More

    ಶನಿವಾರ ನಡೆಯಿತು ವಿಶೇಷ ಟ್ರೇಡಿಂಗ್ ಸೆಷನ್​: ಹೊಸ ದಾಖಲೆ ಮಟ್ಟ ಮುಟ್ಟಿತು ಷೇರು ಸೂಚ್ಯಂಕ

    ಮುಂಬೈ: ಆಕರ್ಷಕ ಜಿಡಿಪಿ ದತ್ತಾಂಶ ಮತ್ತು ವಿದೇಶಿ ನಿಧಿಯ ಒಳಹರಿವಿನ ಹಿನ್ನೆಲೆಯಲ್ಲಿ ಈಕ್ವಿಟಿ ಬೆಂಚ್‌ಮಾರ್ಕ್ ಸೂಚ್ಯಂಕಗಳಾದ ಬಿಎಸ್​ಇ ಮತ್ತು ನಿಫ್ಟಿ ಶನಿವಾರದ ವಿಶೇಷ ವಹಿವಾಟಿನಲ್ಲಿ ಉನ್ನತ ಮಟ್ಟ ತಲುಪಿ ದಾಖಲೆ ಬರೆದವು.

    ಪ್ರಮುಖ ಸ್ಟಾಕ್ ಎಕ್ಸ್‌ಚೇಂಜ್‌ಗಳಾದ ಬಿಎಸ್‌ಇ ಮತ್ತು ಎನ್‌ಎಸ್‌ಇ ಶನಿವಾರದಂದು ಈಕ್ವಿಟಿ ಮತ್ತು ಇಕ್ವಿಟಿ ಡೆರೈವೇಟಿವ್ ವಿಭಾಗಗಳಲ್ಲಿ ವಿಶೇಷ ವಹಿವಾಟು ಸೆಷನ್ ನಡೆಸಿದವು. ಪ್ರಾಥಮಿಕ ಸೈಟ್‌ನಲ್ಲಿ ಪ್ರಮುಖ ಅಡೆತಡೆಗಳು ಅಥವಾ ವೈಫಲ್ಯವನ್ನು ನಿಭಾಯಿಸಲು ತಮ್ಮ ಸಿದ್ಧತೆ ಪರಿಶೀಲಿಸಲು ಈ ವಿಶೇಷ ವಹಿವಾಟು ನಡೆಯಿತು. ವಿಶೇಷ ಲೈವ್ ಟ್ರೇಡಿಂಗ್ ಸೆಷನ್ ಪ್ರಾಥಮಿಕ ಸೈಟ್ (PR) ನಿಂದ ಡಿಸಾಸ್ಟರ್ ರಿಕವರಿ (DR) ಸೈಟ್‌ಗೆ ಇಂಟ್ರಾ-ಡೇ ಸ್ವಿಚ್ ಅನ್ನು ಹೊಂದಿತ್ತು.

    30-ಷೇರು ಬಿಎಸ್‌ಇ ಸೆನ್ಸೆಕ್ಸ್ 60.80 ಅಂಕಗಳು ಅಥವಾ ಶೇಕಡಾ 0.08 ರಷ್ಟು ಏರಿಕೆಯಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 73,806.15 ತಲುಪಿತು. ಇಂಟ್ರಾ ಡೇ ವಹಿವಾಟಿನಲ್ಲಿ ಸೂಚ್ಯಂಕವು 249.35 ಅಂಕಗಳು ಅಥವಾ ಶೇಕಡಾ 0.33 ರಷ್ಟು ಏರಿಕೆಯಾಗಿ 73,994.70 ರ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತ್ತು.

    ನಿಫ್ಟಿ ಸೂಚ್ಯಂಕವು 39.65 ಅಂಕಗಳು ಅಥವಾ ಶೇಕಡಾ 0.18 ರಷ್ಟು ಏರಿಕೆಯಾಗಿ 22,378.40 ರ ಹೊಸ ಮುಕ್ತಾಯದ ಗರಿಷ್ಠ ಮಟ್ಟವನ್ನು ತಲುಪಿತು. ದಿನದಲ್ಲಿ, ಇದು 80.8 ಅಂಕಗಳು ಅಥವಾ ಶೇಕಡಾ 0.36 ರಷ್ಟು ಏರಿ, 22,419.55 ರ ಜೀವಿತಾವಧಿಯ ಗರಿಷ್ಠ ಮಟ್ಟವನ್ನು ತಲುಪಿತ್ತು.

