ನ್ಯೂಸ್

​ AIISH ಸಂಸ್ಥೆಯ ವಜ್ರಮಹೋತ್ಸವ: ಸಂಸ್ಥೆಯ ಕೊಡುಗೆ ಶ್ಲಾಘಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು|President

President: ಕರ್ನಾಟಕದ ಮೈಸೂರಿನಲ್ಲಿರುವ ಅಖಿಲ ಭಾರತ ವಾಕ್​ ಮತ್ತು ಶ್ರವಣ ಸಂಸ್ಥೆಯ ವಜ್ರಮಹೋತ್ಸವದ ಕಾರ್ಯಕ್ರಮದಲ್ಲಿ ಸೋಮವಾರ (ಸೆಪ್ಟೆಂಬರ್​ 1) ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗವಹಿಸಿ, ಶಿಕ್ಷಣ, ವೈದ್ಯಕೀಯ ಮತ್ತು ವಾಕ್​ ಮತ್ತು ಶ್ರವಣಕ್ಕೆ ಸಂಬಂಧಿಸಿದ ಸಂಶೋಧನೆಯಲ್ಲಿ ಸಂಸ್ಥೆಯ ಕೊಡುಗೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಶಿಕ್ಷಣ, ವೈದ್ಯಕೀಯ, ವಾಕ್​ ಮತ್ತು ಶ್ರವಣಕ್ಕೆ ಸಂಬಂಧಿಸಿದ ಸಂಶೋಧನೆಯಲ್ಲಿ ಗಣನೀಯವಾಗಿ ಕೊಡುಗೆಗಳನ್ನು ನೀಡಿರುವ ಈ ಪ್ರತಿಷ್ಠಿತ ಸಂಸ್ಥೆಯ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವುದು "ನನಗೆ ಅಪಾರ ಸಂತೋಷ"ವನ್ನು ನೀಡಿದೆ ಎಂದರು.

ಇದನ್ನೂ ಓದಿ: ಓಣಂ ಆಚರಣೆಯ ವೇಳೆ ನೃತ್ಯ ಮಾಡುತ್ತಿದ್ದಾಗ ಕುಸಿದು ಬಿದ್ದು ಉದ್ಯೋಗಿ ಸಾವು..Onam Celebration ಈ ಸಂದರ್ಭದಲ್ಲಿ ಈ ಸಂಸ್ಥೆಯ ಏಳಿಗೆಗಾಗಿ ಶ್ರಮಿಸಿದ ಹಾಗೂ ಸಂವಹನ ಅಸ್ವಸ್ಥತೆಗಳ ರೋಗನಿರ್ಣಯ ಮತ್ತು ಚಿಕಿತ್ಸೆಯಲ್ಲಿ ಸಂಸ್ಥೆಯೊಂದಿಗೆ ಸಂಬಂಧ ಹೊಂದಿರುವ ಎಲ್ಲಾ ನಿರ್ದೇಶಕರು, ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಆಡಳಿತಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಅಖಿಲ ಭಾರತ ವಾಕ್​ ಮತ್ತು ಶ್ರವಣ ಸಂಸ್ಥೆ ಬಗ್ಗೆ ಮಾಹಿತಿ

AIISH ರಾಷ್ಟ್ರೀಯ ಸಂಸ್ಥೆಯು 1965 ರಲ್ಲಿ ಸ್ಥಾಪನೆಯಾಯಿತು. ಇದು ದುರ್ಬಲರಿಗೆ ವೈದ್ಯಕೀಯ, ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳನ್ನು ನೀಡುವ ಸಂಸ್ಥೆಯಾಗಿದೆ. ಭಾರತ ಸರ್ಕಾರದ ಸ್ವಾಯತ್ತತೆಯಲ್ಲಿ ಬರುವ ಸಂಸ್ಥೆಯಾಗಿದ್ದು, ಮಾನವ ಸಂಪನ್ಮೂಲ, ಅಭಿವೃದ್ಧಿ, ಕ್ಲೀನಿಕಲ್​ ಸೇವೆಗಳು, ತರಬೇತಿ, ಸಂಶೋಧನೆ, ಸರ್ವಜನಿಕ ಶಿಕ್ಷಣ ಸೇವೆ ನೀಡುವ ದಕ್ಷಿಣಾ ಏಷ್ಯಾದ್ಯಂತ ಪ್ರಮುಖ ಸಂಸ್ಥೆಯಾಗಿದೆ.

ಸಂವಹನ ಅಸ್ವಸ್ಥತೆಯನ್ನು ಹೊಂದಿರುವ ವ್ಯಕ್ತಿಗಳಿಗಾಗಿ ಚಿಕಿತ್ಸೆ ನೀಡಲು ಈ ಸಂಸ್ಥೆಯನ್ನು ಸ್ಥಾಪಿಸಿದೆ. ಹಾಗೇಯೇ ಈ ಸಂಸ್ಥೆಯು ಡಿಪ್ಲೊಮಾ, ಪದವಿ, ಸ್ನಾತಕೋತ್ತರ, ಡಾಕ್ಟರೇಟ್​, ಫಿಲೋಶಿಪ್​ ಕೋರ್ಸ್​ಗಳನ್ನು ನೀಡುವುದಲ್ಲದೆ, ರೋಗಿಗಳು ಹಾಗೂ ಅವರ ಕುಟುಂಬಗಳಿಗೆ ಪುನರ್ವಸತಿ ನೀಡುವುದರ ಜೊತೆಗೆ ಬೆಂಬಲ ನೀಡುತ್ತದೆ. (ಏಜೆನ್ಸೀಸ್​)