ನ್ಯೂಸ್

117 ಮೀ.​​ ಎತ್ತರದಿಂದ ವಿಲ್​ಚೇರ್​ ಮೂಲಕ ಬಂಗೀ ಜಂಪ್​! ಅಂಗವೈಫಲ್ಯವಿದ್ದರೂ ಇತಿಹಾಸ ಸೃಷ್ಠಿಸಿದ ಯೋಧ! |Bungee Jump

ಉತ್ತರಾಖಂಡ: ಇಲ್ಲಿನ ಹೃಷಿಕೇಶದಲ್ಲಿ ಗಾಲಿ ಕುರ್ಚಿಯ(ವಿಲ್​ಚೇರ್​)ಲ್ಲಿ ಕುಳಿತ ವ್ಯಕ್ತಿಯೊಬ್ಬ ಬರೊಬ್ಬರಿ 117 ಮೀಟರ್​ ಎತ್ತರದಿಂದ ಬಂಗೀ ಜಂಪ್​( Bungee Jump) ಮಾಡುವ ಮೂಲಕ ಇದೀಗ ಹೊಸ ಇತಿಹಾಸವನ್ನು ನಿರ್ಮಿಸಿದ್ದಾನೆ.

ಭಾರತದಲ್ಲಿ ಯಾರು ಮಾಡದ ಸಾಹಸವನ್ನು ಇತ ಮಾಡಿದ್ದಾನೆ. ಅಲ್ಲದೆ, ಇವರ ಈ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಎಲ್ಲಾರ ಮೆಚ್ಚುಗೆ ಪಡೆದಿದೆ. ಸೋಷಿಯಲ್​ ಮೀಡಿಯಾದಲ್ಲಿ ಭರಪೂರ ಕಾಮೆಂಟ್​ಗಳು ರಾರಾಜಿಸುತ್ತಿವೆ. ಅಭಯ್​ ಡೋಗ್ರ ಎಂಬ ಈ ಯೋಧ ಸಾಹಸ ಮಾಡಿದಾತ.

ಎಲ್ಲ ಬಂಗೀ ಜಂಪ್​ ಮಾಡುವ ವ್ಯಕ್ತಿಗಳು ಸಾಮಾನ್ಯವಾಗಿ ಸಲ್ಪ ಎತ್ತರದ ರಸ್ತೆಗಳು, ಸೇತುವೆಗಳು ಮತ್ತು ಸಲ್ಪ ಎತ್ತರದ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ಡೋಗ್ರ ಅವರು ವಿಕಲಚೇತನದಿಂದ(ಪಾಶ್ವವಾಯು) ಕೂಡಿದ್ದರೂ ಸಹ ರಿಷಿಕೇಶದ ಅತಿ ಎತ್ತರದ ಬೆಟ್ಟದಿಂದ ಜಂಪ್​ ಮಾಡಿದ್ದಾನೆ. ಅಲ್ಲದೇ, ಇತನ ಸಾಹಸ ಕೈಕಾಲು ಸರಿ ಇದ್ದವರೂ ಕೂಡ ಇವರೆಗೆ ಮಾಡಿಲ್ಲ ಎಂಬುವುದು ಗಮನಾರ್ಹ. ಇವರ ಕನಸನ್ನು ಸಾಧನೆ ಮಾಡವ ಮೂಲಕ ನನಸು ಮಾಡಿಕೊಂಡು ಹಲವರಿಗೆ ಸ್ಫೂರ್ತಿದಾಯಕರಾಗಿದ್ದಾರೆ.

ಡೋಗ್ರಾ ಅವರು ಜಂಪಿಂಗ್​ ಮಾಡುತ್ತೀರುವ ವಿಡಿಯೋವನ್ನು 'ಹಿಮಲಾಯನ್​ಬಂಗೀ' ಎಂಬ ಇನ್​ಸ್ಟಗ್ರಾಮ್ ಪೇಜ್​ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ''ಮೊದಲಿಗೆ ವಿಲ್​ಚೇರ್​ ಮತ್ತು ತನ್ನ ಸುರಕ್ಷತೆಯನ್ನು ಸುತ್ತಲಿನ ಸಿಬ್ಬಂದಿಗಳು ಪರಿಶೀಲಿಸುತ್ತಾರೆ. ಬಳಿಕ ಸಣ್ಣ ಕ್ರೇನ್​ ಸಹಾಯದಿಂದ ಮತ್ತ ಸಿಬ್ಬಂದಿಯಿಂದ ಅವರನ್ನು ನಿಧಾನವಾಗಿ ಕೆಳಗೆ ಬೀಡಲಾಗುತ್ತದೆ. ಅಲ್ಲಿಂದ ಜಂಪ್​ ಮಾಡಿದ ಅಭಯ್​, ಮೊದಲು ಭಯಪಡುತ್ತಾನೆ. ಆದರೆ, ಬಳಿಕ ಸಂತೋಷದಿಂದ ಚಿರಿ ಖುಷಿಪಡುತ್ತಾನೆ. ಇವರು ಜಂಪ್​ ಮಾಡುವ ರೀತಿ ನೋಡುಗರನ್ನು ಭಯ ಮತ್ತು ಆಶ್ಚರ್ಯಗೊಳಿಸುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಕಾಣಸಿಗತ್ತದೆ''.

ಆನ್‌ಲೈನ್‌ನಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಈ ವಿಡಿಯೋ ಹುಟ್ಟುಹಾಕಿದೆ, ಅನೇಕರು ಡೋಗ್ರಾ ಅವರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರನು ವೀಕ್ಷಣೆಗಳಿಗಾಗಿ ತುಂಬಾ ಅಪಾಯವನ್ನುಂಟುಮಾಡುವ ಅಗತ್ಯವನ್ನು ನಿಜವಾಗಿಯೂ ಸರಿಪಡಿಸಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ದಯವಿಟ್ಟು ಈ ಸಾಹಸಗಳನ್ನು ಪ್ರಚಾರ ಮಾಡಬೇಡಿ ಎಂದು ತಮ್ಮದೇ ಶೈಲಿಯಲ್ಲಿ ಬರೆದುಕೊಂಡಿದ್ದಾರೆ. ಹಲವರು ಅವರ ಧೈರ್ಯ ಮತ್ತು ನಿರ್ಣಯವನ್ನು ಶ್ಲಾಘಿಸಿದ್ದು, ನೀವು ಜನರಿಗೆ ಸ್ಪೂರ್ತಿಯಾಗಿದ್ದೀರಿ ಎಂದು ಹೇಳಿದ್ದಾರೆ,(ಏಜೆನ್ಸೀಸ್​).