More

    ಪೇಟಿಎಂ, ಯೆಸ್ ಬ್ಯಾಂಕ್ ಷೇರುಗಳ ಬೆಲೆಯಲ್ಲಿ ದಿಢೀರ್​ ಏರಿಕೆ: ಇದರ ಹಿಂದಿದೆ ದೊಡ್ಡ ಡೀಲು…

    ಮುಂಬೈ: ಯೆಸ್​ ಬ್ಯಾಂಕ್​ ಮತ್ತು ಪೇಟಿಎಂ ಬ್ಯಾಂಕುಗಳ ಷೇರುಗಳ ಬೆಲೆ ಶುಕ್ರವಾರ ಸಾಕಷ್ಟು ಏರಿದೆ. ಈ ಎರಡೂ ಬ್ಯಾಂಕ್​ಗಳ ನಡುವಿನ ಪ್ರಮುಖ ಒಪ್ಪಂದವೇ ಈ ಏರಿಕೆಗೆ ಕಾರಣವಾಗಿದೆ. ಇದಲ್ಲದೆ, ಯೆಸ್ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್‌ನ ಸಹಯೋಗದೊಂದಿಗೆ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ (ಎನ್‌ಪಿಸಿಐ) ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಪೂರೈಕೆದಾರರ ಪರವಾನಗಿಗಾಗಿ ಪೇಟಿಎಂ ಅರ್ಜಿ ಸಲ್ಲಿಸಿದೆ ಎಂದು ವರದಿಯಾಗಿದೆ.

    ಯೆಸ್ ಬ್ಯಾಂಕ್ ಷೇರುಗಳ ಬೆಲೆ ಶುಕ್ರವಾರ ಶೇಕಡಾ 2ರಷ್ಟು ಏರಿಕೆ ಕಂಡರೆ, ಪೇಟಿಎಂ ಷೇರುಗಳ ಬೆಲೆ ಶೇಕಡಾ 5ರಷ್ಟು ಹೆಚ್ಚಿದೆ.

    ಪೇಟಿಎಂ (One97 Communication Limited) ಬ್ಯಾಂಕ್‌ನ ವ್ಯಾಪಾರಿ ಖಾತೆಗಳ ವರ್ಗಾವಣೆಗೆ ಒಪ್ಪಂದಕ್ಕೆ ಯೆಸ್​ ಬ್ಯಾಂಕ್​ ಸಹಿ ಹಾಕಿದೆ ಎಂದು ತಿಳಿದುಬಂದಿದೆ.

    ಪೇಟಿಎಂ ಆಪರೇಟರ್ ತನ್ನ ವ್ಯಾಪಾರಿ ಖಾತೆಗಳನ್ನು ಯೆಸ್ ಬ್ಯಾಂಕ್ ಲಿಮಿಟೆಡ್‌ಗೆ ವರ್ಗಾಯಿಸುವ ಒಪ್ಪಂದಕ್ಕೆ ಸಹಿ ಹಾಕಿರುವ ಸಾಧ್ಯತೆಯಿದೆ ಎಂದು ಎನ್​ಡಿಟಿವಿ ಪ್ರಾಫಿಟ್ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ One 97 ಕಮ್ಯುನಿಕೇಷನ್ಸ್ ಲಿಮಿಟೆಡ್ (ಪೇಟಿಎಂ) ಷೇರುಗಳು ಮೂರು ದಿನಗಳ ಕುಸಿತದ ನಂತರ ಶುಕ್ರವಾರ 5% ರಷ್ಟು ಜಿಗಿದು, 423.45 ರೂ. ತಲುಪಿದವು.

    ಕಳೆದ 12 ತಿಂಗಳುಗಳಲ್ಲಿ ಪೇಟಿಎಂ ಷೇರಿನ ಬೆಲೆಯು 33.9% ಮತ್ತು ಕಳೆದ 6 ತಿಂಗಳಲ್ಲಿ 50.57% ಕುಸಿದಿದೆ.

    ಯೆಸ್ ಬ್ಯಾಂಕ್ ಷೇರುಗಳು ಶುಕ್ರವಾರ 24.95 ರೂ ತಲುಪಿದವು. ಕಳೆದೊಂದು ವಾರದಲ್ಲಿ ಯೆಸ್ ಬ್ಯಾಂಕ್ ಷೇರುಗಳ ಬೆಲೆ ಶೇಕಡಾ 5 ರಷ್ಟು ಕುಸಿದಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ, ಯೆಸ್ ಬ್ಯಾಂಕ್‌ನ ಷೇರುಗಳ ಬೆಲೆ ಶೇಕಡಾ 4.39ರಷ್ಟು ಹೆಚ್ಚಾಗಿದೆ.

    ರೂ. 13 ರಿಂದ 632ಕ್ಕೆ ಏರಿದ ಟಾಟಾ ಗ್ರೂಪ್​ ಷೇರು: ಜಮಶೆಡ್‌ಪುರ ಉತ್ಪಾದನೆ ಘಟಕ ಶುರುವಾಗುತ್ತಿದ್ದಂತೆಯೇ ಸ್ಟಾಕ್​ಗೆ ಭರ್ಜರಿ ಬೇಡಿಕೆ

    ಪಿಎಂ ಸೂರ್ಯ ಗೃಹ ಉಚಿತ ವಿದ್ಯುತ್ ಯೋಜನೆಗೆ ಕ್ಯಾಬಿನೆಟ್​ ಅನುಮತಿ: 78,000 ರೂಪಾಯಿವರೆಗೂ ಸಬ್ಸಿಡಿ; ಸೋಲಾರ್​ ಷೇರುಗಳಲ್ಲಿ ಏರಿಕೆ

    ರಜಾ ದಿನವಾದ ಶನಿವಾರವೂ ಷೇರು ಮಾರುಕಟ್ಟೆಯಲ್ಲಿ ವಹಿವಾಟು: ವಿಶೇಷ ಟ್ರೇಡಿಂಗ್​ ಸೆಷನ್ಸ್​ ನಡೆಯುತ್ತಿರುವುದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts