More

    ಜನಸಂಖ್ಯೆ ನಿಯಂತ್ರಣಕ್ಕೆ ಸಮಿತಿ ರಚನೆ; ಮುಸ್ಲಿಂ ಸಮುದಾಯಕ್ಕೆ ಕಳಂಕ ತರುವ ಯತ್ನ ಎಂದ ವಿಪಕ್ಷಗಳು

    ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 01ರಂದು ಮಧ್ಯಂತರ ಬಜೆಟ್ ಮಂಡಿಸಿದ್ದುಇ ಪ್ರಮುಖ ಘೋಷಣೆಗಳನ್ನು ಮಾಡಿದ್ಧಾರೆ. ಜನಸಂಖ್ಯೆ ನಿಯಂತ್ರಣದ ಕುರಿತು ಉನ್ನತ ಮಟ್ಟದ ಸಮಿತಿಯನ್ನು ರಚಿಸುವುದಾಗಿ ಘೋಷಿಸಿದ್ದಾರೆ.

    ಜನಸಂಖ್ಯೆಯ ವೇಗದ ಬೆಳವಣಿಗೆ ಮತ್ತು ಬದಲಾವಣೆಗಳಿಂದ ಉದ್ಭವಿಸಿರುವ ಸವಾಲುಗಳನ್ನು ಸಮಗ್ರವಾಗಿ ಪರಿಶೀಲಿಸಲು ಸರ್ಕಾರವು ಉನ್ನತ ಅಧಿಕಾರದ ಸಮಿತಿಯನ್ನು ರಚಿಸಲಿದೆ ಎಂದು ಬಜೆಟ್​ ಭಾಷಣದ ವೇಳೆ ನಿರ್ಮಲಾ ಸೀತಾರಾಮನ್​ ತಿಳಿಸಿದ್ದರು. ಆದರೆ, ಇದಕ್ಕೆ ಅಪಸ್ವರ ತೆಗೆದಿರುವ ವಿಪಕ್ಷದ ಸದಸ್ಯರು ಮುಸ್ಲಿಮರನ್ನು ದೂಷಿಸುವುದಕ್ಕೆ ಬಜೆಟ್​ನಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಸಿಇರುವ ಸಿಪಿಐ(ಎಂ) ಸಂಸದ (ರಾಜ್ಯಸಭೆ) ಜಾನ್ ಬ್ರಿಟ್ಟಾಸ್, ಇದು ಮುಸ್ಲಿಂ ಸಮುದಾಯಕ್ಕೆ ಕಳಂಕ ತರುವ ಯತ್ನವಾಗಿದೆ. ವಾಸ್ತವವಾಗಿ ಜನಸಂಖ್ಯೆಯನ್ನು ನಿಯಂತ್ರಿಸಲು ಕಾರಣವಾಗುವ ಶಿಕ್ಷಣವನ್ನು ಒದಗಿಸುವಂತಹ ಮೂಲಭೂತ ಕಾಳಜಿಗಳನ್ನು ಪರಿಹರಿಸುವ ಬದಲು, ಈ ಸರ್ಕಾರವು ಬೇರೆಯದ್ದೆ ಯೋಚಿಸುತ್ತಿದೆ.

    Budget

    ಇದನ್ನೂ ಓದಿ: ಪಾದಯಾತ್ರೆ ಮೂಲಕ ಅಯೋಧ್ಯೆಗೆ ತೆರಳಿ ಬಾಲರಾಮನಿಗೆ ಭಕ್ತಿ ಸಮರ್ಪಿಸಿದ 350 ಮುಸ್ಲಿಮರು

    ಆರೆಸ್ಸೆಸ್, ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳು ಜನಸಂಖ್ಯೆಯ ಬೆಳವಣಿಗೆಯ ವಿಷಯವನ್ನು ಪದೇ ಪದೇ ಎತ್ತುತ್ತಿದ್ದು, ಮುಸ್ಲಿಮರ ಜನಸಂಖ್ಯೆ ಬೆಳವಣಿಗೆ ಕುಸಿದಿದ್ದರೂ ಅವರತ್ತ ಬೆರಳು ತೋರಿಸುತ್ತಿವೆ. ಪ್ರತಿಬಾರಿ ಬಿಜೆಪಿ ಈ ವಿಚಾರವನ್ನು ಪ್ರಸ್ತಾಪ ಮಾಡುತ್ತಿದ್ದು, ನಮಗೆ ಈ ಬಗ್ಗೆ ಕೆಲವು ಅನುಮಾನಗಳಿವೆ. ಈ ಬಗ್ಗೆ ವಿವರವಾದ ಸ್ಪಷ್ಟನೆಯನ್ನು ನೀಡಿ ಆ ನಂತರ ಸಮಿತಿಯನ್ನು ರಚಿಸಿದರೆ ಸರ್ಕಾರಕ್ಕೆ ಒಳಿತು ಎಂದು ಸಿಪಿಐ(ಎಂ) ಸಂಸದ (ರಾಜ್ಯಸಭೆ) ಜಾನ್ ಬ್ರಿಟ್ಟಾಸ್ ಆಗ್ರಹಿಸಿದ್ದಾರೆ.

    ಜನಸಂಖ್ಯೆ ನಿಯಂತ್ರಣ ಕಾನೂನನ್ನು ರೂಪಿಸಲು ಸರ್ಕಾರ ಕೆಲಸ ಮಾಡುತ್ತಿದೆ. ತಾನು ಸಚಿವರಾಗುವ ಮುನ್ನ ಲೋಕಸಭೆಯಲ್ಲಿ ಮಂಡಿಸಿದ ಖಾಸಗಿ ಸದಸ್ಯರ ಮಸೂದೆಯಲ್ಲಿ, ದೇಶ ಎದುರಿಸುತ್ತಿರುವ ಬಹುಪಾಲು ಸಮಸ್ಯೆಗಳಿಗೆ ಮೂಲ ಕಾರಣ ಜನಸಂಖ್ಯೆಯ ಅನಿಯಂತ್ರಿತ ಬೆಳವಣಿಗೆ ಎಂದು ಬಿಜೆಪಿ ಸಂಸದ ಸಂಜೀವ್​ ಬಲ್ಯಾನ್​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts