More

    1 ಲಕ್ಷವಾಯ್ತು 12 ಲಕ್ಷ ರೂಪಾಯಿ: ಹೂಡಿಕೆದಾರರಿಗೆ 1200% ಲಾಭ ನೀಡಿದೆ ಚಪ್ಪಲಿ ತಯಾರಿಕೆ ಕಂಪನಿ ಷೇರು

    ಮುಂಬೈ: ಕಳೆದ 10 ವರ್ಷಗಳಲ್ಲಿ ರಿಲಾಕ್ಸೊ ಫುಟ್‌ವೇರ್ ಲಿಮಿಟೆಡ್​ (Relaxo Footwears Ltd) ಮಲ್ಟಿಬ್ಯಾಗರ್ ಸ್ಟಾಕ್ ಆಗಿದೆ. ಇದರಲ್ಲಿ ಹೂಡಿಕೆದಾರರು ಕೇವಲ 10 ವರ್ಷಗಳಲ್ಲಿ 1200 ಪ್ರತಿಶತ ಲಾಭವನ್ನು ಪಡೆದಿದ್ದಾರೆ.

    ಚಪ್ಪಲಿ ಮತ್ತು ಇತರ ಪಾದರಕ್ಷೆ ಉತ್ಪನ್ನಗಳನ್ನು ಈ ಕಂಪನಿ ತಯಾರಿಸುತ್ತದೆ. ಕಳೆದ ದಶಕದಲ್ಲಿ ಈ ಕಂಪನಿಯ ಷೇರುಗಳು ಗಮನಾರ್ಹ ಏರಿಕೆ ಕಂಡಿವೆ. ಈ ಸ್ಟಾಕ್ ಕೇವಲ 10 ವರ್ಷಗಳಲ್ಲಿ 1,200% ರಷ್ಟು ಹೆಚ್ಚಾಗಿದೆ. ಶನಿವಾರದ ವಿಶೇಷ ವಹಿವಾಟಿನಲ್ಲಿ ಈ ಷೇರುಗಳ ಬೆಲೆ 832.65 ರೂಪಾಯಿ ಮುಟ್ಟಿದೆ. ಹೂಡಿಕೆದಾರರು ನಾಲ್ಕು ವರ್ಷಗಳ ಹಿಂದೆ 1 ಲಕ್ಷ ರೂ.ಗಳನ್ನು ಷೇರುಗಳಲ್ಲಿ ಹೂಡಿಕೆ ಮಾಡಿದ್ದರೆ ಅದು ಈಗ 12 ಲಕ್ಷ ರೂಪಾಯಿ ಆಗುತ್ತಿತ್ತು.

    ಇತ್ತೀಚಿನ ದಿನಗಳಲ್ಲಿ ಈ ಸ್ಟಾಕ್ ರ್ಯಾಲಿಯು ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಕಳೆದ ಆರು ತಿಂಗಳಲ್ಲಿ ಈ ಷೇರು ಹೂಡಿಕೆದಾರರಿಗೆ 13% ನಷ್ಟು ಆದಾಯ ನೀಡಿದೆ. ಕಳೆದ 3 ತಿಂಗಳಲ್ಲಿ ಶೇರುಗಳು ಶೇ. 9ರಷ್ಟು ಏರಿಕೆ ಕಂಡಿದೆ.
    ಭಾರತದಲ್ಲಿ ಪ್ರಮುಖ ಪಾದರಕ್ಷೆ ತಯಾರಕ ಮತ್ತು ಅಗ್ರ 500 ಅತ್ಯಮೂಲ್ಯ ಕಂಪನಿಗಳಲ್ಲಿ ಸ್ಥಾನ ಪಡೆದಿದೆ. ಕಂಪನಿಯು ಚಪ್ಪಲಿಗಳು, ಸ್ಯಾಂಡಲ್​, ಶೂಗಳನ್ನು ತಯಾರಿಸುತ್ತದೆ. ಇದರ ಅತ್ಯಂತ ಜನಪ್ರಿಯ ಬ್ರ್ಯಾಂಡ್‌ಗಳು – ರಿಲಾಕ್ಸೊ, ಸ್ಪಾರ್ಕ್ಸ್, ಫ್ಲೈಟ್ ಮತ್ತು ಬಹಾಮಾಸ್ ಆಗಿವೆ.

    ವಿನಿಮಯ ಕೇಂದ್ರಗಳಲ್ಲಿ ಲಭ್ಯವಿರುವ ಷೇರುದಾರರ ಮಾದರಿಯ ಪ್ರಕಾರ, ಪ್ರವರ್ತಕರು ಕಂಪನಿಯಲ್ಲಿ 71.27% ಪಾಲನ್ನು ಹೊಂದಿದ್ದಾರೆ, ಸಾರ್ವಜನಿಕ ಷೇರುದಾರರು ಉಳಿದ 28.73% ರಷ್ಟು ಪಾಲನ್ನು ಹೊಂದಿದ್ದಾರೆ. ಸಾರ್ವಜನಿಕ ಷೇರುದಾರರಲ್ಲಿ, ಮ್ಯೂಚುವಲ್ ಫಂಡ್‌ಗಳು 8.81% ಮತ್ತು ವಿದೇಶಿ ಹೂಡಿಕೆದಾರರು ನಾಮಮಾತ್ರ 3.2% ಪಾಲು ಹೊಂದಿದ್ದಾರೆ.

    ಶನಿವಾರ ನಡೆಯಿತು ವಿಶೇಷ ಟ್ರೇಡಿಂಗ್ ಸೆಷನ್​: ಹೊಸ ದಾಖಲೆ ಮಟ್ಟ ಮುಟ್ಟಿತು ಷೇರು ಸೂಚ್ಯಂಕ

    64 ರೂಪಾಯಿಯ ಷೇರು 90ಕ್ಕೆ ತಲುಪಲಿದೆ: ಹೀಗೆಂದು ಬ್ರೋಕರೇಜ್​ ಸಂಸ್ಥೆ ಹೇಳಿದ್ದೇಕೆ?

    ಫೆಬ್ರುವರಿ ಒಂದೇ ತಿಂಗಳಲ್ಲಿ 1 ಲಕ್ಷವಾಯ್ತು 2 ಲಕ್ಷಕ್ಕೂ ಅಧಿಕ ಮೊತ್ತ: 100% ಹೆಚ್ಚು ಲಾಭ ನೀಡಿದ ಷೇರುಗಳು ಮತ್ತೆ ಅಪ್ಪರ್​ ಸರ್ಕ್ಯೂಟ್​ ಹಿಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts