More

    ಫೆಬ್ರುವರಿ ಒಂದೇ ತಿಂಗಳಲ್ಲಿ 1 ಲಕ್ಷವಾಯ್ತು 2 ಲಕ್ಷಕ್ಕೂ ಅಧಿಕ ಮೊತ್ತ: 100% ಹೆಚ್ಚು ಲಾಭ ನೀಡಿದ ಷೇರುಗಳು ಮತ್ತೆ ಅಪ್ಪರ್​ ಸರ್ಕ್ಯೂಟ್​ ಹಿಟ್

    ಮುಂಬೈ: ಫೆಬ್ರವರಿ ತಿಂಗಳಲ್ಲಿ ಹೂಡಿಕೆದಾರರು ಉತ್ತಮ ಆದಾಯವನ್ನು ಪಡೆದ ಕೆಲವು ಷೇರುಗಳು ಮಾರುಕಟ್ಟೆಯಲ್ಲಿವೆ. ಈ ಆದಾಯವು 100 ಪ್ರತಿಶತಕ್ಕಿಂತ ಹೆಚ್ಚು. ಅಂದರೆ ಈ ಷೇರುಗಳ ಬೆಲೆ ಒಂದು ತಿಂಗಳೊಳಗೆ ದುಪ್ಪಟ್ಟಾಗಿ ಮಲ್ಟಿಬ್ಯಾಗರ್ ಆದಾಯವನ್ನು ಹೂಡಿಕೆದಾರರಿಗೆ ನೀಡಿವೆ.

    ಫೆಬ್ರವರಿ ತಿಂಗಳಲ್ಲಿ, ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿಂದಾಗಿ ನಿಗದಿತ ಅವಧಿಯಲ್ಲಿ 100 ಪ್ರತಿಶತಕ್ಕಿಂತ ಹೆಚ್ಚಿನ ಆದಾಯವನ್ನು ನೀಡಿದ ಕೆಲವು ಮಲ್ಟಿಬ್ಯಾಗರ್ ಸ್ಟಾಕ್‌ಗಳ ವಿವರ ಇಲ್ಲಿದೆ.

    ಕೇಸರ್ ಇಂಡಿಯಾ ಲಿ (Kesar India Ltd):

    ಮುಖ್ಯವಾಗಿ ರಿಯಲ್ ಎಸ್ಟೇಟ್ ಅಭಿವೃದ್ಧಿ ಮತ್ತು ವಿವಿಧ ರೀತಿಯ ವಸತಿ ಮತ್ತು ವಾಣಿಜ್ಯ ಯೋಜನೆಗಳ ನಿರ್ಮಾಣ ಮಾಡುವ ಕಂಪನಿ ಇದಾಗಿದೆ. ಕಾರ್ಖಾನೆ ಕಟ್ಟಡಗಳು, ಕೈಗಾರಿಕೆಗಳ ಕಟ್ಟಡಗಳಲ್ಲಿ ವ್ಯವಹರಿಸುತ್ತದೆ.
    ಈ ಕಂಪನಿಯು ಕಳೆದ ತಿಂಗಳು ಹೂಡಿಕೆಯ ಮೇಲೆ 129 ಪ್ರತಿಶತದಷ್ಟು ಮಲ್ಟಿಬ್ಯಾಗರ್ ಲಾಭವನ್ನು ನೀಡಿದೆ. ಕಂಪನಿಯ ಷೇರುಗಳಲ್ಲಿ 1 ಲಕ್ಷ ರೂಪಾಯಿಯ ಹೂಡಿಕೆಯು ಒಂದು ತಿಂಗಳಲ್ಲಿ 2.29 ಲಕ್ಷ ರೂಪಾಯಿಯಾಗಿ ಹೆಚ್ಚಳವಾಗಿದೆ.
    ಈ ಕಂಪನಿಯ ಮಾರುಕಟ್ಟೆ ಬಂಡವಾಳ 1,317 ಕೋಟಿ ರೂ. ಈ ಷೇರುಗಳು ಈಗ ಶುಕ್ರವಾರ ಕೂಡ ಶೇಕಡಾ 5 ರಷ್ಟು ಹೆಚ್ಚಳವಾಗಿ ಅಪ್ಪರ್ ಸರ್ಕ್ಯೂಟ್‌ ಹಿಟ್​ ಆದವು.

    ಜುಬಿಲೆಂಟ್ ಇಂಡಸ್ಟ್ರೀಸ್ ಲಿಮಿಟೆಡ್ (Jubilant Industries Ltd):

    ಇದು ಕೃಷಿ ಉತ್ಪನ್ನಗಳು ಮತ್ತು ಪಾಲಿಮರ್‌ಗಳ ಉತ್ಪಾದನೆ ಮತ್ತು ಪೂರೈಕೆಯಲ್ಲಿ ತೊಡಗಿರುವ ಕಂಪನಿಯಾಗಿದೆ. ಮರದ ಅಂಟುಗಳು, ವುಡ್ ಫಿನಿಶ್‌ಗಳು, ಸ್ಪೆಷಾಲಿಟಿ ಪಾಲಿಮರ್‌ಗಳು ಮತ್ತು ಇನ್ನೂ ಅನೇಕ ಉತ್ಪನ್ನಗಳನ್ನು ತಯಾರಿಸುತ್ತದೆ. ಕಂಪನಿಯ ಮಾರುಕಟ್ಟೆ ಮೌಲ್ಯ 2,040 ಕೋಟಿ ರೂ. ಶುಕ್ರವಾರದ ವಹಿವಾಟಿನಲ್ಲಿ, ಜುಬಿಲಂಟ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಷೇರುಗಳು ಶೇಕಡ 5 ರಷ್ಟು ಹೆಚ್ಚಳವಾಗಿ ಅಪ್ಪರ್​ ಸರ್ಕ್ಯೂಟ್ ಹಿಟ್​ ಆದವು.

    ಈ ಕಂಪನಿ ಕಳೆದ ತಿಂಗಳು ಶೇಕಡಾ 112 ಮಲ್ಟಿಬ್ಯಾಗರ್ ರಿಟರ್ನ್ ನೀಡಿದೆ. ಫೆಬ್ರವರಿ ತಿಂಗಳಿನಲ್ಲಿ ಈ ಕಂಪನಿಯ ಷೇರುಗಳಲ್ಲಿ ಒಂದು ಲಕ್ಷ ರೂಪಾಯಿ ಹೂಡಿಕೆಯು ಒಂದು ತಿಂಗಳಲ್ಲಿ 2.12 ಲಕ್ಷ ರೂಪಾಯಿಗಳಿಗೆ ಏರಿಕೆಯಾಗಿದೆ.

    ಎಎಸ್​ಎಂ ಟೆಕ್ನಾಲಜೀಸ್ ಲಿಮಿಟೆಡ್ (ASM Technologies Ltd):

    ಎಎಸ್​ಎಂ ಟೆಕ್ನಾಲಜೀಸ್ ಲಿಮಿಟೆಡ್ ಇಂಜಿನಿಯರಿಂಗ್ ಸೇವೆ, ಉತ್ಪನ್ನ ಇಜಿನಿಯರಿಂಗ್ ಸೇವೆ ಮತ್ತು ಉತ್ಪನ್ನ ಸಂಶೋಧನೆ ಮತ್ತು ಅಭಿವೃದ್ಧಿ ವಲಯದಲ್ಲಿ ಸಲಹಾ ಸೇವೆಗಳನ್ನು ಒದಗಿಸಲು ಕೆಲಸ ಮಾಡುತ್ತದೆ.
    ಎಎಸ್‌ಎಂ ಟೆಕ್ನಾಲಜೀಸ್ ಲಿಮಿಟೆಡ್‌ನ ಷೇರುಗಳು ಶುಕ್ರವಾರ ಶೇಕಡಾ 5 ರ ಅಪ್ಪರ್ ಸರ್ಕ್ಯೂಟ್ ಹಿಟ್ ಆದವು. ಈ ಕಂಪನಿ ಕಳೆದ ತಿಂಗಳು ಶೇಕಡಾ 106 ರಷ್ಟು ಮಲ್ಟಿಬ್ಯಾಗರ್ ರಿಟರ್ನ್ ನೀಡಿದೆ. ಫೆಬ್ರುವರಿ ತಿಂಗಳಲ್ಲಿ ಈ ಕಂಪನಿಯ ಷೇರುಗಳಲ್ಲಿ 1 ಲಕ್ಷ ರೂಪಾಯಿ ಹೂಡಿಕೆಯು ಒಂದೇ ತಿಂಗಳಲ್ಲಿ 2.06 ಲಕ್ಷ ರೂಪಾಯಿಗೆ ಏರಿಕೆಯಾಗಿದೆ.

    PVC ಆಧಾರ್ ಕಾರ್ಡ್ ಹೆಚ್ಚು ಸುರಕ್ಷಿತ: ಕೇವಲ 50 ರೂ.ಗಳಲ್ಲಿ ಇದನ್ನು ಪಡೆದುಕೊಳ್ಳುವ ವಿಧಾನ ಹೀಗಿದೆ…

    3 ವರ್ಷಗಳಲ್ಲಿ 1110 ರಿಂದ 7635 ರೂಪಾಯಿ ತಲುಪಿದ ಟಾಟಾ ಷೇರು: ಸೆಮಿಕಂಡಕ್ಟರ್ ಚಿಪ್​ ಘಟಕ ಸ್ಥಾಪನೆಗೆ ಅನುಮತಿ ದೊರೆಯುತ್ತಿದ್ದಂತೆಯೇ ರಾಕೆಟ್​ ವೇಗ

    ಸಾರ್ವಕಾಲಿಕ ದಾಖಲೆ ಬರೆದ ಷೇರು ಸೂಚ್ಯಂಕ: ಗೂಳಿಯ ವೇಗದ ಓಟಕ್ಕೆ ಕೊಡುಗೆ ನೀಡಿವೆ ಈ 4 ಕಾರಣಗಳು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts