮೇಳದಲ್ಲಿ ಭಾಗವಹಿಸಿದ್ದರು. ವಿವಿಧ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿದರು.

ಏಜೆಂಟರ ಮೂಲಕ ಹೋಗದೆ ಪ್ರತಿಷ್ಠಿತ ಜಾಗತಿಕ ಶಿಕ್ಷಣ ಸಂಸ್ಥೆಗಳೊಂದಿಗೆ ನೇರವಾಗಿ ಸಂವಹನ ನಡೆಸುವ ವೇದಿಕೆಯನ್ನು ವಿದ್ಯಾರ್ಥಿಗಳು ಒದಗಿಸುವುದು ಈ ಶಿಕ್ಷಣ ಮೇಳದ ಉದ್ದೇಶವಾಗಿತ್ತು.

ಶಿಕ್ಷಣ ಮೇಳವನ್ನು ಉಪಕುಲಪತಿ ಡಾ. ವಿಜಯನ್ ಇಮ್ಯಾನುಯೆಲ್, ಪ್ರೊ ವೈಸ್ ಚಾನ್ಸೆಲರ್ ಡಾ. ಶಿವ ಪೆರುಮಾಳ್ ಮತ್ತು ರಿಜಿಸ್ಟ್ರಾರ್ ಡಾ. ಸಮೀನಾ ನೂರ್ ಅಹ್ಮದ್ ಪನಾಲಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಶಿವ ಪೆರುಮಾಳ್, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಜಾಗತೀಕರಣದ ಮಹತ್ವವನ್ನು ಎತ್ತಿ ತೋರಿಸಿದರು. ಭಾಗವಹಿಸಿದ್ದ ಹೆಸರಾಂತ ವಿಶ್ವವಿದ್ಯಾಲಯಗಳು ಹಾಗೂ ಕರ್ನಾಟಕದ ವಿದ್ಯಾರ್ಥಿಗಳಿಂದ ಬಂದ ಪ್ರತಿಕ್ರಿಯೆಗೆ ಸಂತೋಷ ವ್ಯಕ್ತಪಡಿಸಿದರು.

Share This Article

ಬೇಸಿಗೆಯಲ್ಲಿ ನಿಮ್ಮ ಆರೋಗ್ಯಕ್ಕೆ ಯಾವುದು ಹೆಚ್ಚು ಪ್ರಯೋಜನಕಾರಿ, ಮೊಸರು ಅಥವಾ ಮಜ್ಜಿಗೆ?Summer Health Tips

  Summer Health Tips: ಬೇಸಿಗೆಯ ಸುಡುವ ಬಿಸಿಲಿನಲ್ಲಿ ಮಧ್ಯಾಹ್ನವಾಗಲಿ ಅಥವಾ ಸಂಜೆಯಾಗಲಿ, ನಮ್ಮ ದೇಹವನ್ನು…

Oil Food: ಎಣ್ಣೆ ಪದಾರ್ಥ ಆಹಾರ ತಿಂದ ನಂತರ ಈ ಕೆಲಸಗಳನ್ನು ಮಾಡಿ ಆರೋಗ್ಯಕ್ಕೆ ಒಳ್ಳೆಯದು

Oil Food: ನಮ್ಮಲ್ಲಿ ಹಲವರಿಗೆ ಯಾವಾಗಲೂ ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಕು ಎಂದು ಅನಿಸುತ್ತದೆ. ಅಂದರೆ ನಾವು…