ನ್ಯೂಸ್

ಮಧ್ಯರಾತ್ರಿಯಲ್ಲಿ ಮಹಿಳೆಯ ಮೊಬೈಲ್​ಗೆ ಬಂತು 150 ಅಶ್ಲೀಲ ವಿಡಿಯೋ! ನಂತರ ನಡೆದಿದ್ದಿಷ್ಟು...Housewife

Housewife : ಗೃಹಿಣಿಯೊಬ್ಬರ ಫೋನ್‌ಗೆ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಕಳುಹಿಸಿದ ಆರೋಪದ ಮೇಲೆ ಯುವಕನನ್ನು ಬಂಧಿಸಲಾಗಿದೆ.

ಬಂಧಿತನನ್ನು ಕೇರಳದ ಎರ್ಡುಪಂತಿಯಿಲ್‌ನ ಹರಿಪಾದ್ ಕುಮಾರಪುರಂ ಮೂಲದ ಅಜಿನ್‌ಕುಮಾರ್ (23) ಎಂದು ಗುರುತಿಸಲಾಗಿದೆ. ಈತ ಎನಾತ್ ಗ್ರಾಮದ 40 ವರ್ಷದ ಗೃಹಿಣಿಯ ಮೊಬೈಲ್ ಫೋನ್‌ಗೆ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಕಳುಹಿಸಿದ್ದಾನೆ.

ಮಧ್ಯರಾತ್ರಿ 12.15ರ ಸುಮಾರಿಗೆ 150 ಅಶ್ಲೀಲ ವಿಡಿಯೋಗಳು ಮತ್ತು ಫೋಟೋಗಳನ್ನು ಗೃಹಿಣಿಯ ವಾಟ್ಸಾಪ್ ನಂಬರ್​ಗೆ ಕಳುಹಿಸಲಾಗಿದೆ. ಮರುದಿನ ಬೆಳಗ್ಗೆ 7 ಗಂಟೆ ಸುಮಾರಿಗೆ ಗೃಹಿಣಿ ಅದನ್ನು ನೋಡಿದ್ದಾರೆ. ನಂತರ ತನ್ನ ಹತ್ತಿರದ ಸಂಬಂಧಿಕರಿಗೆ ತಿಳಿಸಿದ್ದಾರೆ. ಬಳಿಕ ಮಸೇಜ್​ ಬಂದ ನಂಬರ್​ಗೆ ಆಕೆ ಕರೆ ಮಾಡಿದಾಗ ಆ ಯುವಕ ನಿಮ್ಮ ಫೋನ್​ ನಂಬರ್​ ಅನ್ನು ಯಾರೋ ಮೆಸೆಂಜರ್‌ನಲ್ಲಿ ಕಳುಹಿಸಿದರು ಎಂದು ಉತ್ತರಿಸಿದ್ದಾನೆ.

ಯುವಕನೊಂದಿಗೆ ಮಾತನಾಡಿದ ಬಳಿಕ ಗೃಹಿಣಿ ಏನಾತ್​ ಪೊಲೀಸ್​ ಠಾಣೆಗೆ ದೂರು ದಾಖಲಿಸಿದರು. ಯುವಕನಿಗೆ ಫೋನ್ ಸಂಖ್ಯೆಯನ್ನು ಯಾರು ಕಳುಹಿಸಿದ್ದಾರೆಂದು ತನಗೆ ತಿಳಿದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪೊಲೀಸರು ಬಿಎನ್ಎಸ್ ಮತ್ತು ಐಟಿ ಕಾಯ್ದೆಯ ಸಂಬಂಧಿತ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತಕ್ಷಣ ತನಿಖೆ ಆರಂಭಿಸಿದರು. ಜಿಲ್ಲಾ ಪೊಲೀಸ್ ಮುಖ್ಯಸ್ಥರ ಸೂಚನೆಯಂತೆ, ಜಿಲ್ಲಾ ಪೊಲೀಸರು ಸೈಬರ್ ಸೆಲ್ ಸಹಾಯದಿಂದ ಆರೋಪಿಗಳ ಪತ್ತೆಗಾಗಿ ತನಿಖೆಯನ್ನು ತೀವ್ರಗೊಳಿಸಿದರು. ಕೊನೆಗೂ ಯುವಕನನ್ನು ವಶಕ್ಕೆ ಪಡೆದಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)