ನ್ಯೂಸ್

BBKS10| ಕಿಚ್ಚನ ಕೊನೆ ಪಂಚಾಯಿತಿಗೆ ಸಿಕ್ಕ ಟಿಆರ್​ಪಿ ಎಷ್ಟು ಗೊತ್ತಾ?; ಇಲ್ಲಿದೆ ಪೂರ್ಣ ವಿವರ

Webdesk - Manjunatha B

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ ಇತ್ತೀಚಿಗೆ ಮುಕ್ತಾಯಗೊಂಡಿದ್ದು, ಹಿಂದಿನ ಸೀಸನ್​ಗಳಿಗೆ ಹೋಲಿಸಿದರೆ ಈ ಆವೃತ್ತಿಯು ಪ್ರೇಕ್ಷಕರಿಂದ ಹೆಚ್ಚು ಪ್ರಶಂಸೆಗೆ ಒಳಪಟ್ಟಿದ್ದು, ಉತ್ತಮ ಟಿಆರ್​ಪಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ವಾರಾಂತ್ಯದಲ್ಲಿ ಕಿಚ್ಚ ಸುದೀಙ್​ ನಡೆಸಿ ಕೊಡುವ ಪಂಚಾಯಿತಿ ಎಪಿಸೋಡ್​ ಕೂಡ 9+ ಟಿಆರ್​ಪಿ ಪಡೆದ ಉದಾಹರಣೆ ಇದೆ.

ಇದೀಗ ಕೇಳಿಬಂದಿರುವ ಮಾಹಿತಿ ಪ್ರಕಾರ ಫಿನಾಲೆ ವಾರಕ್ಕೂ ಮುನ್ನ ಕಿಚ್ಚ ಸುದೀಪ್​ ಕಡೆಯದಾಗಿ ನಡೆಸಿಕೊಟ್ಟ ಪಂಚಾಯ್ತಿಯ ಟಿಆರ್​ಪಿ ಹೊರ ಬಿದ್ದಿದೆ. ಈ ವೇಳೆಯೂ ಭರ್ಜರಿ ಟಿಆರ್​ಪಿ ಪಡೆದೇ ಬಿಗ್​ಬಾಸ್​ ಕೊನೆಗೊಂಡಿದೆ.

ಕಿಚ್ಚ ಸುದೀಪ್​ ನಡೆಸಿಕೊಟ್ಟ ಕೊನೆಯ ಪಂಚಾಯಿತಿ ಎಪಿಸೋಡ್​ಗೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್​ ಪಡೆದಿದ್ದು, ಶನಿವಾರದ ಎಪಿಸೋಡ್​ಗೆ 8.8 ರೇಟಿಂಗ್ ಹಾಗೂ ಭಾನುವಾರ ಎಪಿಸೋಡ್​ಗೆ 8.7 ರೇಟಿಂಗ್ ಸಿಕ್ಕಿದೆ. ಫಿನಾಲೆ ವಾರಗಳಲ್ಲಿ ಬಿಗ್ ಬಾಸ್ 7.4  ರೇಟಿಂಗ್ ಪಡೆದಿದೆ. ಈ ಮೂಲಕ ಒಳ್ಳೆಯ ರೀತಿಯಲ್ಲಿ ಬಿಗ್​ಬಾಸ್ ಕೊನೆಗೊಂಡಿದೆ. ಫಿನಾಲೆ ವಾರದ ಟಿಆರ್​ಪಿ ಮುಂದಿನ ವಾರ ಹೊರಬೀಳಲಿದ್ದು, ಕಾದು ನೋಡಬೇಕಿದೆ.