More

    ಮದ್ಯಪ್ರಿಯರಿಗೆ ಶಾಕ್​ ನೀಡಿದ ಸರ್ಕಾರ; ರಾತ್ರೋರಾತ್ರಿ ಏರಿಕೆಯಾಯ್ತು ಬಿಯರ್​ ಬೆಲೆ

    ಬೆಂಗಳೂರು: ಬಜೆಟ್​ ಮಂಡನೆಯಾಗುವುದಕ್ಕೂ ಮುನ್ನವೇ ರಾಜ್ಯ ಸರ್ಕಾರ ಮದ್ಯಪ್ರಿಯರಿಗೆ ಶಾಕ್ ನೀಡಿದ್ದು, ಫೆಬ್ರವರಿ 01ರಿಂದ ಅನ್ವಯವಾಗುವಂತೆ ಬಿಯರ್​ ದರವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ಅಬಕಾರಿ ಸುಂಕವನ್ನು ಶೇ.185 ರಿಂದ 195ಕ್ಕೆ ಹೆಚ್ಚಳ ಮಾಡಿರುವುದರಿಂದ ಬಿಯರ್‌ ಬೆಲೆ ಏರಿಕೆಯಾಗಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

    ಈ ಹಿಂದೆ ಅಬಕಾರಿ ಇಲಾಖೆ ಸುಂಕ ಹೆಚ್ಚಳದ ಕುರಿತು ಕರಡನ್ನು ಪ್ರಕಟಿಸಿತ್ತು. ಬಳಿಕ ಸಲ್ಲಿಕೆಯಾದ ಆಕ್ಷೇಪಣೆ ಪರಿಗಣಿಸಿ ಇದೀಗ ಸುಂಕ ಏರಿಕೆಯ ಕುರಿತು ಅಂತಿಮ ಆದೇಶ ಹೊರಡಿಸಿದ್ದು, ಅದರಂತೆ ಬಿಯರ್‌ ದರ ಪ್ರತಿ ಬಾಟಲ್‌ಗೆ 5 ರೂಪಾಯಿಗಳಿಂದ 12 ರೂಪಾಯಿವರೆಗೂ ಹೆಚ್ಚಳವಾಗಲಿದೆ ಎಂದು ತಿಳಿದು ಬಂದಿದೆ.

    vidhanasoudha

    ಇದನ್ನೂ ಓದಿ: ಆದಾಯಕ್ಕೂ ಮೀರಿ ಅಧಿಕ ಗಳಿಕೆ; ಜೆಇ ಹನುಮಂತರಾಯಪ್ಪ ಹೆಸರಲ್ಲಿ ಅಪಾರ ಪ್ರಮಾಣದ ಆಸ್ತಿ ಪತ್ತೆ

    ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎರಡನೇ ಬಾರಿಗೆ ಬಿಯರ್​ ದರವನ್ನು ಹೆಚ್ಚಿಸಿದ್ದು, 2023ರ ಜುಲೈ 07ರಂದು ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್​ನಲ್ಲಿ ಬಿಯರ್​ ಮೇಲಿನ ಅಬಕಾರಿ ಸುಂಕವನ್ನು ಶೇ.20 ರಷ್ಟು ಹೆಚ್ಚಳ ಮಾಡಲಾಗಿತ್ತು. ಫೆಬ್ರವರಿ 16ರಂದು ರಾಜ್ಯ ಬಜೆಟ್​ ಮಂಡನೆಯಾಗಲಿದ್ದು, ಇದಾದ ಬಳಿಕ ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಳ ಮಾಡುವ ಸಾಧ್ಯತೆ ದಟ್ಟವಾಗಿದೆ.

    ರಾಜ್ಯದಲ್ಲಿ ಬಿಯರ್​ ಮಾರಾಟದಲ್ಲಿ ದೊಡ್ಡ ಮಟ್ಟದ ಬೆಳವಣಿಗೆ ಆಗಿರುವುದರಿಂದ ಈ ಹಿನ್ನಲೆಯಲ್ಲಿ ಸರ್ಕಾರ ಅಬಕಾರಿ ಸುಂಕ ಹೆಚ್ಚಿಸುವುದಕ್ಕೆ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts