Wash Basin : ಮನೆಯ ನೆಲ ಮತ್ತು ಇತರ ಭಾಗಗಳನ್ನು ಸ್ವಚ್ಛಗೊಳಿಸುವಷ್ಟೇ ವಾಶ್ ಬೇಸಿನ್ ಕೂಡ ಸ್ವಚ್ಛ ಮಾಡಬೇಕು. ಒಂದು ವೇಳೆ ಅದರಲ್ಲಿರುವ ಸೂಕ್ಷ್ಮಜೀವಿಗಳನ್ನು ತೆಗೆದುಹಾಕದಿದ್ದರೆ, ಅನೇಕ ರೋಗಗಳು ನಮ್ಮನ್ನು ಬಾಧಿಸುತ್ತವೆ. ಅಲ್ಲದೆ, ಅತಿಥಿಗಳು ಮನೆಗೆ ಬಂದಾಗ ಕೊಳಕು ವಾಶ್ ಬೇಸಿನ್ ನೋಡಿ ಮುಜುಗರವಾಗಬಹುದು.
ಆಹಾರದ ತ್ಯಾಜ್ಯ ಮತ್ತು ಎಣ್ಣೆಯ ಜಿಡ್ಡಿನಿಂದಾಗಿ ಸಿಂಕ್ ಬೇಗನೆ ಕೊಳಕಾಗಬಹುದು. ಸೋಪು ಅಥವಾ ಇನ್ನಾವುದನ್ನಾದರೂ ಬಳಸಿ ಸ್ವಚ್ಛಗೊಳಿಸುವುದರಿಂದ ಕಲೆಗಳು ಚೆನ್ನಾಗಿ ಹೋಗದಿರಬಹುದು. ಹಾಗಾದರೆ, ವಾಶ್ ಬೇಸಿನ್ ಪಳಪಳ ಹೊಳೆಯುವಂತೆ ಮಾಡಲು ಏನು ಮಾಡಬೇಕು? ನಿಮ್ಮ ಅಡುಗೆಮನೆಯಲ್ಲಿರುವ ಕೇವಲ ಎರಡು ವಸ್ತುಗಳನ್ನು ಬಳಸಿದರೆ ಸಾಕು ಸಿಂಕ್‌ನಿಂದ ಕಲೆಗಳನ್ನು ಸುಲಭವಾಗಿ ತೆಗೆದುಹಾಕಬಹುದು.
* ಅಡುಗೆ ಸೋಡಾ
* ನಿಂಬೆ ರಸ
ಅಡುಗೆ ಸೋಡಾ ತೆಗೆದುಕೊಳ್ಳಿ. ಅದಕ್ಕೆ ಒಂದು ಹೋಳು ನಿಂಬೆ ರಸ (ಸಣ್ಣ ನಿಂಬೆಹಣ್ಣಾಗಿದ್ದರೆ ಇಡೀ ನಿಂಬೆಹಣ್ಣನ್ನು) ಸೇರಿಸಿ ಮಿಶ್ರಣ ಮಾಡಿ. ನಂತರ ನಿಂಬೆ ಸಿಪ್ಪೆಯನ್ನು ಅದರಲ್ಲಿ ಅದ್ದಿ ವಾಶ್ ಬೇಸಿನ್ ಮೇಲೆ ಚೆನ್ನಾಗಿ ಉಜ್ಜಿ. ಈಗ ಬ್ರಷ್ ಬಳಸಿ ಚೆನ್ನಾಗಿ ಸ್ಕ್ರಬ್ ಮಾಡಿ. ಈ ಮಾಡಿ ನೀರಿನಲ್ಲಿ ತೊಳೆದರೆ ಕ್ಷಣಾರ್ಧದಲ್ಲೇ ಎಲ್ಲ ಕೊಳೆಯನ್ನು ತೆಗೆದುಹಾಕುವುದನ್ನು ನೀವು ನೋಡುತ್ತೀರಿ.
ಅಡಿಗೆ ಸೋಡಾ ಮತ್ತು ಬಿಳಿ ವಿನೆಗರ್ ಬೆರೆಸಿ ಕೂಡ ವಾಶ್ ಬೇಸಿನ್ ಸ್ವಚ್ಛಗೊಳಿಸಬಹುದು. ಸಿಂಕ್ನಲ್ಲಿ ಒಂದೇ ಒಂದು ಹನಿ ನೀರು ಇರಬಾರದು. ವಾಶ್ ಬೇಸಿನ್ಗೆ ಸ್ವಲ್ಪ ಅಡಿಗೆ ಸೋಡಾವನ್ನು ಹಾಕಿ, ವಿನೆಗರ್ ಸುರಿಯಿರಿ. ಸ್ವಲ್ಪ ಸಮಯ ಬಿಟ್ಟು ಬ್ರಷ್‌ನಿಂದ ಚೆನ್ನಾಗಿ ಸ್ಕ್ರಬ್ ಮಾಡಿದರೆ, ಎಲ್ಲ ಕಲೆಗಳು ಮಾಯವಾಗುತ್ತವೆ. ಇದಲ್ಲದೆ, ವಿನೆಗರ್ ಹಲ್ಲಿಗಳು ಮತ್ತು ಜಿರಳೆಗಳನ್ನು ತೊಡೆದುಹಾಕಲು ಸಹಾಯ ಮಾಡುವ ವಸ್ತುವಾಗಿದೆ. ಇದನ್ನು ವಾಶ್ ಬೇಸಿನ್‌ನಲ್ಲಿ ಸುರಿಯುವುದರಿಂದ, ನೀವು ಅಂತಹ ಜೀವಿಗಳ ಕಾಟವನ್ನು ಸಹ ತಪ್ಪಿಸಬಹುದು. (ಏಜೆನ್ಸೀಸ್)