More

    DRDO ಅಧಿಕಾರಿಯನ್ನು ಹನಿಟ್ರ್ಯಾಪ್​ ಮೂಲಕ ಬಳಸಿಕೊಂಡ ಪಾಕಿಸ್ತಾನಿ ಮಹಿಳೆ ಯಾರು? ಹೀಗಿತ್ತು ಆಕೆಯ ಟ್ರೈನಿಂಗ್!

    ನವದೆಹಲಿ: ಪಾಕಿಸ್ತಾನದ ಗೂಢಚಾರರಿಗೆ ದೇಶದ ಕ್ಷಿಪಣಿ ರಹಸ್ಯಗಳನ್ನು ಸೋರಿಕೆ ಮಾಡಿದ್ದಕ್ಕಾಗಿ DRDO ವಿಜ್ಞಾನಿ ಪ್ರದೀಪ್ ಕುರುಲ್ಕರ್ ಅವರನ್ನು ಬೇಹುಗಾರಿಕೆ ಆರೋಪದಡಿ ಬಂಧಿಸಲಾಗಿತ್ತು. ಈ ಘಟನೆಯಿಂದಾಗಿ ಕಳೆದ ಕೆಲವು ವಾರಗಳಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ನಲ್ಲಿ ದೊಡ್ಡ ಕೋಲಾಹಲ ಉಂಟಾಗಿದೆ.

    DRDO ವಿಜ್ಞಾನಿ ಪ್ರದೀಪ್ ಕುರುಲ್ಕರ್ ಅವರನ್ನು ಭಾರತೀಯ ರಕ್ಷಣಾ ಪಡೆಗಳ ಬಗ್ಗೆ ರಹಸ್ಯಗಳನ್ನು ಹೊರತೆಗೆಯಲು ಹಿಂದೂ ಮಹಿಳೆ ಎಂದು ಪರಿಚಯಿಸಿಕೊಂಡಿದ್ದ ಪಾಕಿಸ್ತಾನಿ ಗುಪ್ತಚರ ಆಪರೇಟಿವ್‌ ಅಶ್ಲೀಲ ದೃಷ್ಯಗಳನ್ನು ಕಳಿಸಿ ತಮ್ಮ ಕಡೆಗೆ ಕುರುಲ್ಕರ್​ರನ್ನು ಆಕರ್ಷಿಸಿದ್ದರು ವರದಿಯಾಗಿದೆ.

    ಇದನ್ನೂ ಓದಿ: ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ರವಾನೆ ಮಾಡುತ್ತಿದ್ದ DRDO ಅಧಿಕಾರಿ ಸೆರೆ!

    ‘ಜಾರಾ ದಾಸ್​ಗುಪ್ತ’ ಎಂಬ ಹೆಸರಿನಿಂದ ತನ್ನೊಂದಿಗೆ ಚಾಟ್ ಮಾಡಿದ ಪಾಕಿಸ್ತಾನಿ ಆಪರೇಟಿವ್​ಗೆ ಭಾರತೀಯ ಕ್ಷಿಪಣಿ ವ್ಯವಸ್ಥೆಯ ಬಗ್ಗೆ ರಹಸ್ಯ ರಕ್ಷಣಾ ಮಾಹಿತಿಯನ್ನು ಬಹಿರಂಗಪಡಿಸಿದ್ದಕ್ಕೆ ಇದೀಗ, ಮುಂಬೈನ ಭಯೋತ್ಪಾದನಾ ನಿಗ್ರಹ ದಳ (ATS) ಪ್ರದೀಪ್ ಕುರುಲ್ಕರ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ.

    ಗೂಢಚರ್ಯೆ ಆರೋಪದ ಮೇಲೆ ಮೇ 3ರಂದು ಪ್ರದೀಪ್ ಕುರುಲ್ಕರ್ ಅವರನ್ನು ಬಂಧಿಸಲಾಗಿದ್ದು, ಇದೀಗ ಪಾಕಿಸ್ತಾನಿ ಗೂಢಚಾರಿ ಜಾರಾಳನ್ನು ಭೇಟಿ ಮಾಡಿದ್ದು ಹೇಗೆ ಮತ್ತು ರಾಷ್ಟ್ರೀಯ ರಹಸ್ಯಗಳನ್ನು ಸೋರಿಕೆ ಮಾಡಲು ಹೇಗೆ ಆಮಿಷ ಒಡ್ಡಲಾಯಿತು ಎಂಬ ವಿವರಗಳನ್ನು ಬಹಿರಂಗಪಡಿಸಿದ್ದಾರೆ.

    ಯಾರು ಈ ಪಾಕಿಸ್ತಾನಿ ಗೂಢಚಾರಿ ‘ಜಾರಾ ದಾಸ್‌ಗುಪ್ತ’ ?

    ತನ್ನನ್ನು ತಾನು ಯುಕೆ ಮೂಲದ ಸಾಫ್ಟ್‌ ವೇರ್ ಇಂಜಿನಿಯರ್ ಎಂದು ಪರಿಚಯಿಸಿಕೊಂಡ ‘ಜಾರಾ ದಾಸ್‌ಗುಪ್ತಾ’ ಎಂಬ ಮಹಿಳೆಯೊಂದಿಗೆ ಮಾತನಾಡಲು ಪ್ರಾರಂಭಿಸಿದ್ದಾಗಿ ಕುರುಲ್ಕರ್ ಬಹಿರಂಗಪಡಿಸಿದ್ದಾರೆ. ಅವರಿಬ್ಬರು ವಾಟ್ಸ್​ಆ್ಯಪ್​, ಫೋನ್​ಕಾಲ್​ ಮತ್ತು ವೀಡಿಯೊ ಕರೆಗಳ ಮೂಲಕ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.

    ಜಾರಾ ದಾಸ್‌ಗುಪ್ತಾ, ಡಿಆರ್‌ಡಿಒ ವಿಜ್ಞಾನಿಗೆ ಅಶ್ಲೀಲ ವೀಡಿಯೊಗಳು ಮತ್ತು ಫೋಟೋಗಳನ್ನು ಕಳುಹಿಸುತ್ತಿದ್ದು ಈ ಮೂಲಕ ಇಬ್ಬರೂ ಸಂಬಂಧವನ್ನು ಬೆಳೆಸಿಕೊಂಡರು. ನಂತರ ಕುರುಲ್ಕರ್ ಅವರು ತಮ್ಮ ಕ್ಷಿಪಣಿ ಯೋಜನೆ ಮತ್ತು ರಕ್ಷಣಾ ವ್ಯವಸ್ಥೆಗಳ ಬಗ್ಗೆ ರಹಸ್ಯ ಮಾಹಿತಿಯನ್ನು ಹಂಚಿಕೊಂಡರು.

    ಇದನ್ನೂ ಓದಿ: ಪಾಕಿಸ್ತಾನದ ಮಹಿಳೆಗೆ ರಹಸ್ಯ ಮಾಹಿತಿ ನೀಡಿದ್ದ DRDO ಅಧಿಕಾರಿ ಅಂದರ್

    ತನಿಖೆಯ ವೇಳೆ, ಅಶ್ಲೀಲ ಚಾಟ್‌ಗಳ ಐಪಿ ವಿಳಾಸ ಪಾಕಿಸ್ತಾನ ಮೂಲದ್ದು ಎಂದು ಪತ್ತೆಹಚ್ಚಲಾಗಿದೆ. ಬ್ರಹ್ಮೋಸ್ ಲಾಂಚರ್, ಡ್ರೋನ್, ಯುಸಿವಿ, ಅಗ್ನಿ ಕ್ಷಿಪಣಿ ಲಾಂಚರ್ ಮತ್ತು ಮಿಲಿಟರಿ ಬ್ರಿಡ್ಡಿಂಗ್ ಸಿಸ್ಟಮ್ ಸೇರಿದಂತೆ ಇತರ ವಿಷಯಗಳ ಬಗ್ಗೆ ರಹಸ್ಯ ಮತ್ತು ಸೂಕ್ಷ್ಮ ಮಾಹಿತಿಯನ್ನು ಪಡೆಯಲು ಪಾಕಿಸ್ತಾನಿ ಏಜೆಂಟ್‌ ಪ್ರಯತ್ನಿಸಿದ್ದಾರೆ ಎಂದು ಎಟಿಎಸ್ ಚಾರ್ಜ್ ಶೀಟ್ ಹೇಳಿದೆ.

    ಮಹಿಳಾ ಪಾಕಿಸ್ತಾನಿ ಗೂಢಚಾರರಿಗೆ ಹೇಗೆ ತರಬೇತಿ ನೀಡಲಾಗುತ್ತದೆ?

    ಖಾಸಗಿ ಸುದ್ದಿ ಮಾಧ್ಯಮಗಳ ವರದಿಗಳ ಪ್ರಕಾರ, ಪಾಕಿಸ್ತಾನದಲ್ಲಿರುವ ಮಹಿಳಾ ಗೂಢಚಾರರು ಪಾಕಿಸ್ತಾನಿ ಸೇನೆಯ ಪ್ರಧಾನ ಕಛೇರಿಯಾಗಿರುವ ರಾವಲ್​ಪಿಂಡಿಯ ವಿಶೇಷ ಶಾಲೆಯಲ್ಲಿ ತರಬೇತಿ ಪಡೆದಿದ್ದಾರೆ. ದೈಹಿಕವಾಗಿ ಆಕರ್ಷಕವಾಗಿರುವ ಮಹಿಳೆಯರನ್ನು ಇದಕ್ಕಾಗಿ ಆಯ್ಕೆ ಮಾಡಲಾಗುತ್ತದೆ. ಈ ಮೂಲಕ ಹನಿಟ್ರ್ಯಾಪ್​ಗೆ ಬೀಳಿಸುವ ಮತ್ತು ರಹಸ್ಯಗಳನ್ನು ಹೊರತೆಗೆಯುವ ಅವರಿಗೆ ನಿರ್ದಿಷ್ಟ ತರಬೇತಿ ನೀಡಲಾಗುತ್ತದೆ.

    ಇದನ್ನೂ ಓದಿ: ಇಸ್ರೋ ಮಾಡಿತು ಹೊಸ ಪ್ರಯೋಗ! ಆಟೊಮ್ಯಾಟಿಕ್​ ಲ್ಯಾಂಡಿಂಗ್ ಮಾಡಿದ ರಾಕೆಟ್…

    ಮಾಧ್ಯಮ ವರದಿಗಳ ಪ್ರಕಾರ, ಕೃತಕ ಬುದ್ಧಿಮತ್ತೆಯ ಮೂಲಕ ನಕಲಿ ಆನ್‌ಲೈನ್ ಪ್ರೊಫೈಲ್‌ಗಳನ್ನು ಸೃಷ್ಟಿಸುವ ಮೂಲಕ ಈ ಗೂಢಚಾರರನ್ನು ಹಿಂದಡು ಯುವತಿಯರ ಗುರುತನ್ನು ಪಡೆದುಕೊಳ್ಳುತ್ತಾರೆ. ಅವರು ಭಾರತೀಯ ಸೈನಿಕರೊಂದಿಗೆ ಸಂಪರ್ಕ ಸಾಧಿಸಲು ಫೇಸ್‌ಬುಕ್ ಮತ್ತು ವಾಟ್ಸಾಪ್ ಅನ್ನು ಬಳಸುತ್ತಾರೆ. ಅವರಿಗೆ ‘ಸೆಕ್ಸ್ಟಿಂಗ್’ ತರಬೇತಿಯನ್ನೂ ನೀಡಲಾಗಿರುತ್ತದೆ. ಅವರು ರಕ್ಷಣಾ ರಹಸ್ಯಗಳನ್ನು ಹೊರತೆಗೆಯಲು ಅವರ ಫೋಟೋಗಳನ್ನು ಬಳಸುತ್ತಾರೆ ಎನ್ನಲಾಗಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts