More

    ಇಸ್ರೋ ಮಾಡಿತು ಹೊಸ ಪ್ರಯೋಗ! ಆಟೊಮ್ಯಾಟಿಕ್​ ಲ್ಯಾಂಡಿಂಗ್ ಮಾಡಿದ ರಾಕೆಟ್…

    ಚಿತ್ರದುರ್ಗ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಭಾನುವಾರ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ ಪ್ರೋಟೊಟೈಪ್​ನ ಸ್ವಾಯತ್ತ ಲ್ಯಾಂಡಿಂಗ್ ಅಥವಾ ಆಟೊಮ್ಯಾಟಿಕ್​ ಲ್ಯಾಂಡಿಂಗ್​ನ ಪರೀಕ್ಷಾ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿತು.

    RLV LEX ಎಂದು ಕರೆಯಲ್ಪಡುವ ಈ ವಾಹನವನ್ನು ರಕ್ಷಣಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಡಿಆರ್​ಡಿಒ (DRDO), ಮತ್ತು ವಾಯುಪಡೆಯ ಸಹಯೋಗದೊಂದಿಗೆ ಭಾನುವಾರದ ಮುಂಜಾನೆ ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಕುದಾಪುರದ ಏರೋನಾಟಿಕಲ್ ಟೆಸ್ಟ್ ರೇಂಜ್ ನಲ್ಲಿ ನಡೆಸಲಾಯಿತು.

    ಇದನ್ನೂ ಓದಿ: ಇಸ್ರೋದಿಂದ 36 ಒನ್​ವೆಬ್ ಉಪಗ್ರಹ ಉಡಾವಣೆ ಯಶಸ್ವಿ

    ಇಸ್ರೋ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 2016ರ ಮೇ 23 ರಂದು ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ – ತಂತ್ರಜ್ಞಾನ ಪ್ರದರ್ಶಕ (RLV-TD) ನ ಮೊದಲ ಪ್ರಾಯೋಗಿಕ ಕಾರ್ಯಾಚರಣೆಯನ್ನು ನಡೆಸಿತ್ತು. ಈ ಪ್ರಾಯೋಗಿಕ ಕಾರ್ಯಾಚರಣೆಯ ಭಾಗವಾಗಿ ಸ್ವಾಯತ್ತ ನ್ಯಾವಿಗೇಷನ್, ಮಾರ್ಗದರ್ಶನ ಮತ್ತು ನಿಯಂತ್ರಣ ಮತ್ತು ಮರುಬಳಕೆ ಮಾಡಬಹುದಾದ ಥರ್ಮಲ್ ಪ್ರೊಟೆಕ್ಷನ್ ಸಿಸ್ಟಮ್‌ನಂತಹ ನಿರ್ಣಾಯಕ ತಂತ್ರಜ್ಞಾನಗಳನ್ನು ಯಶಸ್ವಿಯಾಗಿ ಪ್ರದರ್ಶಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts