ನ್ಯೂಸ್

ಚಾರ್ಲ್ಸ್​ ಕಿಂಗ್​, ಕ್ವೀನ್​ ಕ್ಯಾಮಿಲಾಗೆ ಪಟ್ಟಾಭಿಷೇಕ; ಬಕಿಂಗ್​ಹ್ಯಾಂ ಅರಮನೆಯಲ್ಲಿ ಸಂಭ್ರಮ

ನವದೆಹಲಿ: ಯುನೈಟೆಡ್​ ಕಿಂಗ್​ಡಮ್​ನಲ್ಲಿ ಬಹಳ ವರ್ಷಗಳ ಬಳಿಕ ಮತ್ತೆ ವಿಶೇಷವಾದ ಸಂಭ್ರಮ ಮನೆ ಮಾಡಿದೆ. ಕಿಂಗ್ ಚಾರ್ಲ್ಸ್​ ಹಾಗೂ ಕ್ವೀನ್​ ಕ್ಯಾಮಿಲಾ ಪಟ್ಟಾಭಿಷೇಕ ಈ ಸಂಭ್ರಮಕ್ಕೆ ಕಾರಣವಾಗಿದೆ.

ಕಿಂಗ್ ಚಾರ್ಲ್ಸ್ ಹಾಗೂ ಕ್ವೀನ್ ಕ್ಯಾಮಿಲಾ ಇಬ್ಬರಿಗೂ ಕಿರೀಟಧಾರಣೆ ಮಾಡುವ ಮೂಲಕ ಈ ಪಟ್ಟಾಭಿಷೇಕ ನೆರವೇರಿದೆ. ಕಿರೀಟಧಾರಣೆ ನಡೆಯುತ್ತಿದ್ದಂತೆ 'ಗಾಡ್ ಸೇವ್​ ದ ಕಿಂಗ್' ಎಂಬ ಉದ್ಘೋಷ ವೆಸ್ಟ್​ಮಿನಿಸ್ಟರ್​ ಅಬೆಯ ಒಳಹೊರಗೂ ಮೇಳೈಸಿತು.

ಯುಕೆಯಲ್ಲಿನ ಹಲವೆಡೆ ಗುಂಡು ಹಾರಿಸಿ, ಅಬೆಯ ಘಂಟಾಘೋಷಗಳೊಂದಿಗೆ ಸಹಸ್ರಾರು ಜನರ ಪಾಲ್ಗೊಳ್ಳುವಿಕೆಯಲ್ಲಿ ಈ ಸಂಭ್ರಮ ನೆರವೇರಿತು. ಪಟ್ಟಾಭಿಷೇಕ ನೆರವೇರುತ್ತಿದ್ದಂತೆ ಕಿರೀಟಧಾರಣೆಗೆ ಒಳಗಾದ ಕಿಂಗ್​ ಚಾರ್ಲ್ಸ್ ಮತ್ತು ಕ್ವೀನ್ ಕ್ಯಾಮಿಲಾ ಗೋಲ್ಡ್​ ಸ್ಟೇಟ್ ಕೋಚ್​ನಲ್ಲಿನ ಬಕಿಂಗ್​ಹ್ಯಾಂ ಪ್ಯಾಲೇಸ್​ನತ್ತ ಮೆರವಣಿಗೆಯಲ್ಲಿ ಸಾಗಿದರು. ಸುಮಾರು 2,300 ಜನರ ಸಮ್ಮುಖದಲ್ಲಿ ನಡೆದ ಈ ಸಮಾರಂಭದಲ್ಲಿ ಹಲವಾರು ಗಣ್ಯರು ಪಾಲ್ಗೊಂಡಿದ್ದರು.