ನ್ಯೂಸ್

ಹಗಲು ರಾತ್ರಿ ಲೆಕ್ಕಿಸದೇ ಬೆಂಗಳೂರಿನಿಂದ ನಂಜನಗೂಡಿಗೆ ಪಾದಯಾತ್ರೆ ಮಾಡಿದ ದುನಿಯಾ ವಿಜಯ್

ಬೆಂಗಳೂರು: ಹಗಲು ರಾತ್ರಿ ಲೆಕ್ಕಿಸದೇ ನಡೆದುಕೊಂಡೇ ನಟ ದುನಿಯಾ ವಿಜಯ್ ಬೆಂಗಳೂರಿನಿಂದ ಕಾಲ್ನಡಿಗೆಯಲ್ಲಿ ಹೊರಟು ನಂಜನಗೂಡಿನ ನಂಜುಂಡೇಶ್ವರ ದರ್ಶನ ಪಡೆದಿದ್ದಾರೆ ಎನ್ನಲಾಗಿದೆ.

ವಿಜಯ್ ಬೆಂಗಳೂರಿನಿಂದ ಕಾಲ್ನಡಿಗೆಯಲ್ಲಿ ಹೊರಟು ನಂಜನಗೂಡಿನ ನಂಜುಂಡೇಶ್ವರ ದರ್ಶನ ಪಡೆದಿದ್ದಾರೆ. ಸತತ ಐದು ದಿನಗಳ ಕಾಲ ತಮ್ಮ ಸಂಗಡಿಗರ ಜತೆ ನಡೆದುಕೊಂಡೇ ನಂಜನಗೂಡು ತಲುಪಿದ್ದಾರೆ. ಇದನ್ನೂ ಓದಿ: ಸಲೂನ್‌ನಲ್ಲಿ ಫೇಶಿಯಲ್‌ ಮಾಡಿಸಿಕೊಂಡ ಮೂವರಿಗೆ ಎಚ್‌ಐವಿ; ಸೌಂದರ್ಯ ಕಾಳಜಿ ಜತೆ ಆರೋಗ್ಯದ ಕುರಿತು ಎಚ್ಚರಿಕೆ ಇರಲಿ...

ಸದ್ಯ ಭೀಮ ಸಿನಿಮಾದ ಶೂಟಿಂಗ್ ಮುಗಿಸಿರುವ ವಿಜಯ್, ಹೊಸ ಸಿನಿಮಾದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕಾಟೇರ ಚಿತ್ರಕ್ಕೆ ಕಥೆ ಬರೆದಿದ್ದ ಜಡೇಶ್ ಹಂಪಿ ನಿರ್ದೇಶನದಲ್ಲಿ ಮೂಡಿ ಬರಲಿರುವ ಹೊಸ ಸಿನಿಮಾದ ಕೆಲಸದಲ್ಲೂ ಅವರು ತೊಡಗಿಸಿಕೊಂಡಿದ್ದಾರೆ.

ದುನಿಯಾ ವಿಜಯ್ ಪುತ್ರಿ ಮೋನಿಕಾ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮೋನಿಕಾ ಚಿತ್ರೋದ್ಯಮಕ್ಕೆ ಬರುತ್ತಾರೆ ಎಂಬ ಸುದ್ದಿ ಕೆಲದಿನಗಳಿಂದ ಹರಿದಾಡಿತ್ತು. ಇದೀಗ ಅಂತೆ ಕಂತೆ ಸುದ್ದಿಗೆ ಸ್ಪಷ್ಟನೆ ಸಿಕ್ಕಿದೆ. ಅಪ್ಪನ ನಟನೆಯ 29ನೇ ಸಿನಿಮಾದಲ್ಲಿ ಮಗಳು ಮೋನಿಕಾ ಕೂಡ ನಟಿಸಲಿದ್ದಾರೆ.