    ಬಿಎಸ್‌ಇ-ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣವು ಸಾರ್ವಕಾಲಿಕ ಗರಿಷ್ಠ 394.06 ಲಕ್ಷ ಕೋಟಿ ರೂ. ಈ ವಿಶೇಷ ಟ್ರೇಡಿಂಗ್​ನಲ್ಲಿ ಎರಡು ವಹಿವಾಟು ಅವಧಿಗಳು ಇದ್ದವು. ಮೊದಲನೆಯದ್ದು, ಬೆಳಗ್ಗೆ 9:15 ರಿಂದ 10 ವರೆಗೆ ಮತ್ತು ಎರಡನೆಯದ್ದು ಬೆಳಗ್ಗೆ 11:30 ರಿಂದ ಮಧ್ಯಾಹ್ನ 12:30 ರವರೆಗೆ.

    ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಜೆಎಸ್‌ಡಬ್ಲ್ಯೂ ಸ್ಟೀಲ್, ವಿಪ್ರೋ, ಐಟಿಸಿ ಮತ್ತು ಏಷ್ಯನ್ ಪೇಂಟ್ಸ್ ಕಂಪನಿಯ ಷೇರುಗಳು ಪ್ರಮುಖವಾಗಿ ಲಾಭ ಗಳಿಸಿದವು. ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಎನ್‌ಟಿಪಿಸಿ, ಮಾರುತಿ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಯ ಷೇರುಗಳು ಹಿನ್ನಡೆ ಕಂಡವು.

    ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇಕಡಾ 0.70 ರಷ್ಟು ಏರಿತು. ಮಿಡ್‌ಕ್ಯಾಪ್ ಸೂಚ್ಯಂಕ ಕೂಡ ಶೇಕಡಾ 0.67 ರಷ್ಟು ಹೆಚ್ಚಳ ಕಂಡಿತು.

    ಶುಕ್ರವಾರ ಬಿಎಸ್‌ಇ ಬೆಂಚ್‌ಮಾರ್ಕ್ 1,245.05 ಅಂಕಗಳು ಅಥವಾ ಶೇಕಡಾ 1.72ರಷ್ಟು ಜಿಗಿದು 73,745.35 ಕ್ಕೆ ತಲುಪಿತ್ತು. ನಿಫ್ಟಿ ಸೂಚ್ಯಂಕವು 355.95 ಅಂಕಗಳು ಅಥವಾ 1.62 ರಷ್ಟು ಏರಿಕೆಯಾಗಿ 22,338.75 ಕ್ಕೆ ಸ್ಥಿರವಾಗಿತ್ತು

    64 ರೂಪಾಯಿಯ ಷೇರು 90ಕ್ಕೆ ತಲುಪಲಿದೆ: ಹೀಗೆಂದು ಬ್ರೋಕರೇಜ್​ ಸಂಸ್ಥೆ ಹೇಳಿದ್ದೇಕೆ?

    ಕಾನೂನುಬಾಹಿರ ಚಟುವಟಿಕೆಗಾಗಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ 5.49 ಕೋಟಿ ರೂ. ದಂಡ

    ಫೆಬ್ರುವರಿ ಒಂದೇ ತಿಂಗಳಲ್ಲಿ 1 ಲಕ್ಷವಾಯ್ತು 2 ಲಕ್ಷಕ್ಕೂ ಅಧಿಕ ಮೊತ್ತ: 100% ಹೆಚ್ಚು ಲಾಭ ನೀಡಿದ ಷೇರುಗಳು ಮತ್ತೆ ಅಪ್ಪರ್​ ಸರ್ಕ್ಯೂಟ್​ ಹಿಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts