ನವದೆಹಲಿ: ಕರೊನಾ ಲಸಿಕೆ ವಿತರಣೆಗೆ ದೇಶ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾರಂಭಿಸಿವೆ. ಇನ್ನು ಕೆಲ ವಾರದಲ್ಲಿಯೇ ದೇಶದ ಜನರಿಗತೆ ಲಸಿಕೆ ಲಭ್ಯವಾಗುವ ಸಾಧ್ಯತೆಯಿದ್ದು ಅದಕ್ಕೆಂದು ಲಸಿಕೆ ವಿತರಣೆ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಇಂದು ಬಿಡುಗಡೆ ಮಾಡಿದೆ.
ಮಾರ್ಗಸೂಚಿಯಲ್ಲಿ ಸೂಚಿಸಿರುವ ಪ್ರಕಾರ, ಲಸಿಕೆ ಪಡೆಯುವ ಸಾರ್ವಜನಿಕರು ವೋಟರ್ ಐಟಿ/ ಆಧಾರ್ ಕಾರ್ಡ್/ ಡ್ರೈವಿಂಗ್ ಲೈಸೆನ್ಸ್/ ಪಿಂಚಣಿ ದಾಖಲೆ/ ಪಾಸ್ಪೋರ್ಟ್ (ಸರ್ಕಾರದಿಂದ ನೀಡಲಾಗುವ 12 ದಾಖಲೆಗಳಲ್ಲಿ ಯಾವುದಾದರೂ ಒಂದು) ದಾಖಲೆ ನೀಡುವುದು ಕಡ್ಡಾಯ. ಮುಂಚಿತವಾಗಿಯೇ ನೋಂದಣಿಯಾಗಿರುವವರಿಗೆ ಮಾತ್ರವೇ ಲಸಿಕೆ ನೀಡಲಾಗುವುದು. ಸ್ಥಳದಲ್ಲಿಯೇ ನೋಂದಣಿಯಾಗುವ ಅವಕಾಶ ಇರುವುದಿಲ್ಲ.
ಉಳಿದಂತೆ ಮಾರ್ಗಸೂಚಿಯಲ್ಲಿರುವ ಕೆಲವು ಮುಖ್ಯ ಅಂಶಗಳು ಈ ಕೆಳಗಿನಂತಿವೆ:
* ಪ್ರತಿ ಅವಧಿಯಲ್ಲಿ 200 ಜನರಿಗೆ ಮಾತ್ರವೇ ಲಸಿಕೆ ನೀಡಲು ಅವಕಾಶ
* ಲಸಿಕೆ ಪಡೆದವರನ್ನು ಅರ್ಧ ಗಂಟೆ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿಡಬೇಕು
* ಲಸಿಕೆ ವಿತರಣಾ ತಂಡವು ಐದು ಸದಸ್ಯರನ್ನು ಒಳಗೊಂಡಿರುತ್ತದೆ
* ಲಸಿಗೆ ಪಡೆಯಲು ನೋಂದಣಿಯಾದವರನ್ನು ಗುರುತಿಸಲು ಕರೊನಾ ಲಸಿಕೆ ಇಂಟೆಲಿಜೆನ್ಸ್ ನೆಟ್ವರ್ಕ್ (Co-WIN) ಸಿಸ್ಟಮ್ ಬಳಸಲಾಗುವುದು
* ಉತ್ಪಾದನಾ ಕೇಂದ್ರದಿಂದ ಜಿಲ್ಲೆಗಳಿಗೆ ಲಸಿಕೆ ಸ್ಥಳಾಂತರಿಸುವುದು ಆಯಾ ರಾಜ್ಯ ಸರ್ಕಾರಗಳ ಜವಾಬ್ದಾರಿ
* ಲಸಿಕೆಯನ್ನು ಸೂಕ್ತ ಮುನ್ನೆಚ್ಚರಿಕೆಗಳೊಂದಿಗೆ ಎಚ್ಚರಿಕೆಯಿಂದ ಸ್ಥಳಾಂತರಿಬೇಕು
ದೇಶದಲ್ಲಿ ವೈದ್ಯಕೀಯ ವಲಯ, ಮುಖ್ಯಭೂಮಿಕೆಯಲ್ಲಿ ಕೆಲಸ ಮಾಡುತ್ತಿರುವವರು ಮತ್ತು 50 ವರ್ಷ ಮೇಲ್ಪಟ್ಟ 30 ಕೋಟಿ ಜನರನ್ನು ಗುರುತಿಸಲಾಗಿದ್ದು, ಅವರಿಗೆ ಮೊದಲನೇ ಹಂತದಲ್ಲಿ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಈ ಹಿಂದೆಯೇ ತಿಳಿಸಿದೆ. (ಏಜೆನ್ಸೀಸ್)