More

    ಹಳೆ ಚಾಳಿ ಮುಂದುವರೆಸಿದ ಪಾಕಿಸ್ತಾನ; ಭಾರತ ಏಷ್ಯಾ ಕಪ್​ನಲ್ಲಿ ಭಾಗವಹಿಸಲು ಬರದಿದ್ರೆ….

    ನವದೆಹಲಿ: ಇದೀಗ ಹಳೆಯ ಚಾಳಿಯನ್ನೇ ಪಾಕಿಸ್ತಾನ ಮುಂದುವರೆಸಿದ್ದು, ಭಾರತ ತಂಡ ಪಾಕಿಸ್ತಾನದಲ್ಲಿ ಏಷ್ಯಾಕಪ್​ ಆಡಲು ಬರದಿದ್ದಲ್ಲಿ, ಪಾಕ್ ತಂಡ ಭಾರತದಲ್ಲಿ ವಿಶ್ವಕಪ್ ಆಡುವುದಿಲ್ಲ ಎಂದಿದೆ.

    ಈ ಹಿಂದೆ ಭಾರತ, ಸುರಕ್ಷತಾ ಕಾರಣಗಳಿಗೆ ಕ್ರಿಕೆಟ್ ಆಡಲು ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂದು ಬಿಸಿಸಿಐ ಮುಖ್ಯಸ್ಥ ಜೈ ಷಾ ಹೇಳಿಕೆ ನೀಡಿದ್ದರು. ಆಗಲೂ, ಪಾಕಿಸ್ತಾನ ವಿಶ್ವಕಪ್​ನಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿಕೆ ನೀಡಿತ್ತು.

    ಇದನ್ನೂ ಓದಿ: ಟೀಮ್ ಇಂಡಿಯಾದ ತವರು ಋತುವಿಗೆ ಮುನ್ನ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿಸುದ್ದಿ ನೀಡಿದ ಬಿಸಿಸಿಐ

    “ಭಾರತ ತಂಡ, ಏಷ್ಯಾಕಪ್‌ ಆಡಲು ಪಾಕ್​ ಭೇಟಿಯನ್ನು ತಪ್ಪಿಸಿದರೆ, 2023 ರಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ನಿಂದ ತನ್ನ ದೇಶವು ಹಿಂದೆ ಸರಿಯಲಿದೆ” ಎಂದು ಪಾಕಿಸ್ತಾನದ ಕ್ರೀಡಾ ಉಸ್ತುವಾರಿ ಸಚಿವ ಎಹ್ಸಾನ್ ಮಜಾರಿ ಹೇಳಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಮಜಾರಿ, “ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನನ್ನ ಸಚಿವಾಲಯದ ಅಡಿಯಲ್ಲಿ ಬರುವುದರಿಂದ ನನ್ನ ವೈಯಕ್ತಿಕ ಅಭಿಪ್ರಾಯ ಏನೆಂದರೆ, ಭಾರತ ಏಷ್ಯಾಕಪ್ ಪಂದ್ಯಗಳನ್ನು ತಟಸ್ಥ ದೇಶದಲ್ಲಿ ಆಡಬೇಕೆಂದು ಒತ್ತಾಯಿಸಿದರೆ, ನಾವು ಕೂಡ ವಿಶ್ವಕಪ್​ ಪಂದ್ಯಗಳನ್ನು ತಟಸ್ಥ ಮೈದಾನದಲ್ಲಿ ಆಟವಾಡಲು ಒತ್ತಾಯಿಸುತ್ತೇವೆ” ಎಂದಿದ್ದಾರೆ.

    ಇದನ್ನೂ ಓದಿ: ವಿಶ್ವಕಪ್​ ವೇಳಾಪಟ್ಟಿ ಪ್ರಕಟಗೊಂಡರೂ ಮುಗಿಯದ ಪಾಕಿಸ್ತಾನದ ತಗಾದೆ!

    ಏಷ್ಯಾಕಪ್ ವೇಳಾಪಟ್ಟಿ ಇನ್ನೂ ಹೊರಬಿದ್ದಿಲ್ಲವಾದರೂ, ಪಂದ್ತವನ್ನು ಪಾಕಿಸ್ತಾನ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲು ಎಸಿಸಿಯಲ್ಲಿ ಒಮ್ಮತವಿದೆ ಎಂದು ತಿಳಿದುಬಂದಿದೆ. ಭಾರತ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡುವ ನಿರೀಕ್ಷೆಯಿದೆ. ಆದಾಗ್ಯೂ, ಮಜಾರಿ ‘ನಾವು ಈ ಹೈಬ್ರಿಡ್ ಮಾದರಿ’ ಪರವಾಗಿಲ್ಲ ಎಂದು ಹೇಳಿದರು. “ಪಾಕಿಸ್ತಾನವು ಆತಿಥೇಯ ದೇಶವಾಗಿದೆ, ಪಾಕಿಸ್ತಾನದಲ್ಲಿ ಎಲ್ಲಾ ಪಂದ್ಯಗಳನ್ನು ನಡೆಸುವ ಹಕ್ಕು ನಮಗಿದೆ. ಕ್ರಿಕೆಟ್ ಪ್ರೇಮಿಗಳು ಬಯಸಿದ್ದು ಅದನ್ನೇ, ನನಗೆ ಹೈಬ್ರಿಡ್ ಮಾಡೆಲ್ ಬೇಡ,” ಎಂದಿದ್ದಾರೆ.

    ಉಭಯ ದೇಶಗಳ ನಡುವೆ ಕ್ರಿಕೆಟ್ ಪ್ರವಾಸಗಳನ್ನು ಪುನರಾರಂಭಿಸುವಂತೆ ಮಜಾರಿ ಮನವಿ ಮಾಡಿದರು. “ಇದು ಟಿವಿಯಲ್ಲಿ ಅತಿ ಹೆಚ್ಚು ವೀಕ್ಷಿಸಿದ ಕ್ರಿಕೆಟ್ ಆಟಗಳಲ್ಲಿ ಒಂದಾಗಿದೆ. ನಮಗೆ ಆರೋಗ್ಯಕರ ಕ್ರಿಕೆಟ್ ಆಡಬೇಕು. ನಾವು ಭಾರತದಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತೇವೆ ಎಂದು ಅವರು ಹೇಳಿದರು.

    ಇದನ್ನೂ ಓದಿ: World cup 2023: ವಿಶ್ವಕಪ್​ ಆಡಲು ಪಾಕಿಸ್ತಾನಕ್ಕೆ ಭಾರತದ ಈ 2 ನಗರಗಳು ಮಾತ್ರ ಸುರಕ್ಷಿತವಂತೆ!

    ಏತನ್ಮಧ್ಯೆ, ಐಸಿಸಿ, ಈ ಹಿಂದೆ, ವಿಶ್ವಕಪ್‌ಗಾಗಿ ಭಾರತಕ್ಕೆ ತೆರಳುವಂತೆ ಪಾಕಿಸ್ತಾನವನ್ನು ಒತ್ತಾಯಿಸಿತ್ತು. “ಪಾಕಿಸ್ತಾನವು ಸ್ಪರ್ಧಿಸಲು ಭಾಗವಹಿಸುವ ಒಪ್ಪಂದಕ್ಕೆ ಸಹಿ ಹಾಕಿದೆ ಮತ್ತು ಅವರು ಅಲ್ಲಿ ಇರಬೇಕೆಂದು ನಾವು ನಿರೀಕ್ಷಿಸುತ್ತೇವೆ ಮತ್ತು ಇದಕ್ಕೆ ವಿರುದ್ಧವಾಗಿ ಯಾವುದೇ ಸೂಚನೆಗಳನ್ನು ಹೊಂದಿಲ್ಲ” ಎಂದು ಐಸಿಸಿ ಹೇಳಿಕೆ. “ಎಲ್ಲಾ ಸದಸ್ಯರು ತಮ್ಮ ದೇಶದ ನಿಯಮಗಳು ಮತ್ತು ಕಾನೂನುಗಳಿಗೆ ಬದ್ಧರಾಗಿರಬೇಕು ಮತ್ತು ನಾವು ಅದನ್ನು ಗೌರವಿಸುತ್ತೇವೆ. ಆದರೆ ಪುರುಷರ ಕ್ರಿಕೆಟ್ ವಿಶ್ವಕಪ್‌ಗಾಗಿ ಪಾಕಿಸ್ತಾನ ಭಾರತಕ್ಕೆ ಬರಲಿದೆ ಎಂಬ ವಿಶ್ವಾಸ ನಮಗಿದೆ” ಎಂದು ಮಜಾರಿ ಹೇಳಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts