More

    ಕರ್ಮಭೂಮಿ ಕರ್ನಾಟಕದ ಋಣ ತೀರಿಸಲು ಬಂದಿರುವೆ: ಅಂಜಲಿ ತಿರುಗೇಟು

    ಕಾರವಾರ: ನನ್ನ ಹುಟ್ಟಿನ ಬಗ್ಗೆಯೂ ಬಿಜೆಪಿಗರು ಚರ್ಚೆ ಮಾಡುತ್ತಿದ್ದಾರೆ. ಹೌದು, ನಾನು ಹುಟ್ಟಿದ್ದು ಮುಂಬೈನಲ್ಲೇ. ಬೇಕಿದ್ದರೆ ಜನ್ಮ ದಾಖಲೆಯನ್ನೂ ಕೊಡುವೆ. ಇದೇ ಧರ್ಮ, ಜಾತಿಯಲ್ಲೇ ಹುಟ್ಟಬೇಕೆಂಬುದು ನಮ್ಮ ಕೈಯಲ್ಲಿ ಇರೋದಿಲ್ಲ; ಅದು ತಾಯಿಯಿಂದ ನಮಗೆ ಬರುವಂಥದ್ದು. ಆದರೆ ನನ್ನ ಕರ್ಮಭೂಮಿ, ಕೆಲಸ ಮಾಡುತ್ತಿರುವುದು ಕರ್ನಾಟಕದಲ್ಲಿ. ಈ ರಾಜ್ಯದ ಅನ್ನ ತಿಂದಿದ್ದೇನೆ, ನೀರು ಕುಡಿದಿದ್ದೇನೆ. ಆ ಋಣ ತೀರಿಸಲು ಸಮಾಜಸೇವೆಗೆ ಬಂದಿದ್ದೇನೆ. ಸಾವು ಕೂಡ ನನ್ನ ಕೈಯಲ್ಲಿಲ್ಲ, ಎಲ್ಲಿ ಸಾಯುತ್ತೇನೆಂದೂ ಗೊತ್ತಿಲ್ಲ. ಹುಟ್ಟು- ಸಾವುಗಳ ನಡುವೆ ಜನರಿಗಾಗಿ ಏನಾದರೂ ಮಾಡಬೇಕೆನ್ನುವುದಷ್ಟೇ ನನಗಿರುವುದು‌ ಎಂದು ‘ಡಾ.ಅಂಜಲಿ ನಿಂಬಾಳ್ಕರ್ ಮಹಾರಾಷ್ಟ್ರದವರು’ ಎಂಬ ಬಿಜೆಪಿಗರ ಟೀಕೆಗೆ ಡಾ.ಅಂಜಲಿ ತಿರುಗೇಟು ನೀಡಿದರು.

    Dr.anjli-Nimbalkar

    ಕಾಗೇರಿಯವರು ಎಲ್ಲಿ ಹುಟ್ಟಿದ್ದಾರೆಂಬುದು ನನಗೆ ಸರಿಯಾಗಿ ಗೊತ್ತಿಲ್ಲ. ಶಿರಸಿಯಲ್ಲೇ ಹುಟ್ಟಿದ್ದಾರೆಂದುಕೊಂಡಿದ್ದೇನೆ. ಹಾಗಿದ್ದರೆ ಹುಟ್ಟಿದ ಶಿರಸಿಗೆ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿ ಅವರು ಏನು ಕೊಟ್ಟಿದ್ದಾರೆ? ಶಿಕ್ಷಣ ಮಂತ್ರಿಯಾಗಿ ಒಂದು ಶಾಲೆ ಶಿರಸಿಗೆ ಕೊಟ್ಟಿದ್ದರೆ ತೋರಿಸಲಿ. ಅವರೂರಿನ ಜನರೇ ಬದಲಾವಣೆ ಬೇಕೆಂದು ಭೀಮಣ್ಣರನ್ನ ಶಾಸಕರನ್ನಾಗಿ ಮಾಡಿದ್ದಾರೆ. ಚುನಾವಣೆ ಬಂದಾಗ ಜಾತಿ, ಧರ್ಮದ ಹೆಸರಿನಲ್ಲಿ ಬೆಂಕಿ ಹಚ್ಚುವುದನ್ನ ದಯವಿಟ್ಟು ಬಿಟ್ಟುಬಿಡಿ. ಜನರಿಗಾಗಿ ಏನು ಮಾಡಿದ್ದೀರೋ ಅದನ್ನ ತೋರಿಸಿ ಮತಯಾಚನೆ ಮಾಡಿ ಎಂದರು.

    ಬೆಳಗಾವಿಯಿಂದ ಸ್ಪರ್ಧಿಸಿರುವ ಜಗದೀಶ್ ಶೆಟ್ಟರ್ ಎಲ್ಲಿಯವರು? ಬಿಜೆಪಿಗರು ಮೋದಿಯನ್ನ ಪ್ರಧಾನಿ ಮಾಡಲು ಮತ ಹಾಕಿ ಎನ್ನುತ್ತಿದ್ದಾರೆ. ಹಾಗಿದ್ದರೆ ಮೋದಿಯವರು ಹುಟ್ಟಿದ್ದು ಎಲ್ಲಿಂದ ಎಂದು ಜನರೂ ಬಿಜೆಪಿಗರನ್ನ ಕೇಳಬೇಕು ಎಂದರು.

    https://www.vijayavani.net/womens-voting-boot-staff-falicitated

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts