More

    ಅಧ್ಯಾತ್ಮಿಕ ಸದ್ಗುರು ಜಗ್ಗಿ ವಾಸುದೇವ್ ಆರೋಗ್ಯದಲ್ಲಿ ಚೇತರಿಕೆ, ಆಸ್ಪತ್ರೆಯಿಂದ ಬಿಡುಗಡೆ

    ನವದೆಹಲಿ: ತುರ್ತು ಮಿದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಈಶಾ ಫೌಂಡೇಷನ್ ಸಂಸ್ಥಾಪಕ ಮತ್ತು ಆಧ್ಯಾತ್ಮಿಕ ಸದ್ಗುರು ಜಗ್ಗಿ ವಾಸುದೇವ್ ಅವರು ಬುಧವಾರ ದೆಹಲಿಯ ಖಾಸಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

    ಇದನ್ನೂ ಓದಿ: ಕಾಂಗ್ರೆಸ್​, ಬಿಜೆಪಿ ನಾಯಕರಿಗೆ ಕೇಂದ್ರ ಚುನಾವಣಾ ಆಯೋಗ ನೋಟಿಸ್!: ಕಾರಣ ಹೀಗಿದೆ?

    ಆಧ್ಯಾತ್ಮ ಗುರು ಸದ್ಗುರು ಜಗ್ಗಿ ವಾಸುದೇವ್ ಅವರು ಮಾರಣಾಂತಿಕವಾಗಬಲ್ಲ ಮೆದುಳಿನ ಸಮಸ್ಯೆಗೆ ಒಳಗಾಗಿದ್ದರು ಮತ್ತು ಮಾ.17ರಂದು ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.

    ಏನು ಆಗಿತ್ತು: ಮಾ.15ರಂದು ಸದ್ಗುರು ಅವರು ಎಂಆರ್‌ಐ ಸ್ಕ್ಯಾನಿಂಗ್‌ಗೆ ಒಳಗಾಗಿದ್ದರು ಮತ್ತು ಇದರಲ್ಲಿ ಮೆದುಳಿನ ತೀವ್ರ ರಕ್ತಸ್ರಾವ ಕಂಡುಬಂದಿತ್ತು. ಆದರೆ ಅವರು ತಾನು ಒಪ್ಪಿಕೊಂಡಿದ್ದ ಕಾರ್ಯಕ್ರಮಗಳನ್ನು ರದ್ದು ಮಾಡಲು ನಿರಾಕರಿಸಿದರು. ನೋವು ನಿವಾರಕ ಔಷಧಿ ಮತ್ತು ಮಾತ್ರೆಗಳನ್ನು ತೆಗೆದುಕೊಂಡು ಅವರು ಇಂಡಿಯಾ ಟುಡೇ ಕಾನ್ಕ್ಲೇವ್ ನಲ್ಲಿ ಭಾಗವಹಿಸಿದ್ದರು. ತಲೆನೋವಿನ ಕಾರಣದಿಂದಾಗಿ ಸದ್ಗುರು ಅವರನ್ನು ಆಸ್ಪತ್ರೆಗೆ ದಾಖಲಿಸಿದ ವೇಳೆ ಅವರ ಮೆದುಳಿನಲ್ಲಿ ಹಲವು ಕಡೆ ರಕ್ತಸ್ರಾವವಾಗುತ್ತಿರುವುದು ಕಂಡುಬಂದಿತ್ತು. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ ವೇಳೆ ಮಾ.17ರಂದು ದೆಹಲಿಯ ಇಂದ್ರಪ್ರಸ್ಥದಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

    ಆಸ್ಪತ್ರೆಯಲ್ಲಿ ಸದ್ಗುರುಗಳನ್ನು ಭೇಟಿಯಾದ ಅಪೋಲೋ ಹಾಸ್ಪಿಟಲ್ಸ್ ಗ್ರೂಪ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಡಾ.ಸಂಗೀತಾ ರೆಡ್ಡಿ ಮಾತನಾಡಿ, ಸದ್ಗುರುಗಳ ಚೇತರಿಕೆಯ ಬಗ್ಗೆ ವೈದ್ಯರು ತೃಪ್ತಿ ವ್ಯಕ್ತಪಡಿಸಿದ್ದಾರೆ. ಚೇತರಿಸಿಕೊಳ್ಳುತ್ತಿರುವ ಈ ಸಮಯದಲ್ಲೂ ಜಾಗತಿಕ ಒಳಿತಿಗಾಗಿ ಅವರ ಬದ್ಧತೆ, ಅವರ ತೀಕ್ಷ್ಣ ಬುದ್ಧಿ ಮತ್ತು ಅವರ ಹಾಸ್ಯಪ್ರಜ್ಞೆಯು ಎದ್ದು ಕಾಣುತ್ತಿತ್ತು. ಅವರ ಆರೋಗ್ಯದ ಬಗ್ಗೆ ವಿಚಾರಿಸುತ್ತಿರುವ ಲಕ್ಷಾಂತರ ಜನರಿಗೆ ಇದು ಒಳ್ಳೆಯ ಸುದ್ದಿ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

    ಡಿಕೆಶಿ ಮುಖ್ಯಮಂತ್ರಿ ಆಗಲೆಂದು ಅರ್ಚಕರ ಸಂಕಲ್ಪ, ಅದರಲ್ಲಿ ತಪ್ಪೇನಿಲ್ಲವೆಂದ ಡಿಕೆಶಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts