More

    ಇದು ಪೇಂಟಿಂಗ್​ ಅಲ್ಲ! ಏನೆಂದು ತಿಳಿದರೆ ಕಲಾವಿದನಿಗೆ ಸಲಾಮ್ ಹೊಡೆಯೋದು ಗ್ಯಾರೆಂಟಿ…

    ಆನೇಕಲ್: ಈ ಚಿತ್ರವನ್ನು ನೋಡಿದರೆ ಯಾವುದೋ ಒಂದು ಪೇಂಟಿಂಗ್ ನೋಡಿದಂತೆ ಅನಿಸಬಹುದು. ಆದರೆ ಇದನ್ನು ರಂಗೋಲಿ ಎಂದರೆ ನಂಬುತ್ತೀರಾ? ಹೌದು! ಈ ಶ್ರೀರಾಮ ಮತ್ತು ಕೌಸಲ್ಯೆಯ ರಂಗೋಲಿಯಾಗಿದ್ದು ಇದನ್ನು ಖ್ಯಾತ ರಂಗೋಲಿಕಾರ ಅಕ್ಷಯ್​ ಜಾಲಿಹಾಳ್​ ರಚಿಸಿದ್ದಾರೆ.

    ಅಕ್ಷಯ್​ ಜಾಲಿಹಾಳ್​ ಕೈಯಲ್ಲಿ ರಂಗೋಲಿ ಪುಡಿ ನೆಲಕ್ಕೆ ಉದುರಿ ಈ ಚಿತ್ರ ಅತ್ಯದ್ಬುತವಾಗಿ ಮೂಡಿ ಬಂದಿದೆ. ಈ ಚಿತ್ರದಲ್ಲಿ ಬಲರಾಮ ಹಾಗೂ ತಾಯಿ ಕೌಶಲ್ಯ ಪ್ರೀತಿ ವಾತ್ಸಲ್ಯ ವ್ಯಕ್ತಗೊಂಡಿದೆ. ಇದಕ್ಕಾಗಿ ರಂಗೋಲಿಕಾರರು 45ಕ್ಕೂ ಹೆಚ್ಚು ಬಣ್ಣಗಳನ್ನು ಬಳಸಿದ್ದು ಸತತ 13 ಗಂಟೆಗಳ ಕಾಲ ಪರಿಶ್ರಮ ಪಟ್ಟಿದ್ದಾರೆ.

    ಇದು ಪೇಂಟಿಂಗ್​ ಅಲ್ಲ! ಏನೆಂದು ತಿಳಿದರೆ ಕಲಾವಿದನಿಗೆ ಸಲಾಮ್ ಹೊಡೆಯೋದು ಗ್ಯಾರೆಂಟಿ…

    ಜಿಗಣಿಯಲ್ಲಿ ಆಯೋಜನೆ ರಾಮಾಯಣ ಪಾರಾಯಣ ನಾಟಕ ಹರಿಕಥೆ ಕಾರ್ಯಕ್ರಮದ ಭಾಗವಾಗಿ ಈ ಚಿತ್ರವನ್ನು ಬಿಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅಕ್ಷಯ ಜಾಲಿಹಾಳ್ ರಂಗೋಲಿ ಚಿತ್ರ ಎಲ್ಲರ ಗಮನ ಸೆಳೆದಿದೆ.

    ಇದು ಪೇಂಟಿಂಗ್​ ಅಲ್ಲ! ಏನೆಂದು ತಿಳಿದರೆ ಕಲಾವಿದನಿಗೆ ಸಲಾಮ್ ಹೊಡೆಯೋದು ಗ್ಯಾರೆಂಟಿ…

    ಕಲಾವಿದ ಅಕ್ಷಯ್​ ಜಾಲಿಹಾಳ್ ಆನೇಕಲ್ಲಿನ ಕಿತ್ತಗಾನ ಹಳ್ಳಿಯವರಾಗಿದ್ದು ಬೆಂಗಳೂರಿನ ಹಲವೆಡೆ ರಂಗೋಲಿಯ ಮೂಲಕ ಗಮನ ಸೆಳೆಯುತ್ತಿರುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts