ನ್ಯೂಸ್

ಎಂಎಲ್​ಎ ಟಿಕೆಟ್ ಸಿಗದಿದ್ದರೂ ಸಿಕ್ಕಿತು ಸಚಿವ ಸ್ಥಾನ!

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ನೂತನ ಸಚಿವರಾಗಿ ನಾಳೆ ಪ್ರಮಾಣವಚನ ಸ್ವೀಕರಿಸಲಿರುವವರ ಪಟ್ಟಿ ಬಹಿರಂಗಗೊಂಡಿದ್ದು, ಅಚ್ಚರಿಯೊಂದು ಕಂಡುಬಂದಿದೆ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದಿದ್ದವರಿಗೆ ಕೊನೆಗೂ ಸಚಿವಸ್ಥಾನ ಸಿಕ್ಕಿದೆ. ಗಗೊಂಡಿದ್ದು, ಅಚ್ಚರಿಯೊಂದು ಕಂಡುಬಂದಿದೆ.

ವಿಧಾನಸಭಾ ಚುನಾವಣೆ ವೇಳೆ ರಾಯಚೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್ ಆಕಾಂಕ್ಷಿ ಆಗಿದ್ದ ಎನ್​.ಎಸ್​. ಬೋಸರಾಜು ಅವರೇ ಆ ಅದೃಷ್ಟವಂತ. ಬಳಿಕ ವಿಧಾನಪರಿಷತ ಸದಸ್ಯ ಸ್ಥಾನ ಗಿಟ್ಟಿಸಿಕೊಂಡಿದ್ದ ಇವರು ಸಚಿವಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಇವರಿಗೆ ಸಚಿವ ಸ್ಥಾನ ಸಿಗಬಾರದು ಎಂದು ಕಾಂಗ್ರೆಸ್ ಶಾಸಕರೇ ಒತ್ತಡ ತಂದಿದ್ದರು. ಅದಕ್ಕಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಪತ್ರ ಬರೆದಿದ್ದರು. ರಾಯಚೂರು ಜಿಲ್ಲೆಯ ಸಿಂಧನೂರು ಕ್ಷೇತ್ರದ ಶಾಸಕ ಹಂಪನಗೌಡ ಬಾದರ್ಲಿ, ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಹಾಗೂ ಇನ್ನಿಬ್ಬರು ಮುಖಂಡರಾದ ಎ.ವಸಂತ್ ಕುಮಾರ್, ಅಸ್ಲಂ ಪಾಷಾ ಪತ್ರ ಬರೆದಿದ್ದರು. ಅದಾಗ್ಯೂ ಬೋಸರಾಜು ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಇಂದು ಬಹಿರಂಗಗೊಂಡಿರುವ 24 ನೂತನ ಸಚಿವರ ಅಧಿಕೃತ ಪಟ್ಟಿಯಲ್ಲಿ, ಕೆಲವು ಘಟಾನುಘಟಿ ನಾಯಕರ ಹೆಸರೇ ಬಿಟ್ಟುಹೋಗಿದೆ. ಆರ್.ವಿ.ದೇಶಪಾಂಡೆ, ಬಿ ಕೆ ಹರಿಪಸ್ರಾದ್, ಟಿ.ಬಿ.ಜಯಚಂದ್ರ ಹಾಗೂ ಸಿಎಂ ಆಪ್ತ ಬಸವರಾಜ ರಾಯರೆಡ್ಡಿ ಅವರಿಗೂ ಸಚಿವ ಸ್ಥಾನ ಕೈತಪ್ಪಿಹೋಗಿದ್ದರೂ ಬೋಸರಾಜುಗೆ ಸಿಕ್ಕಿದ್ದು ಅಚ್ಚರಿ ಮೂಡಿಸಿದೆ.