More

    3 ವರ್ಷಗಳಲ್ಲಿ 1110 ರಿಂದ 7635 ರೂಪಾಯಿ ತಲುಪಿದ ಟಾಟಾ ಷೇರು: ಸೆಮಿಕಂಡಕ್ಟರ್ ಚಿಪ್​ ಘಟಕ ಸ್ಥಾಪನೆಗೆ ಅನುಮತಿ ದೊರೆಯುತ್ತಿದ್ದಂತೆಯೇ ರಾಕೆಟ್​ ವೇಗ

    ಮುಂಬೈ: ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ (Tata Investment Corporation) ಷೇರುಗಳ ಬೆಲೆ 5% ಏರಿಕೆಯೊಂದಿಗೆ ಹೊಸ ಗರಿಷ್ಠ ಮಟ್ಟವನ್ನು ತಲುಪಿತು. ಈ ಷೇರುಗಳ ಬೆಲೆ ಕಳೆದ 6 ತಿಂಗಳಲ್ಲಿ 211% ರಷ್ಟು ಭಾರಿ ಏರಿಕೆ ಕಂಡಿದೆ. ಅಲ್ಲದೆ, ಒಂದು ವರ್ಷದಲ್ಲಿ ಶೇ. 279ರಷ್ಟು ಏರಿಕೆಯಾಗಿದೆ.

    ಶುಕ್ರವಾರ ಟಾಟಾ ಇನ್ವೆಸ್ಟ್ಮೆಂಟ್ ಕಾರ್ಪೊರೇಷನ್ ಷೇರುಗಳ ಬೆಲೆ ರಾಕೆಟ್​ ವೇಗದಲ್ಲಿ ಮುಗಿಲು ಮುಟ್ಟಿದವು. ಷೇರುಗಳ ಬೆಲೆ 7635.10 ರೂಪಾಯಿಗಳಿಗೆ ತಲುಪಿದವು. ಇದು ಹೊಸ 52 ವಾರಗಳ ಗರಿಷ್ಠ ಮಟ್ಟವಾಗಿದೆ. ಈ ಷೇರುಗಳ ಬೆಲೆ ಏರಿಕೆಗೆ ಕಾರಣ ಸೆಮಿಕಂಡರ್​ ಚಿಪ್​ ಘಟಕ ಸ್ಥಾಪನೆ ಸುದ್ದಿ.

    3 ಸೆಮಿಕಂಡಕ್ಟರ್ ಚಿಪ್​ ತಯಾರಿಕೆ ಘಟಕಗಳ ಪ್ರಸ್ತಾವನೆಗಳಿಗೆ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ. ಇವುಗಳಲ್ಲಿ ಟಾಟಾ ಗ್ರೂಪ್​ ವತಿಯಿಂದ 2 ಸೆಮಿಕಂಡಕ್ಟರ್ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಈ ಸೆಮಿಕಂಡಕ್ಟರ್ ಘಟಕಗಳ ಮೇಲೆ 1.26 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲಾಗುತ್ತಿದೆ. ಮುಂದೆ ಈ ಮೂರು ಘಟಕಗಳ ನಿರ್ಮಾಣ ಕಾರ್ಯ 100 ದಿನಗಳಲ್ಲಿ ಆರಂಭವಾಗಲಿದೆ.

    ಕಳೆದ 3 ವರ್ಷಗಳಲ್ಲಿ ಟಾಟಾ ಇನ್ವೆಸ್ಟ್​ಮೆಂಟ್​ ಕಾರ್ಪೊರೇಷನ್ ಷೇರುಗಳ ಬೆಲೆ 587% ರಷ್ಟು ಏರಿಕೆಯಾಗಿದೆ. 5 ಮಾರ್ಚ್ 2021 ರಂದು ಷೇರುಗಳ ಬೆಲೆ 1110 ರೂ. ಇತ್ತು. ಕಂಪನಿಯ ಷೇರುಗಳ ಬೆಲೆ ಮಾರ್ಚ್ 1, 2024 ರಂದು ರೂ 7635.10 ತಲುಪಿದೆ. ಕಳೆದ 10 ವರ್ಷಗಳಲ್ಲಿ ಮೆಂಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ ಷೇರುಗಳು 1587% ಹೆಚ್ಚಾಗಿದೆ.

    ಕಂಪನಿಯ ಷೇರುಗಳು ಮಾರ್ಚ್ 14, 2014 ರಂದು 452.65 ರೂ. ಇತ್ತು. ಈಗ ಇದು ರೂ 7635.10 ತಲುಪಿದೆ. ಒಂದು ವರ್ಷದಲ್ಲಿ ಷೇರುಗಳ ಬೆಲೆ 279% ರಷ್ಟು ಏರಿದೆ. ಷೇರುಗಳ ಬೆಲೆ ಮಾರ್ಚ್ 2, 2023 ರಂದು 2013.35 ರೂ. ಇತ್ತು. ಕಳೆದ 6 ತಿಂಗಳಲ್ಲಿ ಈ ಷೇರುಗಳ ಬೆಲೆಯಲ್ಲಿ 211% ಏರಿಕೆಯಾಗಿದೆ. ಈ ಅವಧಿಯಲ್ಲಿ ಷೇರುಗಳ ಬೆಲೆ ರೂ. 2458.75ರಿಂದ ರೂ.7635.10ಕ್ಕೆ ಏರಿಕೆಯಾಗಿದೆ. ಈ ವರ್ಷದ ಆರಂಭದಿಂದ ಇದುವರೆಗೆ ಕಂಪನಿಯ ಷೇರುಗಳಲ್ಲಿ ಶೇ 80 ರಷ್ಟು ಹೆಚ್ಚಳವಾಗಿದೆ. ಈ ಕಂಪನಿಯ ಷೇರುಗಳ 52 ವಾರಗಳ ಗರಿಷ್ಠ ಬೆಲೆ 7635.10 ರೂ. ಹಾಗೂ ಕನಿಷ್ಠ ಬೆಲೆ 1735 ರೂ. ಇದೆ.

    ಸಾರ್ವಕಾಲಿಕ ದಾಖಲೆ ಬರೆದ ಷೇರು ಸೂಚ್ಯಂಕ: ಗೂಳಿಯ ವೇಗದ ಓಟಕ್ಕೆ ಕೊಡುಗೆ ನೀಡಿವೆ ಈ 4 ಕಾರಣಗಳು…

    ಪೇಟಿಎಂ, ಯೆಸ್ ಬ್ಯಾಂಕ್ ಷೇರುಗಳ ಬೆಲೆಯಲ್ಲಿ ದಿಢೀರ್​ ಏರಿಕೆ: ಇದರ ಹಿಂದಿದೆ ದೊಡ್ಡ ಡೀಲು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts