ನ್ಯೂಸ್

ತಿರುಪತಿ ತಿಮ್ಮಪ್ಪನ ದರ್ಶನ ಮುಗಿಸಿ ಬರುವಾಗ ನಿದ್ರೆಗೆ ಜಾರಿದ ಚಾಲಕ! ಭೀಕರ ಅಪಘಾತಕ್ಕೆ ನಾಲ್ವರು ಬಲಿ

ಅಮರಾವತಿ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗಿದ್ದ ಗುಂಪೊಂದು, ದರ್ಶನ ಮುಗಿಸಿ ವಾಪಾಸು ಬರುವಾಗ ದುರ್ಮರಣಕ್ಕೀಡಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಮರ್ತೂರು ನಗರದ ಬಳಿ ಎನ್​ಎಚ್​ 16 ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ರಾತ್ರಿ 2.30-3 ಗಂಟೆಯ ಹೊತ್ತಿಗೆ ಹೆದ್ದಾರಿಯಲ್ಲಿ ಕಾರು ಚಲಿಸುತ್ತಿರುವಾಗಲೇ ಚಾಲಕನಿಗೆ ನಿದ್ರೆ ಬಂದಿದೆ. ನಿದ್ರೆಗೆ ಜಾರಿದ ಆತ ನಿಂತಿದ್ದ ಲಾರಿಯೊಂದಕ್ಕೆ ಕಾರನ್ನು ಡಿಕ್ಕಿ ಹೊಡೆಸಿದ್ದಾನೆ. ಇದರಿಂದಾಗಿ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಒಬ್ಬನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೃತರನ್ನು ಸತ್ಯನಾರಾಯಣ, ವಿಜಯಲಕ್ಷ್ಮೀ, ಕನಕಲಕ್ಷ್ಮೀ ಮತ್ತು ಚಿನ್ನಬಾಬು ಎಂದು ಗುರುತಿಸಲಾಗಿದೆ. ಸಂದೀಪ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ. ಇವರೆಲ್ಲರೂ ಏಲೂರು ನಿವಾಸಿಗಳು ಎನ್ನಲಾಗಿದೆ. (ಏಜೆನ್ಸೀಸ್​)