More

    2011ರಲ್ಲಿ ಸಚಿನ್​ಗಾಗಿ ಗೆದ್ದೆವು, ಈ ಬಾರಿ ಕೊಹ್ಲಿಗಾಗಿ ವಿಶ್ವಕಪ್​ ಗೆಲ್ಲೋಣ ಎಂದ ಸೆಹ್ವಾಗ್​

    ಮುಂಬೈ: ಭಾರತ ತಂಡ 2011ರಲ್ಲಿ ಸಚಿನ್​ ತೆಂಡುಲ್ಕರ್​ಗಾಗಿ ಏಕದಿನ ವಿಶ್ವಕಪ್​ ಗೆಲುವಿನ ಸಂಕಲ್ಪ ಮಾಡಿತ್ತು. ಅದೇ ರೀತಿ ಈ ಬಾರಿ ವಿರಾಟ್​ ಕೊಹ್ಲಿಗಾಗಿ ಭಾರತ ತಂಡ ವಿಶ್ವಕಪ್​ ಗೆಲ್ಲಬೇಕು ಎಂದು ಮಾಜಿ ಬ್ಯಾಟರ್​ ವೀರೇಂದ್ರ ಸೆಹ್ವಾಗ್​ ಹೇಳಿದ್ದಾರೆ.

    “ಕೊಹ್ಲಿ ಈಗ ಭಾರತ ತಂಡದಲ್ಲಿ ಸ್ಥಾನ ಅವರಂಥದ್ದೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಯಾವಾಗಲೂ ತಂಡಕ್ಕೆ ಶೇ. 100ಕ್ಕಿಂತ ಹೆಚ್ಚಿನ ಕೊಡುಗೆ ನೀಡಲು ಬಯಸುತ್ತಾರೆ. ಕೊಹ್ಲಿ ಕೂಡ ಈ ಬಾರಿ ವಿಶ್ವಕಪ್​ ಗೆಲ್ಲಲು ಬಯಸಿದ್ದಾರೆ. ಅವರು ಖಂಡಿತವಾಗಿಯೂ ಈ ನಿಟ್ಟಿನಲ್ಲಿ ಪ್ರಯತ್ನಿಸಲಿದ್ದಾರೆ’ ಎಂದು ಮುಂಬೈನಲ್ಲಿ ನಡೆದ ವಿಶ್ವಕಪ್​ ವೇಳಾಪಟ್ಟಿ ಅನಾವರಣ ಕಾರ್ಯಕ್ರಮದಲ್ಲಿ ಸೆಹ್ವಾಗ್​ ಹೇಳಿದ್ದಾರೆ.

    ವಿಶ್ವಕಪ್​ನಲ್ಲಿ ಅಕ್ಟೋಬರ್​ 15ರಂದು ಪಾಕಿಸ್ತಾನ ವಿರುದ್ಧ ಅಹಮದಾಬಾದ್​ನಲ್ಲಿ ಆಡಲಿರುವ ಭಾರತ ತಂಡ ಗೆಲುವಿನ ನೆಚ್ಚಿನ ತಂಡವೂ ಆಗಿರಲಿದೆ ಎಂದು ಸೆಹ್ವಾಗ್​ ಹೇಳಿದ್ದಾರೆ. “ಭಾರತ ತಂಡ ಒತ್ತಡವನ್ನು ನಿಭಾಯಿಸಬಲ್ಲುದು. ಇದೇ ವೇಳೆ ಪಾಕಿಸ್ತಾನ ತಂಡಕ್ಕೆ ವಿಶ್ವಕಪ್​ನಲ್ಲಿ ಭಾರತ ವಿರುದ್ಧ ಗೆಲ್ಲದ ಒತ್ತಡವಿದೆ. 1990ರಲ್ಲಿ ಭಾರತವೂ ಒತ್ತಡಕ್ಕೆ ಒಳಗಾಗುತ್ತಿತ್ತು. ಆದರೆ 2000ದ ನಂತರ ಭಾರತ ಒತ್ತಡವನ್ನು ನಿಭಾಯಿಸಲು ಕಲಿತಿದೆ’ ಎಂದು ಸೆಹ್ವಾಗ್​ ಹೇಳಿದ್ದಾರೆ. ಭಾರತ, ಇಂಗ್ಲೆಂಡ್​, ಆಸ್ಟ್ರೆಲಿಯಾ ಮತ್ತು ಪಾಕಿಸ್ತಾನ ಟೂರ್ನಿಯಲ್ಲಿ ಉಪಾಂತ್ಯಕ್ಕೇರಬಲ್ಲ ನೆಚ್ಚಿನ ತಂಡಗಳು ಎಂದು ಸೆಹ್ವಾಗ್​ ಹೆಸರಿಸಿದ್ದಾರೆ.

    ಸಮಾರಂಭದಲ್ಲಿ ಹಾಜರಿದ್ದ ಶ್ರೀಲಂಕಾದ ಸ್ಪಿನ್​ ದಿಗ್ಗಜ ಮುತ್ತಯ್ಯ ಮುರಳೀಧರನ್​, ವಿಶ್ವಕಪ್​ನಲ್ಲಿ ಸ್ಪಿನ್ನರ್​ಗಳು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದಿದ್ದಾರೆ. ಭಾರತ-ಇಂಗ್ಲೆಂಡ್​ ನಡುವಿನ ಪಂದ್ಯದ ಬಗ್ಗೆ ನನಗೆ ಕುತೂಹಲವಿದೆ. ತವರಿನ ವಾತಾವರಣದ ಅನುಕೂಲ ಹೊಂದಿರುವ ಭಾರತ ಟೂರ್ನಿಯ ನೆಚ್ಚಿನ ತಂಡವಾಗಿದೆ ಎಂದ ಮುರಳೀಧರನ್​, ಇಂಗ್ಲೆಂಡ್​ನ ಆದಿಲ್​ ರಶೀದ್​ ಟೂರ್ನಿಯಲ್ಲಿ ಅತ್ಯಂತ ಯಶ ಕಾಣಲಿರುವ ಬೌಲರ್​ ಎಂದು ಭವಿಷ್ಯ ನುಡಿದಿದ್ದಾರೆ.

    ಏಕದಿನ ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ; ಇಲ್ಲಿದೆ ಜಾಗತಿಕ ಕ್ರಿಕೆಟ್ ಟೂರ್ನಿ ವಿವರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts