ನ್ಯೂಸ್

ಎರಡು ಟ್ರಕ್​ಗಳ ಮಧ್ಯೆ ಸಿಕ್ಕಿದ ಕಾರು! ಕ್ಷಣಾರ್ಧದಲ್ಲಿ ನಡೆದೇಹೋಯಿತು ದುರಂತ

ಮುಂಬೈ: ರಸ್ತೆ ಮೇಲೆ ಗಾಡಿ ಓಡಿಸುವಾಗ ಅದೆಷ್ಟೇ ಸುರಕ್ಷಿತವಾಗಿದ್ದರೂ ಸಾಲದು. ಅದೇ ರೀತಿ ಸುರಕ್ಷತೆಯಿಂದಲೇ ತಮ್ಮ ನಾಲ್ಕು ವರ್ಷದ ಮಗನೊಂದಿಗೆ ಕಾರಿನಲ್ಲಿ ಹೊರಟಿದ್ದ ದಂಪತಿ ರಸ್ತೆ ಮಧ್ಯೆಯೇ ಅಪಘಾತಕ್ಕೀಡಾಗಿ ಕೊನೆತಯುಸಿರೆಳೆದಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

ಮುಂಬೈ - ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ದಂಪತಿ ಹುಂಡೈ ಐ 10 ಕಾರಿನಲ್ಲಿ ಗುರುವಾರದಂದು ಹೊರಟಿದ್ದರು. ಮಗನೊಂದಿಗೆ ಅವರಿಬ್ಬರಿದ್ದರೆ, ಮತ್ತೊಬ್ಬ ಚಾಲಕ ಕಾರನ್ನು ಓಡಿಸುತ್ತಿದ್ದ. ಈ ವೇಳೆ ಎರಡು ಟ್ರಕ್​ಗಳ ಮಧ್ಯೆ ಕಾರು ಸಿಲುಕಿದ್ದು, ಒಂದು ಟ್ರಕ್ ಓವರ್​ಟೇಕ್ ಮಾಡಲು ನೋಡಿದ ಕಾರಣದಿಂದಾಗಿ ಕಾರು ಮಧ್ಯದಲ್ಲಿ ಅಪ್ಪಚ್ಚಿಯಾಗಿದೆ. ಪರಿಣಾಮ ನಾಲ್ಕು ವರ್ಷದ ಮಗ ಹಾಗೂ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಾಲಕನ ಸ್ಥಿತಿ ಗಂಭೀರವಾಗಿದ್ದು ಆತನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತವಾದಾಗ ಕಾರಿನಲ್ಲಿ ಬೆಂಕಿಯೂ ಹೊತ್ತಿ ಉರಿದಿರುವುದಾಗಿ ಹೇಳಲಾಗಿದೆ. ಪ್ರತಿ ವರ್ಷ ದೇಶದಲ್ಲಿ ಸರಿ ಸುಮಾರು 1.5 ಲಕ್ಷ ಜನರು ಈ ರೀತಿ ರಸ್ತೆ ಅಪಘಾತದಿಂದಲೇ ಸಾವನ್ನಪ್ಪುತ್ತಿದ್ದರೆ. (ಏಜೆನ್ಸೀಸ್)