More

    ಪಾಕಿಸ್ತಾನದ ಮಹಿಳೆಗೆ ರಹಸ್ಯ ಮಾಹಿತಿ ನೀಡಿದ್ದ DRDO ಅಧಿಕಾರಿ ಅಂದರ್

    ಬಾಲಸೋರ್ (ಒರಿಸ್ಸಾ): ಪಾಕಿಸ್ತಾನದ ಮಹಿಳೆ ಒಬ್ಬಳಿಗೆ ರಹಸ್ಯ ರಕ್ಷಣಾ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಬಂಧಿತರಾಗಿರುವ DRDO ಅಧಿಕಾರಿಯನ್ನು ಶನಿವಾರ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಬಾಲಸೋರ್ ಎಸ್ಪಿ ಸಾಗರಿಕಾ ನಾಥ ತಿಳಿಸಿದ್ದಾರೆ. ಬಂಧಿತ ಅಧಿಕಾರಿ DRDO ಬಲರಾಮ್ ಡೇ ಎಂದು ಗುರುತಿಸಲಾಗಿದೆ.

    ಘಟನೆಯ ಹೆಚ್ಚಿನ ತನಿಖೆಗಾಗಿ ಬಾಲಸೋರ್ ಪೊಲೀಸರು ಐದು ದಿನಗಳ ಬಂಧನಕ್ಕಾಗಿ ಬಾಲಸೋರ್​ನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ನ್ಯಾಯಾಲಯ ಆತನನ್ನು ನಾಲ್ಕು ದಿನಗಳ ಕಾಲ ರಿಮಾಂಡ್ ಮಾಡಲು ಅನುಮತಿ ನೀಡಿದೆ.

    ಇದನ್ನೂ ಓದಿ: ಕರ್ತವ್ಯನಿರತ ಡಿಆರ್​ಡಿಒ ಸಿಬ್ಬಂದಿ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

    ತನಿಖೆಯ ಕುರಿತು ಮಾತನಾಡಿದ ಎಸ್‌ಪಿ ನಾಥ್​, “ರಿಮಾಂಡ್​ನಲ್ಲಿರುವ ಅಧಿಕಾರಿಯನ್ನು ವಿಚಾರಣೆ ಮಾಡಿದ ನಂತರ ಹೆಚ್ಚಿನ ಮಾಹಿತಿ ಸಿಗುವ ಸಾಧ್ಯತೆಯಿದೆ. ಬಂಧಿತ ಅಧಿಕಾರಿಯಿಂದ ಹಂಚಿಕೊಂಡಿರುವ ಎಲ್ಲಾ ಹಣಕಾಸು ವ್ಯವಹಾರ, ಆಸ್ತಿ ಹಾಗೂ ಇಂಟೆಗ್ರೇಟೆಡ್ ಟೆಸ್ಟ್​ ರೇಂಜ್​ನ (ಐಟಿಆರ್) ವಿವರಗಳನ್ನು ಸಂಗ್ರಹಿಸಲು ಬಾಲಸೋರ್ ಪೊಲೀಸರು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

    ಇದನ್ನೂ ಓದಿ: ಕರ್ತವ್ಯನಿರತ ಡಿಆರ್​ಡಿಒ ಸಿಬ್ಬಂದಿ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

    ಈ ಹಿಂದೆ, ಶುಕ್ರವಾರ ಡಿಆರ್‌ಡಿಒ ಅಧಿಕಾರಿಯನ್ನು ಒಡಿಶಾ ಪೊಲೀಸರು ಪಾಕಿಸ್ತಾನಿ ಮಹಿಳಾ ಗೂಢಚಾರಿಕೆಯೊಂದಿಗೆ ಸುಮಾರು ಒಂದು ವರ್ಷದಿಂದ ರಹಸ್ಯ ರಕ್ಷಣಾ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಬಂಧಿಸಿದ್ದರು. ಕಳೆದ ಒಂದು ತಿಂಗಳಿನಿಂದ ಪೊಲೀಸರು ಈ ಅಧಿಕಾರಿಯ ಚಟುವಟಿಕೆಗಳನ್ನು ಪತ್ತೆ ಹಚ್ಚಿ ಗಮನದಲ್ಲಿಟ್ಟಿದ್ದು ಅವರನ್ನು ಶುಕ್ರವಾರ ಬಂಧಿಸಲಾಗಿದೆ” ಎಂದು ಎಸ್ಪಿ ಹೇಳಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts