Gold Rates: ಕೇವಲ ಇದೊಂದು ವರ್ಷದಲ್ಲೇ ಚಿನ್ನದ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು 13 ಬಾರಿ ತಲುಪಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಔನ್ಸ್‌ಗೆ 3,000 ಡಾಲರ್ ಗಡಿದಾಟಿದೆ. ಹೂಡಿಕೆದಾರರಿಂದ ಬಲವಾದ ಬೇಡಿಕೆ, ಆರ್ಥಿಕ ಅನಿಶ್ಚಿತತೆ, ದುರ್ಬಲ ಡಾಲರ್, ಬಡ್ಡಿದರ ಕಡಿತ ಮತ್ತು ಹಣದುಬ್ಬರ ಸೇರಿದಂತೆ ಮುಂತಾದ ಅಂಶಗಳು ಚಿನ್ನದ ಬೆಲೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿವೆ.
ಇದನ್ನೂ ಓದಿ: ವೈದ್ಯರಿಂದ ಸಿಗದ ಪರಿಹಾರ: ಯೂಟ್ಯೂಬ್ ನೋಡಿ ತಾನೇ ಆಪರೇಷನ್ ಮಾಡಿಕೊಂಡ ವ್ಯಕ್ತಿ! ನಂತರ ನಡೆದಿದ್ದಿಷ್ಟು… YouTube
ಈ ವರ್ಷ ಇಲ್ಲಿಯವರೆಗೆ, ಭಾರತೀಯ ದರವು 10 ಗ್ರಾಂ ಚಿನ್ನ ಶೇ.17ರಷ್ಟು ಏರಿಕೆಯಾಗಿ 88,946 ರೂ.ಗಳಿಗೆ ತಲುಪಿದೆ. ರೂಪಾಯಿಯ ದುರ್ಬಲತೆಯಿಂದಾಗಿ (1.3% ರಷ್ಟು ಕಡಿಮೆ) ಹೆಚ್ಚಿನ ಲಾಭಗಳು ಉಂಟಾಗಿವೆ. ಆದಾಗ್ಯೂ, ಆಭರಣಗಳ ಬೇಡಿಕೆಯಲ್ಲಿನ ನಿಧಾನಗತಿಯಿಂದಾಗಿ ದೇಶೀಯ ಚಿನ್ನದ ಲ್ಯಾಂಡ್ ಬೆಲೆ (ವಿದೇಶದಿಂದ ದೇಶೀಯ ಮಾರುಕಟ್ಟೆಗೆ ಚಿನ್ನವನ್ನು ತರುವ ಒಟ್ಟು ವೆಚ್ಚ) ಅಧಿಕವಾಗಿದೆ.
ಈ ತಿಂಗಳು ದೇಶೀಯ ಮತ್ತು ಲ್ಯಾಂಡ್ ಬೆಲೆಗಳ ನಡುವಿನ ವ್ಯತ್ಯಾಸವು ಸರಾಸರಿ 12 ಡಾಲರ್/ಔನ್ಸ್ ಆಗಿದೆ. ಇದು ಫೆಬ್ರವರಿಯಲ್ಲಿನ ಬೆಲೆಗಿಂತ ಕಡಿಮೆಯಾಗಿದೆ (17/ಔನ್ಸ್). 2025ರಲ್ಲಿ ಇಲ್ಲಿಯವರೆಗೆ ಚಿನ್ನವು ಶೇ.13 ರಷ್ಟು ಏರಿಕೆ ಕಂಡಿದೆ. ದೇಶೀಯ ಷೇರುಗಳು ನಷ್ಟ ಅನುಭವಿಸಿದ್ದರೂ, ಬಾಂಡ್‌ಗಳು ಮತ್ತು ಬ್ಯಾಂಕ್ ಠೇವಣಿಗಳ ಲಾಭಕ್ಕಿಂತ ಇದು ಹೆಚ್ಚಿನ ಲಾಭ ಕಂಡಿದೆ. ಹೂಡಿಕೆದಾರರು ಚಿನ್ನದಲ್ಲಿ ಹೇಗೆ ಕಾರ್ಯತಂತ್ರದಿಂದ ಹೂಡಿಕೆ ಮಾಡುತ್ತಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ.
ಇದನ್ನೂ ಓದಿ: ಅದು ನನ್ನ ಕೈಲಿಲ್ಲ, RCBಯಿಂದ ದೂರವಿರುವುದು ನೋವುಂಟು ಮಾಡಿದೆ ಆದರೆ ಗಿಲ್… ಸಿರಾಜ್ ಅಚ್ಚರಿಯ ಹೇಳಿಕೆ! Mohammed Siraj
ಹೆಚ್ಚಿನ ಬೆಲೆಗಳಿಂದಾಗಿ, ಆಭರಣ ಖರೀದಿಗಳು ಪಾತಾಳ ಕಂಡಿದೆ. ಗೋಲ್ಡ್ ಖರೀದಿಗಳನ್ನು ಹೆಚ್ಚಾಗಿ ಹಾಗೂ ಮುಖ್ಯವಾಗಿ ಮದುವೆ, ಎಂಗೇಜ್ಮೆಂಟ್ ಆಚರಣೆಗಳ ಸಮಯದಲ್ಲಿ ಮಾತ್ರ ಮಾಡಲಾಗುತ್ತಿದೆ. ವರ್ಷಾಂತ್ಯದ ಪಾವತಿಗಳು ಮತ್ತು ತೆರಿಗೆ ಉಳಿತಾಯ ಹೂಡಿಕೆಗಳು ವೆಚ್ಚಗಳನ್ನು ನಿಯಂತ್ರಿಸುತ್ತಿವೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಚಿನ್ನದ ಬೇಡಿಕೆ ಕುಸಿದಿದೆ. ಇದರ ಮಧ್ಯೆ ಗ್ರಾಹಕರು ಚಿನ್ನದ ಬೆಲೆಯಲ್ಲಿ ದಿಢೀರ್ ಹಾಗೂ ಹೆಚ್ಚಿನ ಕುಸಿತಕ್ಕೆ ಕಾಯತೊಡಗಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಇದು ಸಾಧ್ಯವಾಗುತ್ತಿಲ್ಲ.
ಚಿನ್ನದ ಬೆಲೆಗಳ ಏರಿಕೆ ಹಳೆಯ ಚಿನ್ನದ ಮಾರಾಟಕ್ಕೆ ಕಾರಣವಾಗುತ್ತಿದೆ. ಚಿಲ್ಲರೆ ವ್ಯಾಪಾರಿಗಳು ಕೂಡ ಅದನ್ನೇ ಹೇಳುತ್ತಿದ್ದಾರೆ. ಅಲ್ಲದೆ, ಚಿನ್ನದ ಆಭರಣಗಳ ಮೇಲಿನ ಸಾಲಗಳು ಗಮನಾರ್ಹವಾಗಿ ಹೆಚ್ಚಿವೆ. ಜನವರಿ ಅಂತ್ಯದ ವೇಳೆಗೆ, ವಾಣಿಜ್ಯ ಬ್ಯಾಂಕುಗಳ ಮೂಲಕ ಚಿನ್ನದ ಸಾಲಗಳು ವಾರ್ಷಿಕ ಆಧಾರದ ಮೇಲೆ ಶೇ. 77 ರಷ್ಟು ಹೆಚ್ಚಾಗಿದೆ. ಎಎಂಎಫ್‌ಐ ಪ್ರಕಾರ, ಫೆಬ್ರವರಿಯಲ್ಲಿ ಚಿನ್ನದ ಇಟಿಎಫ್‌ಗಳಲ್ಲಿನ ಹೂಡಿಕೆಗಳು ಹೆಚ್ಚಿವೆ. ಫೆಬ್ರವರಿಯಲ್ಲಿ ಆರ್‌ಬಿಐ ತಾತ್ಕಾಲಿಕವಾಗಿ ಚಿನ್ನದ ಖರೀದಿಯನ್ನು ಸ್ಥಗಿತಗೊಳಿಸಿದೆ.
2024ರ ಆರಂಭದಿಂದಲೂ ಆರ್‌ಬಿಐ ಚಿನ್ನದ ಮೀಸಲು ಪ್ರಮಾಣವನ್ನು ನಿರಂತರವಾಗಿ ಹೆಚ್ಚಿಸುತ್ತಿದೆ. ಫೆಬ್ರವರಿಯಲ್ಲಿ ಚಿನ್ನದ ಮೀಸಲು 879 ಟನ್‌ಗಳಲ್ಲಿ ಸ್ಥಿರವಾಗಿದ್ದರೂ, ಒಟ್ಟು ವಿದೇಶೀ ವಿನಿಮಯ ಮೀಸಲುಗಳಲ್ಲಿ ಚಿನ್ನದ ಪಾಲು 11.5%ಕ್ಕೆ ಏರಿದೆ, ಇದು ಇತಿಹಾಸದಲ್ಲಿಯೇ ಅತ್ಯುನ್ನತ ಮಟ್ಟವಾಗಿದೆ. ಫೆಬ್ರವರಿಯಲ್ಲಿ ಚಿನ್ನದ ಆಮದು ಮಾರ್ಚ್ 2024ರ ನಂತರದ ಕನಿಷ್ಠ ಮಟ್ಟವನ್ನು ತಲುಪಿದ್ದು, ನವೆಂಬರ್‌ನಲ್ಲಿ ಗರಿಷ್ಠ ಮಟ್ಟದಿಂದ ಶೇ.63ರಷ್ಟು ಕಡಿಮೆಯಾಗಿದೆ.
ಇನ್ನು ಫೆಬ್ರವರಿಯಲ್ಲಿ ಚಿನ್ನದ ಆಮದು ಬಿಲ್ 2.3 ಬಿಲಿಯನ್ ಡಾಲರ್ಗೆ ತಲುಪಿದೆ. ಚಿನ್ನದ ಬೆಲೆ ಏರಿಕೆಯು ಭಾರತೀಯ ಮಾರುಕಟ್ಟೆಯ ಮೇಲೆ ಹಲವಾರು ರೀತಿಯಲ್ಲಿ ಪರಿಣಾಮ ಬೀರುತ್ತಿದೆ. ಹೂಡಿಕೆದಾರರ ಆಸಕ್ತಿ ಹೆಚ್ಚುತ್ತಿರುವಾಗ, ಆಭರಣಗಳ ಖರೀದಿಗಳು ಮಂದಗತಿಯನ್ನು ಕಂಡಿವೆ,(ಏಜೆನ್ಸೀಸ್).