ನ್ಯೂಸ್

1 ಲಕ್ಷ ಷೇರು ಖರೀದಿಸಿದ ಬಾಲಿವುಡ್​ ನಟ ಅಜಯ ದೇವಗನ್: ಪನೋರಮಾ ಸ್ಟುಡಿಯೋ ಸ್ಟಾಕ್​ ಬೆಲೆ ಒಂದೇ ವರ್ಷದಲ್ಲಿ 861% ಏರಿಕೆ

ಮುಂಬೈ: ಮಲ್ಟಿಬ್ಯಾಗರ್ ರಿಟರ್ನ್ ನೀಡಿರುವ ಕಂಪನಿಯ 1 ಲಕ್ಷ ಷೇರುಗಳನ್ನು ಬಾಲಿವುಡ್​ ನಟ ಅಜಯ್ ದೇವಗನ್ ಈ ಖರೀದಿಸಿದ್ದಾರೆ. ಅವರ ಹೂಡಿಕೆ ಹಣ 6 ತಿಂಗಳಲ್ಲಿ ದ್ವಿಗುಣಗೊಂಡಿದೆ.

ಬಾಲಿವುಡ್ ಸೂಪರ್ ಸ್ಟಾರ್ ಅಜಯ್ ದೇವಗನ್ ಅವರು ಷೇರು ಮಾರುಕಟ್ಟೆಯಲ್ಲಿ ದೊಡ್ಡ ಹೂಡಿಕೆ ಮಾಡಿದ್ದಾರೆ. ಸ್ಮಾಲ್ ಕ್ಯಾಪ್ ಸ್ಟಾಕ್ ಪನೋರಮಾ ಸ್ಟುಡಿಯೋಸ್ ಇಂಟರ್‌ನ್ಯಾಶನಲ್ ಲಿಮಿಟೆಡ್​ನ (Panorama Studios International Ltd.) ಒಂದು ಲಕ್ಷ ಷೇರುಗಳನ್ನು ‘ಸಿಂಗಮ್’ ಖರೀದಿದ್ದಾರೆ. ಕಳೆದ 6 ತಿಂಗಳ ಅವಧಿಯಲ್ಲಿ ಈ ಕಂಪನಿಯ ಷೇರುಗಳ ಬೆಲೆಯಲ್ಲಿ ಏರಿಕೆಯಾಗಿದೆ.

ನಿಯಂತ್ರಕರಿಗೆ ನೀಡಿರುವ ಮಾಹಿತಿಯಲ್ಲಿ, 9 ಹೂಡಿಕೆದಾರರು ಆದ್ಯತೆಯ ಷೇರು ಹಂಚಿಕೆ ಮೂಲಕ 24.66 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದ್ದಾರೆ ಎಂದು ಕಂಪನಿ ತಿಳಿಸಿದೆ. ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಪ್ರತಿ ಷೇರಿಗೆ 274 ರೂ.ನಂತೆ 2.74 ಕೋಟಿ ರೂ. ಹೂಡಿಕೆ ಮಾಡಿದ್ದಾರೆ.

ಶನಿವಾರದಂದು ವಿಶೇಷ ಅಧಿವೇಶನ ಮುಕ್ತಾಯವಾದ ನಂತರ ಈ ಕಂಪನಿಯ ಷೇರುಗಳ ಬೆಲೆ 949 ರೂ. ತಲುಪಿದೆ. ಈ ಕಂಪನಿಯ ಷೇರುಗಳ 52 ವಾರದ ಗರಿಷ್ಠ ಬೆಲೆ ರೂ 970 ಮತ್ತು ಕನಿಷ್ಠ ಬೆಲೆ ರೂ 91 ಆಗಿದೆ. ಕಂಪನಿಯ ಮಾರುಕಟ್ಟೆ ಬಂಡವಾಳ 1181.20 ಕೋಟಿ ರೂ. ಆಗಿದೆ.

ಕಳೆದ 6 ತಿಂಗಳ ಅವಧಿಯಲ್ಲಿ ಈ ಸ್ಟಾಕ್​ನ ಕಾರ್ಯಕ್ಷಮತೆ ಉತ್ತಮವಾಗಿದೆ. ಈ ಅವಧಿಯಲ್ಲಿ ಕಂಪನಿಯ ಷೇರು ಬೆಲೆಗಳು ಶೇ. 271ರಷ್ಟು ಏರಿಕೆ ಕಂಡಿವೆ. ಅಂದರೆ ಈ ಅವಧಿಯಲ್ಲಿ ಸ್ಥಾನಿಕ ಹೂಡಿಕೆದಾರರ ಹಣ ದುಪ್ಪಟ್ಟಿಗಿಂತಲೂ ಅಧಿಕವಾಗಿದೆ. ಅದೇ ಸಮಯದಲ್ಲಿ, ಇದುವರೆಗೆ ಒಂದು ವರ್ಷದಿಂದ ಷೇರುಗಳನ್ನು ಹೊಂದಿರುವ ಹೂಡಿಕೆದಾರರಿಗೆ 861% ಲಾಭವಾಗಿದೆ.