ಬೆಂಗಳೂರು: ಕೋರ್ಟ್ ಕಲಾಪದಲ್ಲಿ ಭಾಗಿಯಾಗಬೇಕಿದ್ದ ವಕೀಲರು ಇಂದು(ಗುರುವಾರ) ನೃಪತುಂಗ ರಸ್ತೆಯಲ್ಲಿರುವ ಮ್ಯಾಜಿಸ್ಟ್ರೇಟ್ ಕೋರ್ಟ್ ಎದುರಲ್ಲೇ ನಿಂತು ತರಕಾರಿ ಮಾಡುವಲ್ಲಿ ಬಿಜಿಯಾಗಿದ್ದರು! ಹೌದು, ಕಪ್ಪು ಕೋಟ್ ಧರಿಸಿಕೊಂಡೇ ವಕೀಲರು ತರಕಾರಿ ಮಾರಾಟ ಮಾಡಿದರು.
ಕರೊನಾ ಲಾಕ್ಡೌನ್ ತೊಂದೊಡ್ಡಿರುವ ಸಂಕಷ್ಟ ಅಷ್ಟಿಷ್ಟಲ್ಲ. ಎಲ್ಲ ಕ್ಷೇತ್ರದ ಮೇಲೂ ಕೆಟ್ಟ ಪರಿಣಾಮ ಬೀರಿದ್ದು, ದುಡಿಮೆಗೂ ಕೊಳ್ಳಿ ಇಟ್ಟಿದೆ. ಇದು ವಕೀಲರ
ಗುರುವಾರ ಬೆಳಗ್ಗೆ 11 ಗಂಟೆ ವೇಳೆ ನೃಪತುಂಗ ರಸ್ತೆಯಲ್ಲಿರುವ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂಭಾಗದಲ್ಲಿ ಸೇರಿದ 50ಕ್ಕೂ ಅಧಿಕ ವಕೀಲರು ಕೂಡಲೇ ನ್ಯಾಯಾಲಯಗಳಲ್ಲಿ ಫಿಸಿಕಲ್ ಹಿಯರಿಂಗ್ ನಡೆಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಇವರಲ್ಲಿ ಇಬ್ಬರು ವಕೀಲರು ತಾವು ತಂದಿದ್ದ ತರಕಾರಿಗಳನ್ನು ಸಾಂಕೇತಿಕವಾಗಿ ಮಾರಾಟ ಮಾಡಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರು ಸೇರಿ ರಾಜ್ಯದಾದ್ಯಂತ ಕರೊನಾ ಸೋಂಕು ತೀವ್ರವಾಗಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಭೌತಿಕ ಕಲಾಪ ನಡೆಸುವ ಬಗ್ಗೆ ಹೈಕೋರ್ಟ್ ಈವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ.