ನ್ಯೂಸ್

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜೈನಮುನಿ ಹತ್ಯೆ ರೀತಿಯ ಪ್ರಕರಣ ಹೊಸತಲ್ಲ: ಮಾಜಿ ಸಚಿವ ಸಿ.ಸಿ. ಪಾಟೀಲ

ಗದಗ: ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಸಿ.ಸಿ. ಪಾಟೀಲ ಹೇಳಿಕೆ ನೀಡಿದ್ದು ಕಾಂಗ್ರೆಸ್​ ಪಕ್ಷವನ್ನು ಟೀಕಿಸಿದ್ದಾರೆ.

ಗದಗನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಸಿ.ಸಿ‌. ಪಾಟೀಲ" ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಇದು ಮೊದಲೇನಲ್ಲ. ಈ‌ ಮೊದಲು ಕಾಂಗ್ರೆಸ್ ಸರ್ಕಾರ ಇದ್ದಾಗ ಈ ರೀತಿ ಘಟನೆಗಳು ಜರುಗಿವೆ.

ಪ್ರವೀಣ ನೆಟ್ಟಾರು ಹತ್ಯೆ ಏನಾಯಿತು. ಕೇರಳದಿಂದ ನಾಲ್ಕೈದು ಸಾವಿರ‌ ಜನ ಹೇಗೆ ಬಂದ್ರು? ಮೂಕಪ್ರೇಕ್ಷಕರಾಗಿ ಪೊಲೀಸರು ಹೇಗೆ‌ ಸುಮ್ಮನಿದ್ದರು? ಈ ರೀತಿಯ‌ ಘಟನೆಗಳು ಮೊದಲೇನಲ್ಲ

ಈ‌ ಸರ್ಕಾರದ ಅವಧಿಯಲ್ಲಿ ಇನ್ನು ನಿರಂತರವಾಗಿ ಈ ರೀತಿ ಘಟನೆಗಳು ನಡೆಯುತ್ತವೆ. ಇಂತಹ ಘಟನೆಗಳಲ್ಲಿ ನಿಜವಾದ ಆರೋಪಿಗಳನ್ನು ಕಾಂಗ್ರೆಸ್ ಸರ್ಕಾರ ರಕ್ಷಣೆ ಮಾಡಿಯೇ ಮಾಡುತ್ತದೆ" ಎಂದಿದ್ದಾರೆ.

ಈ ಸಂದರ್ಭ ಅಮರ್, ಅಕ್ಬರ್, ಅಂತೋನಿ‌ ಸಿನಿಮಾ ಉದಾಹರಣೆ ಕೊಟ್ಟ ಸಚಿವರು "ಅಮರ್ ಸಾಯುತ್ತಾನೆ...ಅಕ್ಬರ್, ಮತ್ತು ಅಂತೋನಿ ರಾಜ್ಯದಲ್ಲಿ ದರ್ಬಾರ್ ಶುರು‌ಮಾಡಿದ್ರು. ಅಮರ್ ಇದ್ದವರು ತಣ್ಣಗೆ ಮನೇಲಿ ಕೂರೋದು ಚಲೋ‌" ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.