More

    ಶಾಸಕ ಎಚ್.ಪಿ. ಸ್ವರೂಪ್ ದಂಪತಿ ಮಾತದಾನ

    ಹಾಸನ: ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಶುಕ್ರವಾರ ಶಾಸಕ ಎಚ್.ಪಿ. ಸ್ವರೂಪ್ ಮತ್ತು ಪತ್ನಿ ಶ್ವೇತಾ ಜತೆ ಆಗಮಿಸಿ ಹೇಮಾವತಿ ನಗರದಲ್ಲಿರುವ ರಾಯಲ್ ಅಪೋಲೊ ಶಾಲೆಯಲ್ಲಿ ಮತದಾನ ಮಾಡಿದರು.
    ನಂತರ ಮಾಧ್ಯಮದೊಂದಿಗೆ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಜನರು ಒಲವು ತೋರಿದ್ದು, ನೂರಕ್ಕೆ ನೂರು ಭಾಗ ಗೆಲುವು ಪಡೆಯುತ್ತಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು.
    ರಾಜ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಮೂರು ಕಡೆ ಸ್ಪರ್ದೆ ಮಾಡಿದ್ದು, ರಾಜ್ಯದಲ್ಲಿ 28 ಸ್ಥಾನಕ್ಕೆ 28 ಕೂಡ ಎನ್‌ಡಿಎಗೆ ಅಭ್ಯರ್ಥಿಗಳು ಗೆಲ್ಲುತ್ತಾರೆ. ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಅಭಿವೃದ್ಧಿಯಿಂದ ನಮಗೆ ಗೆಲುವಿಗೆ ಪೂರಕವಾಗಿದೆ ಎಂದರು. ಹಾಸನ ಕ್ಷೇತ್ರದಲ್ಲಿ 20 ಸಾವಿರ ಅಂತರದಲ್ಲಿ ಹೆಚ್ಚಿನ ಮತಗಳು ಸಿಗಲಿದೆ ಎಂದು ಹೇಳಿದರು.
    ನನ್ನ ಕ್ಷೇತ್ರದಲ್ಲಿ ರಾಯಲ್ ಅಪೋಲೊ ಶಾಲೆ ಆವರಣದಲ್ಲಿ ನಾನು ಮತ್ತು ಪತ್ನಿ ಮತ ಹಾಕಲು ಬಂದಾಗ ಇಲ್ಲಿರುವ ನಾಲ್ಕು ಮತಗಟ್ಟೆಗಳಲ್ಲಿ 8 ಗಂಟೆ ಆದರೂ ಇನ್ನೂ ಕೂಡ ಇಬ್ಬರೂ ಬಿ.ಎಲ್.ಓ.ಗಳು ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲ. ಈ ಕಾರಣದಿಂದಲೇ ಸಲ್ಪ ಗೊಂದಲದ ವಾತವರಣ ಸೃಷ್ಠಿಯಾಯಿತು. ಈ ಸಮಸ್ಯೆ ಬೇರೆ ಮತಗಟ್ಟೆಗಳಲ್ಲೂ ಇದೆ ಪರಿಸ್ಥಿತಿ ಇರಬಹುದಾ ಎಂಬುದನ್ನು ತಿಳಿಯಲು ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡುವಂತೆ ಮನವಿ ಮಾಡಿದ್ದಾನೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts