ನ್ಯೂಸ್

SSLC ಮುಗಿತ್ತಿದ್ದಂತೆ ಸಿನಿಮಾಗೆ ಎಂಟ್ರಿ; ನಟಿ ಸೌಂದರ್ಯ ಚಿತ್ರರಂಗಕ್ಕೆ ಬರಲು ಈ ವ್ಯಕ್ತಿಯೇ ಕಾರಣ

ಹೈದ್ರಾಬಾದ್​​: ಸ್ಯಾಂಡಲ್​ವುಡ್​​ ನಟಿ ಸೌಂದರ್ಯ ಅವರನ್ನು ಸಿನಿಪ್ರೇಮಿಗಳು ಎಂದಿಗೂ ಮರೆಯಲಾಗದ ನಟಿ. ಈಕೆ ಸುಂದರ ನೋಟ, ನಗು ಮತ್ತು ಮನಮೋಹಕ ಅಭಿನಯದಿಂದ ಜನರ ಹೃದಯದಲ್ಲಿ ಅಚ್ಚಳಿಯದ ಸ್ಥಾನ ಗಳಿಸಿದ್ದಾರೆ. ತೆಲುಗು, ತಮಿಳು, ಕನ್ನಡ ಮತ್ತು ಹಿಂದಿಯ ಹಲವು ಚಿತ್ರಗಳಲ್ಲಿ ತನ್ನ ಅತ್ಯುತ್ತಮ ಅಭಿನಯದ ಮೂಲಕ ಅನೇಕ ಅಭಿಮಾನಿಗಳನ್ನು ಗಳಿಸಿದ್ದರು. ಈ ನಟಿ ಸಿನಿಮಾಗೆ ಎಂಟ್ರಿ ಕೊಡಲು ಒಬ್ಬ ವ್ಯಕ್ತಿಯೇ ಕಾರಣ ಎಂದು ಹೇಳಿರುವ ಹಳೆ ವಿಡಿಯೋ ವೈರಲ್​​ ಆಗಿದೆ.

ಸೂಪರ್ ಸ್ಟಾರ್ ಕೃಷ್ಣ, ಅಮಿತಾಬ್ ಬಚ್ಚನ್, ಮೆಗಾಸ್ಟಾರ್ ಚಿರಂಜೀವಿ, ನಾಗಾರ್ಜುನ, ಬಾಲಕೃಷ್ಣ, ರಜನಿಕಾಂತ್, ರವಿಚಂದ್ರನ್​, ವಿಷ್ಣುವರ್ಧನ್​ ಹೀಗೆ ಎಲ್ಲಾ ಭಾಷೆಗಳ ಸ್ಟಾರ್ ಹೀರೋಗಳು ಒಟ್ಟಿಗೆ ಕಾಣಿಸಿಕೊಂಡಿದ್ದರು. ಟಾಪ್ ಹೀರೋಯಿನ್​​ ಸಾಲಿನಲ್ಲಿದ್ದ ನಟಿ ಹಠಾತ್ ಸಾವು ಉದ್ಯಮವನ್ನು ಆಘಾತಗೊಳಿಸಿತು. 2004ರಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದಾಗ ಆಕೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿತ್ತು. ಈ ಘಟನೆಯಲ್ಲಿ ಸೌಂದರ್ಯಾ ಜತೆಗೆ ಆಕೆಯ ಸಹೋದರ ಅಮರ್ ಕೂಡ ಸಾವನ್ನಪ್ಪಿದ್ದಾರೆ.

ಸೌಂದರ್ಯಾ ಇಹಲೋಕ ತ್ಯಜಿಸಿ ಸುಮಾರು 20 ವರ್ಷಗಳೇ ಕಳೆದಿವೆ. ಸೌಂದರ್ಯಾಗೆ ಸಂಬಂಧಿಸಿದ ಅಪರೂಪದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ತಮ್ಮ ಸಿನಿಮಾ ಪ್ರವೇಶದ ಹಿಂದಿನ ಕಾರಣಗಳನ್ನು ಬಹಿರಂಗಪಡಿಸಿದ್ದಾರೆ.

ಸೌಂದರ್ಯ ಮಾತನಾಡಿದ ವಿಡಿಯೋದಲ್ಲಿ, 10ನೇ ತರಗತಿ ಪರೀಕ್ಷೆ ಮುಗಿದ ತಕ್ಷಣ ಅಪ್ಪ ಶೂಟಿಂಗ್​​ಗೆ ಹೋಗು ಎಂದಿದ್ದರು.. ಆ ಸಮಯದಲ್ಲಿ ಸಿನಿಮಾ ಮಾಡುವುದಿಲ್ಲ ಎಂದು ಕಣ್ಣೀರು ಹಾಕಿದ್ದೇನು. ನಾನು ಸಿನಿಮಾಗೆ ಬರುತ್ತೇ ಎಂದು ಯಾವತ್ತು ಅಂದುಕೊಂಡಿರಲಿಲ್ಲ ಎಂದಿದ್ದಾರೆ.

ಆದರೆ ಅದೇನಾಯ್ತೋ ಗೊತ್ತಿಲ್ಲ ನಮ್ಮ ತಂದೆ ಶೂಟಿಂಗ್​ಗೆ ಕರೆದುಕೊಂಡು ಹೋದರು. ಅದಾದ ನಂತರ ಸೆಟ್ ನಲ್ಲಿ ಜನಸಂದಣಿ, ಲೈಟ್, ಮೇಕಪ್​​​​ ಎಲ್ಲಾ ನೋಡಿ ಏನು ಎಂದು ಅರ್ಥವಾಗಲಿಲ್ಲ..ಕ್ಯಾಮರಾ ಮುಂದೆ ನಿಂತಾಗ ನಿರ್ದೇಶಕರು ಹೇಳಿದಂತೆ ಮಾಡಿದೆ. ಇದೆಲ್ಲಾ ನೆನಪು ಮಾಡಿಕೊಂಡರೆ ಇಂದು ನಗು ಬರುತ್ತದೆ. ಆ ನಂತರ ಸಿನಿಮಾಗಳಲ್ಲಿ ಅವಕಾಶಗಳು ಸಿಕ್ಕಿವೆ ಎಂದರು.

ಸೌಂದರ್ಯ ಅವರು ಸಿನಿಮಾಗೆ ಎಂಟ್ರಿ ಕೊಡಲು ಕಾರಣವೇ ಅವರ ತಂದೆ ಎಂದು ಹೇಳಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುತ್ತಿದೆ.