More

    ವಿಶ್ವಕಪ್​ ವೇಳಾಪಟ್ಟಿ ಪ್ರಕಟಗೊಂಡರೂ ಮುಗಿಯದ ಪಾಕಿಸ್ತಾನದ ತಗಾದೆ!

    ಮುಂಬೈ: ಪಾಕಿಸ್ತಾನ ಕ್ರಿಕೆಟ್​ ಮಂಡಳಿಯ ಆಕ್ಷೇಪದಿಂದಾಗಿ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ ಟೂರ್ನಿಯ ವೇಳಾಪಟ್ಟಿ ಪ್ರಕಟ ವಿಳಂಬಗೊಂಡಿತ್ತು. ಇದೀಗ ಟೂರ್ನಿಗೆ 100 ದಿನಗಳು ಬಾಕಿ ಇರುವಾಗ ಕೊನೆಗೂ ವೇಳಾಪಟ್ಟಿ ಬಿಡುಗಡೆಯಾಗಿದ್ದರೂ, ಪಾಕಿಸ್ತಾನದ ತಗಾದೆ ಮಾತ್ರ ಮುಂದುವರಿದಿದೆ. ಅಕ್ಟೋಬರ್​ 5ರಿಂದ ನಡೆಯಲಿರುವ ಟೂರ್ನಿಯಲ್ಲಿ ಪಾಲ್ಗೊಳ್ಳುವ ಬಗ್ಗೆ “ಗ್ಯಾರಂಟಿ’ಯನ್ನು ನೀಡಲು ಪಾಕಿಸ್ತಾನ ಈಗಲೂ ಹಿಂದೇಟು ಹಾಕುತ್ತಿದೆ.

    “ಭಾರತದಲ್ಲಿ ನಡೆಯಲಿರುವ ವಿಶ್ವಕಪ್​ನಲ್ಲಿ ನಮ್ಮ ಪಾಲ್ಗೊಳ್ಳುವಿಕೆ ಮತ್ತು ಅಹಮದಾಬಾದ್​ನಲ್ಲಿ ಅಕ್ಟೋಬರ್​ 15ರಂದು ಆಡುವ ಬಗ್ಗೆ ಅಥವಾ ಸೆಮಿಫೈನಲ್​ಗೇರಿದರೆ ಮುಂಬೈನಲ್ಲಿ ಆಡುವ ಬಗ್ಗೆ ಸರ್ಕಾರ ಹಸಿರು ನಿಶಾನೆ ತೋರಿದರೆ ಮಾತ್ರ ಸ್ಪಷ್ಟತೆ ಸಿಗಲಿದೆ’ ಎಂದು ಪಾಕಿಸ್ತಾನ ಕ್ರಿಕೆಟ್​ ಮಂಡಳಿಯ ಅಧಿಕಾರಿಗಳು ಮಂಗಳವಾರ ಮುಂಬೈನಲ್ಲಿ ವಿಶ್ವಕಪ್​ ವೇಳಾಪಟ್ಟಿ ಪ್ರಕಟಗೊಂಡ ಬಳಿಕ ತಿಳಿಸಿದ್ದಾರೆ.

    ಪಾಕಿಸ್ತಾನ ತಂಡ ವಿಶ್ವಕಪ್​ನಲ್ಲಿ ಭಾರತ ತಂಡದ ವಿರುದ್ಧ ಅಹಮದಾಬಾದ್​ನಲ್ಲಿ, ಅ್ಘಾನಿಸ್ತಾನದ ವಿರುದ್ಧ ಚೆನ್ನೆ$ನಲ್ಲಿ ಮತ್ತು ಆಸ್ಟ್ರೆಲಿಯಾ ತಂಡದ ವಿರುದ್ಧ ಬೆಂಗಳೂರಿನಲ್ಲಿ ಆಡುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ ಐಸಿಸಿ ಈ ಆಕ್ಷೇಪವನ್ನು ಕಡೆಗಣಿಸಿದ್ದು, ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ತರಲು ನಿರಾಕರಿಸಿದೆ.

