ತಮಿಳುನಾಡು: ತಮಿಳು ಮತ್ತು ತೆಲುಗು ಚಿತ್ರರಂಗದ ಮಿಲ್ಕಿ ಬ್ಯೂಟಿ, ಕಾವಾಲಾ ಬೆಡಗಿ, ನಟಿ ತಮನ್ನಾ ಭಾಟೀಯಾ ಅಭಿನಯದ ಹಾಗೂ ಸುಂದರ್ ನಿರ್ದೇಶನದ ಬಹುನಿರೀಕ್ಷಿತ ಹಾರರ್, ಥ್ರಿಲ್ಲರ್ 'ಅರಮನೈ 4' ಸಿನಿಮಾ ಇದೇ ಏಪ್ರಿಲ್ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರ ತಯಾರಕರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದು 'ಅರಮನೈ' ಚಿತ್ರದ ಮುಂದುವರಿದ ಭಾಗವಾಗಿದೆ.
ಕಳೆದ ವರ್ಷದಿಂದ ಟ್ರೆಂಡಿಂಗ್ನಲ್ಲಿರುವ ತಮನ್ನಾ, ಬ್ಯಾಕ್ ಟು ಬ್ಯಾಕ್ ಸಿನಿಮಾ ಮತ್ತು ವೆಬ್ ಸಿರೀಸ್ಗಳಲ್ಲಿ ಅಭಿನಯಿಸುವ ಮೂಲಕ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇದೀಗ ಮಿಲ್ಕಿ ಬ್ಯೂಟಿ ನಟಿಸಿರುವ ಒಡೆಲಾ-2 ಮತ್ತು ಹಾರರ್ ಜಾನರ್ ಒಳಗೊಂಡ ಅರಮನೈ 4 ಸೇರಿದಂತೆ ಹಲವಾರು ಪ್ರಾಜೆಕ್ಟ್ಗಳು ರಿಲೀಸ್ಗೆ ಸಾಲುಗಟ್ಟಿ ನಿಂತಿವೆ.
ಇನ್ನು ಈ ಸಿನಿಮಾದ ಬಗ್ಗೆ ಎಕ್ಸ್ನಲ್ಲಿ (ಈ ಹಿಂದಿನ ಟ್ವಿಟರ್) ಮಾಹಿತಿ ಹಂಚಿಕೊಂಡ ತಮನ್ನಾ, "ಅರಮನೈ 4 ಸಿನಿಮಾ ಇದೇ ಏಪ್ರಿಲ್ 4ರಂದು ಬಿಡುಗಡೆಯಾಗಲಿದೆ. ಈ ಬೇಸಿಗೆಯಲ್ಲಿ ನಗು ಮತ್ತು ಸಾಕಷ್ಟು ಚಳಿ ಹಾಗೇ ರೋಮಾಂಚನ ಸ್ವೀಕರಿಸಲು ನೀವು ಸಿದ್ಧರಿದ್ದೀರಾ?" ಎಂದು ಚಿತ್ರದ ಮೊದಲ ಪೋಸ್ಟರ್ ಹಂಚಿಕೊಂಡಿದ್ದಾರೆ.
ಚಿತ್ರದಲ್ಲಿ ಸಂತೋಷ್ ಪ್ರತಾಪ್, ತಮನ್ನಾ ಭಾಟೀಯಾ, ರಾಶಿ ಖನ್ನಾ, ಸುಂದರ್, ಸಂತಾನಂ, ಗರುಡ ರಾಮ್, ಯೋಗಿ ಬಾಬು, ಕೋವೈ ಸರಳಾ, ರಾಜೇಂದ್ರನ್, ಗಣೇಶ್, ವಿಟಿವಿ ಗಣೇಶ್, ಸಿಂಗಂಪಲ್ಲಿ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).