ನ್ಯೂಸ್

ಬೆಂಗಳೂರು ಬಂದ್​: ಕಾವೇರಿ ಕಿಚ್ಚು ಜೋರು, ಬೆಂಗ್ಳೂರಿಂದ ಕಾಲ್ಕಿತ್ತ ತಮಿಳುನಾಡು ಬಸ್​ಗಳು, ಇಂದು ಏನಿರುತ್ತೆ? ಏನಿರಲ್ಲ?

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಬಿಟ್ಟಿರುವುದನ್ನು ಖಂಡಿಸಿ ವಿವಿಧ ಸಂಘಟನೆ ಕರೆ ಕೊಟ್ಟಿರುವ ಇಂದಿನ ಬೆಂಗಳೂರು ಬಂದ್​ಗೆ ಅನೇಕ ಸಂಘಟನೆಗಳು ಬೆಂಬಲ ನೀಡಿದ್ದು, ಇಂದು ಬೆಳಗ್ಗೆಯಿಂದಲೇ ರಾಜಧಾನಿ ಸ್ತಬ್ಧವಾಗಿದೆ. ನಗರದಲ್ಲಿ ಸಂಚಾರ ವಿರಳವಾಗಿದೆ. ತಮಿಳುನಾಡಿಗೆ ಸ್ಯಾಟಲೈಟ್​ ಬಸ್​ ನಿಲ್ದಾಣದಿಂದ ಒಂದೇ ಒಂದು ಬಸ್​ ಹೊರಟಿದೆ. ನಗರಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್​ ಕೈಗೊಳ್ಳಲಾಗಿದ್ದು, 144 ಸೆಕ್ಷನ್​ ಜಾರಿ ಮಾಡಲಾಗಿದೆ. ಸಿಎಂ ನಿವಾಸಕ್ಕೆ ಪ್ರತಿಭಟನಾಕಾರರು ಮುತ್ತಿಗೆ ಹಾಕುವ ಸಾಧ್ಯತೆ ಇರುವುದರಿಂದ ಸಿಎಂ ಅವರ ಕಾವೇರಿ ನಿವಾಸದ ಬಳಿ ಭಾರೀ ಭದ್ರತೆ ನಿಯೋಜಿಸಲಾಗಿದೆ.

ಬಂದ್​ ಹಿನ್ನೆಲೆಯಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬಹುತೇಕ ಸೇವೆಗಳು ಇಂದು ಸ್ತಬ್ಧವಾಗಲಿದೆ. ಹಾಗಾದರೆ ಇಂದು ಏನಿರುತ್ತೆ? ಏನಿರುವುದಿಲ್ಲ ಎಂಬುನ್ನು ತಿಳಿಯೋಣ.

ಏನೇನಿರುತ್ತೆ?  

* ಆಸ್ಪತ್ರೆ

* ಮೆಡಿಕಲ್ ಸ್ಟೋರ್‌

* ಹಾಲಿನ ಬೂತ್‌

* ಅಗತ್ಯ ವಸ್ತುಗಳು

* ಮೆಟ್ರೋ

* ಆಂಬುಲೆನ್ಸ್

ಏನಿರಲ್ಲ?  

* ಆಟೋ, ಕ್ಯಾಬ್

* ಗೂಡ್ಸ್ ವಾಹನಗಳು

* ಖಾಸಗಿ ಬಸ್‌ಗಳು

* ಥಿಯೇಟರ್‌

* ಸೂಪರ್ ಮಾರ್ಕೆಟ್‌

* ಶಾಲಾ -ಕಾಲೇಜ್‌

* ಅಂಗಡಿಗಳು

* ಬೀದಿ ಬದಿ ಅಂಗಡಿಗಳು

* ಜ್ಯುವೆಲ್ಲರಿ ಶಾಪ್‌ಗಳು

* ಕೈಗಾರಿಕೆಗಳು

* ಹೋಟೆಲ್‌ಗಳು

* ಮಾಲ್‌ಗಳು

ರಾಜ್ಯದ ಆಡಳಿತ ಶಕ್ತಿ ಕೇಂದ್ರವಾಗಿರುವ ಬೆಂಗಳೂರಿನಲ್ಲಿ ಪ್ರತಿಭಟನೆ, ಬಂದ್ ನಡೆಸಿದರೆ ರಾಜ್ಯ ಸರ್ಕಾರದ ಗಮನವನ್ನು ಹೆಚ್ಚಿನ ಮಟ್ಟಿಗೆ ಸೆಳೆದು ಕೇಂದ್ರದ ಮೇಲೆ ಮತ್ತು ಕಾನೂನಾತ್ಮಕವಾಗಿ ಕಾವೇರಿ ನೀರಿಗಾಗಿ ಮುಂದಿನ ದಿನಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಹೋರಾಟ ನಡೆಸಲು ಉತ್ತಮ ಎಂದು ವಿವಿಧ ಸಂಘಟನೆಗಳು ಇಂದು ಬಂದ್​ ನಡೆಸುತ್ತಿವೆ.

ತಮಿಳುನಾಡಿಗೆ ಹೊರಟ ಬಸ್

ರಾಜಧಾನಿಯಿಂದ ತಮಿಳುನಾಡಿಗೆ ಮೊದಲ ಕೆಎಸ್​ಆರ್​ಟಿಸಿ ಬಸ್ ಸ್ಯಾಟಲೈಟ್​ ಬಸ್​ ನಿಲ್ದಾಣದಿಂದ ಹೊರಟಿದೆ. ಯಾವುದೇ ಅಹಿತಕರ ಘಟನೆ ನಡೆಯದಿದ್ದರೆ ಮತ್ತಷ್ಟು‌ ಬಸ್ ಆಪರೇಟ್ ಮಾಡಲು ತೀರ್ಮಾನಿಸಲಾಗಿದೆ. ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ತಮಿಳುನಾಡು ಬಸ್​ ಹೊಸೂರಿಗೆ

ಬೆಂಗಳೂರು ಬಂದ್ ಹಿನ್ನಲೆಯಲ್ಲಿ ತಮಿಳುನಾಡಿನ ಬಸ್​ಗಳು ಸ್ಯಾಟಲೈಟ್ ಬಸ್ ನಿಲ್ದಾಣದ ಕಡೆ ಮುಖ‌ ಮಾಡಿಲ್ಲ. ನಿನ್ನೆ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಬಂದ ತಮಿಳುನಾಡು ಬಸ್​ಗಳು ಸಹ ವಾಪಸ್ಸಾಗುತ್ತಿವೆ. ಪ್ರತಿ ದಿನ ಬೆಳಗ್ಗೆ ಸುಮಾರು 50 ತಮಿಳುನಾಡು ಬಸ್ ಆಪರೇಟ್ ಆಗುತ್ತದೆ. ಆದರೆ, ಈಗ ಒಂದು ಬಸ್​ ಕೂಡ ಇಲ್ಲ. ಎಲ್ಲ ಬಸ್​ಗಳು ತಮಿಳುನಾಡಿನ ಹೊಸೂರು ಕಡೆ ಹೊರಟಿವೆ.

ಸಿಎಂ ನಿವಾಸಕ್ಕೆ ಭದ್ರತೆ

ಬಂದ್​ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಮುತ್ತಿಗೆ ಹಾಕುವ ಸಾಧ್ಯತೆ ಇರುವುದರಿಂದ ಸಿಎಂ ನಿವಾಸದ ಬಳಿ ಬಿಗಿ ಪೊಲೀಸ್​ ಬಂದೋಬಸ್ತ್​ ಏರ್ಪಡಿಸಲಾಗಿದೆ. ಕೆಎಸ್​ಆರ್​ಪಿ ತುಕಡಿ ಸೇರಿ 50 ಪೊಲೀಸರನ್ನು ನಿಯೋಜಿಸಲಾಗಿದೆ. ಇದರ ನಡುವೆ ಸಿಎಂ ಸಿದ್ದರಾಮಯ್ಯ ಇಂದು ಮೈಸೂರಿಗೆ ತೆರಳಲಿದ್ದಾರೆ. ಬೆಳಗ್ಗೆ 9.30ಕ್ಕೆ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ಮೈಸೂರಿಗೆ ಹೋಗಲಿದ್ದಾರೆ.

ಬಂದ್ ಗೆ ಯಾರೆದೆಲ್ಲ ಬೆಂಬಲ ಇದೆ?

• ಪೀಸ್ ಆಟೋ ಯೂನಿಯನ್

• ಖಾಸಗಿ ವಾಹನ ಮಾಲೀಕರು ಚಾಲಕರ ಒಕ್ಕೂಟ

• ಕರ್ನಾಟಕ ವಕೀಲರ ಸಂಘ

•ಬೆಂಗಳೂರು ವಕೀಲರ ಸಂಘ

• FKCCI, ಕಾಸಿಯಾ, ಪೀಣ್ಯ ಇಂಡಸ್ಟ್ರಿಯಲ್ ಅಸೋಸಿಯೇಷನ್

• BDA ನೌಕರರ ಸಂಘ

• ಬಿಡಿಎ ವಾಹನ ಚಾಲಕರ ಸಂಘ

• BWSSB ನೌಕರರ ಸಂಘ

• KSRTC ಕನ್ನಡ ಕ್ರಿಯಾ ಸಮಿತಿ

• ಅನಂತ ಸುಬ್ಬರಾವ್ ಅವ್ರ AICTU

• ಜ್ಯೂವಲರಿ ಅಸೋಸಿಯೇಷನ್

• ಎಪಿಎಂಸಿ ವರ್ತಕರ ಸಂಘ

• ಕೆ. ಆರ್. ಮಾರ್ಕೆಟ್ ಆಲ್ ಟ್ರೇಡ್ ಅಸೋಸಿಯೇಷನ್

•  ಬಟ್ಟೆ ಅಂಗಡಿ ಅಸೋಸಿಯೇಷನ್

• ಬೆಂಗಳೂರು ಎಲೆಕ್ಟ್ರಾನಿಕ್ ಡೀಲರ್ಸ್ ಅಸೋಸಿಯೇಷನ್

• ಬಿಬಿಎಂಪಿ ಪೌರಕಾರ್ಮಿಕರ ಸಂಘ ( ಅಶೋಕ್ ಸಾಲಪ್ಪ ತಂಡ)

• ಕರ್ನಾಟಕ ವಿದ್ಯುತ್​ ಗುತ್ತಿಗೆದಾರರ ಸಂಘ

ಎಲ್ಲೆಲ್ಲಿ? ಯಾವ ಸಂಘಟನೆಗಳ ಹೋರಾಟ?

• ಕಾವೇರಿ ಹೋರಾಟ ಸಮಿತಿ: ಬೆಳಗ್ಗೆ 09.30ಕ್ಕೆ ಲಾಲ್​ಬಾಗ್ ಪಶ್ಚಿಮ ದ್ವಾರದಿಂದ ಬಳೆಪೇಟೆ, ಮೈಸೂರು ಬ್ಯಾಂಕ್ ಸರ್ಕಲ್, ಟೌನ್​​ ಹಾಲ್ ಸಮೀಪ ಜನರಲ್ಲಿ ಬಂದ್​ಗೆ ಬೆಂಬಲಿಸುವಂತೆ ಮನವಿ ಮಾಡುವುದು.

• ಕನ್ನಡ ಚಳುವಳಿ ಕೇಂದ್ರ ಸಮಿತಿ: ನಾಡಪ್ರಭು ಕೆಂಪೇಗೌಡ ಪ್ರತಿಷ್ಟಾನ ವತಿಯಿಂದ ಬೆಳಗ್ಗೆ 9 ಗಂಟೆಗೆ ಟೋಲ್​​ಗೇಟ್ ಸಿಗ್ನಲ್​ನಿಂದ ಟೌನ್ ಹಾಲ್ ತನಕ ಬೈಕ್ ರ್ಯಾಲಿ

• ಜಯ ಕರ್ನಾಟಕ ಸಮರ ಸೇನೆ: ಬಾಪೂಜಿನಗರಿಂದ ಸ್ಯಾಟಲೈಟ್ ಬಸ್ ನಿಲ್ದಾಣ ತನಕ ಕಾಲ್ನಡಿಗೆ ಮೂಲಕ ಬಂದು ತಮಿಳುನಾಡು ಬಸ್ ತಡೆ. ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಟೌನ್ ಹಾಲ್ ತನಕ ಸೈಕಲ್ ಜಾಥ. ಖಾಲಿ ಬಿಂದಿಗೆಯನ್ನು ಸೈಕಲ್​ಗಳಿಗೆ ಕಟ್ಟಿಕೊಂಡು ಕೆ.ಆರ್.ಮಾರ್ಕೆಟ್, ಟೌನ್​ ಹಾಲ್ ತನಕ ಗುಲಾಬಿ ಹೂ ನೀಡಿ ಬಂದ್​ಗೆ ಮನವಿ.

• ಖಾಸಗಿ ವಾಹನ ಮಾಲೀಕರ ಒಕ್ಕೂಟ: ನ್ಯಾಷನಲ್ ಕಾಲೇಜ್ ಮೈದಾನದಿಂದ ಟೌನ್ ಹಾಲ್​ವರೆಗೆ ಒಂದು ಸಾವಿರ ಆಟೋ, 300 ಕ್ಯಾಬ್​ಗಳ ಮೂಲಕ  ಮೆರವಣಿಗೆ.

• ಸ್ವಾಭಿಮಾನಿ ಸೇನೆಯಿಂದ ಮೈಸೂರು ರೋಡ್​ನ ಗಾಳಿ ಆಂಜನೇಯ ದೇವಸ್ಥಾನ ದಿಂದ ಮೆಜೆಸ್ಟಿಕ್, ಗಾಂಧಿನಗರ, ಬ್ರಿಗೇಡ್, ಟೌನ್ ಹಾಲ್ ತನಕ ಕ್ಯಾಂಟರ್ ವಾಹನ ಮೂಲಕ ಬಂದ್ ಬಗ್ಗೆ ಜಾಗೃತಿ, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಮನವಿ.

• ಪೀಸ್ ಆಟೋ ಸಂಘಟನೆಯಿಂದ 9 ಗಂಟೆಗೆ ಆಟೋ ರ್ಯಾಲಿ.

• ಕರ್ನಾಟಕ ಕ್ರೈಸ್ತ ಸಂಘಟನೆಯಿಂದ ಟೌನ್ ಹಾಲ್​ನಿಂದ  ಫ್ರೀಡಂಪಾರ್ಕ್ ವರೆಗೆ ಬೈಕ್ ರ್ಯಾಲಿ (200 ಜನರಿಂದ)

• ನಮ್ಮ ಕರುನಾಡು ಯುವ ಸೇನೆಯಿಂದ ನವರಂಗ್ ಸರ್ಕಲ್ ಬಳಿ ಟೈರ್ ಗೆ ಬೆಂಕಿ, ರಾಜ್ಯ ನಾಯಕರ ಪ್ರತಿಕೃತಿ ದಹನ