    ಪಾಕಿಸ್ತಾನ ತಂಡಕ್ಕೆ ವಿಶ್ವಕಪ್​ನಲ್ಲಿ ಆಡಲು ಭಾರತಕ್ಕೆ ಪ್ರಯಾಣಿಸುವ ಬಗ್ಗೆ ಪಾಕಿಸ್ತಾನದ ಸರ್ಕಾರ ಇನ್ನೂ ಯಾವುದೇ ನಿರ್ದೇಶನ ನೀಡಿಲ್ಲ. ಪಾಕಿಸ್ತಾನದಲ್ಲಿ ಇನ್ನು 60 ದಿನಗಳ ಒಳಗಾಗಿ ಚುನಾವಣೆ ನಡೆಯಲಿದ್ದು, ವಿಶ್ವಕಪ್​ ವೇಳೆ ಹೊಸ ಸರ್ಕಾರ ರಚನೆಯಾಗಲಿದೆ. ಹೀಗಾಗಿ ಹಾಲಿ ಸರ್ಕಾರಕ್ಕಿಂತ ಹೊಸ ಸರ್ಕಾರದ ನಿಲುವೇ ವಿಶ್ವಕಪ್​ನಲ್ಲಿ ಪಾಕ್​ ತಂಡ ಆಡುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎನ್ನಲಾಗಿದೆ. ಈ ನಡುವೆ ಪಾಕಿಸ್ತಾನ ಕ್ರಿಕೆಟ್​ ಮಂಡಳಿಯಲ್ಲೂ ಶ್ರೀ ಹೊಸ ಆಡಳಿತ ಮಂಡಳಿ ಬರಲಿದೆ. ಸದ್ಯ ಪಿಸಿಬಿ ಚುನಾವಣೆ ಜುಲೈ 17ರವರೆಗೆ ಮುಂದೂಡಿಕೆಯಾಗಿದೆ. ಆದರೆ ವಿಶ್ವಕಪ್​ ವೇಳೆ ಪಿಸಿಬಿಯಲ್ಲೂ ಹೊಸ ಆಡಳಿತ ಮಂಡಳಿ ಇರುವುದು ಸ್ಪಷ್ಟ.

    ಬಾಬರ್​ ಅಜಮ್​ ಸಾರಥ್ಯದ ಪಾಕಿಸ್ತಾನ ತಂಡವನ್ನು ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಆಡಲು ಭಾರತಕ್ಕೆ ಕಳುಹಿಸುವ ಬಗ್ಗೆ ಪಿಸಿಬಿ ಈಗಲೂ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದರೂ, ಪಾಕ್​ ತಂಡ ವಿಶ್ವಕಪ್​ನಲ್ಲಿ ಭಾಗವಹಿಸುವ ಬಗ್ಗೆ ಐಸಿಸಿ ವಿಶ್ವಾಸ ವ್ಯಕ್ತಪಡಿಸಿದೆ. ಇನ್ನು ಪಾಕ್​ ತಂಡ ರಾಜಕೀಯ ಕಾರಣಗಳಿಂದಾಗಿ ವಿಶ್ವಕಪ್​ನಲ್ಲಿ ಮುಂಬೈನಲ್ಲಿ ಯಾವುದೇ ಪಂದ್ಯ ಆಡದಂತೆ ವೇಳಾಪಟ್ಟಿ ರೂಪಿಸಲಾಗಿದೆ. 2016ರ ಟಿ20 ವಿಶ್ವಕಪ್​ನಲ್ಲಿ ಕೊನೆಯದಾಗಿ ಪಾಕ್​ ತಂಡ ಭಾರತದಲ್ಲಿ ಆಡಿತ್ತು.

    2011ರಲ್ಲಿ ಸಚಿನ್​ಗಾಗಿ ಗೆದ್ದೆವು, ಈ ಬಾರಿ ಕೊಹ್ಲಿಗಾಗಿ ವಿಶ್ವಕಪ್​ ಗೆಲ್ಲೋಣ ಎಂದ ಸೆಹ್ವಾಗ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts