Brain Teaser: ಶಾಲೆಯಲ್ಲಿ ಹೇಳಿಕೊಟ್ಟಿದ್ದೇ ನೆನಪಿಲ್ಲ ಇನ್ನೂ ಇದೆಲ್ಲ ನಮ್ಮಿಂದ ಸಾಧ್ಯನಾ ಎಂದು ಹೇಳಿ ಸುಮ್ಮನಾಗುವವರೇ ಹೆಚ್ಚು. ಅದಕ್ಕೆ ಕಾರಣ ಇಂತಹ ಗಣಿತದ ಲೆಕ್ಕಾಚಾರಗಳು. ಶಾಲಾ-ಕಾಲೇಜು ದಿನಗಳಲ್ಲಿ ಬಹುತೇಕರು ಹೆದರಿದ ವಿಷಯ ಎಂದರೆ ಅದು ಗಣಿತ. ಅದರಲ್ಲೂ ಇಂಗ್ಲಿಷ್, ಕನ್ನಡ, ವಿಜ್ಞಾನ ಸೇರಿದಂತೆ ಇನ್ನಿತರ ವಿಷಯಕ್ಕೆ ಸಂಬಂಧಿಸಿದಂತೆ ಶಿಕ್ಷಕರು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಬಹುದಿತ್ತು. ಆದರೆ, ಗಣಿತದಲ್ಲಿ ಆ ರೀತಿ ಆಗಲು ಸಾಧ್ಯವೇ ಇರ್ತಿರಲಿಲ್ಲ. ಆ ಹಂತಗಳನ್ನು ಹೇಗೋ ದಾಟಿ ಇಂದು ತಿಂಗಳ ಸಂಬಳ ಎಣಿಸುತ್ತಿರುವ ನಮಗೆ ಇದ್ಯಾವುದೋ ಗಣಿತ ಒಗಟು ಬಿಡಿಸಿ ಎಂದು ಮುಂದಿಟ್ಟರೆ ಹೇಗೆ? ಎನ್ನುವವರಿಗೆಯೇ ಈ ಪ್ರಶ್ನೆ.
ಇದನ್ನೂ ಓದಿ: 2000-2012, ಹಾಟ್ ಬ್ಯೂಟಿ ಈಗ ಸನ್ಯಾಸಿನಿ! ಮಮತಾ ಕುಲಕರ್ಣಿ ಆಸ್ತಿ ಮೌಲ್ಯ ಕೇಳಿದ್ರೆ ಹುಬ್ಬೇರೋದು ಖಚಿತ | Mamta Kulkarni
ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಇಂತಹ ಗಣಿತ ಒಗಟುಗಳು ನೆಟ್ಟಿಗರ ಗಮನವನ್ನು ಸೆಳೆಯುತ್ತಿವೆ. ಸಾಮಾನ್ಯವಾಗಿ ದಿನದ ಜಂಜಾಟದಲ್ಲಿ ಸೋತು ಸುಣ್ಣವಾಗುವ ಅನೇಕರು, ದಿನಪತ್ರಿಕೆಗಳಲ್ಲಿ ಸಿಗುವ ಪದಬಂಧ ಹಾಗೂ ಜಾಲತಾಣಗಳಲ್ಲಿ ಹರಿದಾಡುವ ಬ್ರೇನ್ ಟೀಸರ್ಗಳಿಗೆ ಉತ್ತರಿಸಲು ಬಯಸುತ್ತಾರೆ. ಮೊದಲು ಇದೆನ್ನೆಲ್ಲ ಯಾರು ಉತ್ತರಿಸುತ್ತಾರೆ? ಎನ್ನುವ ಒಂದಷ್ಟು ನೆಟ್ಟಿಗರು, ತದನಂತರ ಕುತೂಹಲದಿಂದ ಉತ್ತರ ಏನಿರಬಹುದು ಎಂದು ಕಮೆಂಟ್ನಲ್ಲಿ ಹುಡುಕುವುದು ಹಾಸ್ಯಸ್ಪದ. ನೀವು ಇದೇ ವರ್ಗಕ್ಕೆ ಸೇರಿದ್ದರೂ ಪರವಾಗಿಲ್ಲ. ಉತ್ತರಿಸಲು ಕೊಂಚ ಪ್ರಯತ್ನಿಸಿ. ಕೊಟ್ಟು ನೋಡಿ ನಿಮ್ಮೆ ಮಿದುಳಿಗೆ ಕೆಲಸ.
13 → 10, 26 → 40, 39 → 90, 52 → ?
ಸರಿಯಾದ ಉತ್ತರ: 29. ಇದೇ ಉತ್ತರ ನಿಮಗೂ ಸಿಕ್ಕಿತಾ?