ಬೆಂಗಳೂರು: ರಾಜ್ಯದಲ್ಲಿ ಜೈನಮುನಿ ಕಾಮಕುಮಾರ ನಂದಿ ಮಹಾರಾಜ ಹಾಗೂ ಬಿಜೆಪಿ ಕಾರ್ಯಕರ್ತ ವೇಣುಗೋಪಾಲ್ ಅವರ ಹತ್ಯೆಗೆ ಸಂಬಂಧಿಸಿದಂತೆ ಸತ್ಯಾಸತ್ಯತೆ ಪರಿಶೀಲನೆಗಾಗಿ ಬಿಜೆಪಿ ಎರಡು ತಂಡಗಳನ್ನು ರಚನೆ ಮಾಡಿದೆ.
ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಈ ತಂಡಗಳನ್ನು ರಚನೆ ಮಾಡಲಾಗಿದ್ದು, ಇದರಲ್ಲಿ ಒಂದು ತಂಡ ನಾಳೆ ಬೆಳಗಾವಿಗೆ ಹಾಗೂ ಇನ್ನೊಂದು ತಂಡ ಮೈಸೂರಿಗೆ ತೆರಳಿ ಪ್ರಕರಣದ ಕುರಿತು ಸತ್ಯಾಸತ್ಯತೆಗಳನ್ನು ಪರಿಶೀಲಿಸಿ ಮಾಹಿತಿ ಕಲೆ ಹಾಕಲಿವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ತಿಳಿಸಿದ್ದಾರೆ.
ಇದನ್ನೂ ಓದಿ: ಹಿಂದೂಗಳು ಪೂಜೆ ಮಾಡಲು ಪೊಲೀಸ್-ಬಿಬಿಎಂಪಿ ಅನುಮತಿ ಬೇಕೇ?: ವಿವಾದ ಸೃಷ್ಟಿಸಿದ್ದ ಪೊಲೀಸರ ನೋಟಿಸ್ಗೆ ಯತ್ನಾಳ್ ಪ್ರಶ್ನೆ
ಜೈನಮುನಿ ಕಾಮಕುಮಾರ ಸ್ವಾಮೀಜಿ ಹತ್ಯೆ ಸಂಬಂಧ ಸತ್ಯಾಸತ್ಯತೆ ಪರಿಶೀಲನಾ ತಂಡದ ನೇತೃತ್ವವನ್ನು ನಳಿನ್ ಕುಮಾರ್ ಕಟೀಲ್ ಹಾಗೂ ಹಿಂದೂ ಕಾರ್ಯಕರ್ತ ವೇಣುಗೋಪಾಲ್ ಹತ್ಯೆಯ ಸತ್ಯಾಸತ್ಯತೆ ಪರಿಶೀಲನಾ ತಂಡದ ನೇತೃತ್ವವನ್ನು ಸಿ.ಟಿ.ರವಿ ವಹಿಸಲಿದ್ದಾರೆ.