Giant anaconda : ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ಉಸಿರುಕಟ್ಟುವ ವಿಡಿಯೋ ಕಾಣಿಸಿಕೊಂಡಿದ್ದು, ಎಲ್ಲರ ಹುಬ್ಬೇರಿಸಿದೆ. ದೂರದ ಅಮೆಜಾನ್ ಕಾಡಿನಲ್ಲಿನ ಬೃಹತ್ ಅನಾಕೊಂಡಾವೊಂದು ಈಜುತ್ತಿರುವಂತೆ ಕಾಣುತ್ತಿದೆ. ಹೆಲಿಕಾಪ್ಟರ್‌ನಿಂದ ಚಿತ್ರೀಕರಿಸಲಾದ ಈ ವಿಡಿಯೋ ಪ್ರಪಂಚದಾದ್ಯಂತ ಲಕ್ಷಾಂತರ ಜನರ ಗಮನ ಸೆಳೆದಿದೆ. ಆದರೆ, ಈ ವಿಡಿಯೋದ ಅಸಲಿಯತ್ತಿನ ಬಗ್ಗೆ ಇದೀಗ ಭಾರಿ ಚರ್ಚೆಯಾಗುತ್ತಿದೆ. ಏಕೆಂದರೆ, ಅಷ್ಟು ದೊಡ್ಡ ಗಾತ್ರದ ಅನಾಕೊಂಡಾ ಅಸ್ತಿತ್ವದಲ್ಲಿ ಇಲ್ಲಾ ಅನ್ನೋದೆ ಅನೇಕ ವಾದವಾಗಿದೆ.

ಅಂದಹಾಗೆ, ಡಾ. ಶೀತಲ್ ಯಾದವ್ ಹೆಸರಿನ ಎಕ್ಸ್ (ಹಿಂದೆ ಟ್ವಿಟರ್) ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಮತ್ತೊಮ್ಮೆ ಅಮೆಜಾನ್ ಕಾಡುಗಳಲ್ಲಿ ದೈತ್ಯ ಅನಾಕೊಂಡಾ ಹಾವು ಕಂಡುಬಂದಿದೆ ಎಂಬ ಶೀರ್ಷಿಕೆ ಬರೆಯಲಾಗಿದೆ. ಸದ್ಯ ಈ ವಿಡಿಯೋ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ. ಆದರೆ, ಕೆಲವರು ಈ ವಿಡಿಯೋ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ವಿಡಿಯೋ ಸತ್ಯಾಸತ್ಯತೆಯನ್ನು ಪ್ರಶ್ನಿಸಲು ಪ್ರಾರಂಭಿಸಿದ್ದಾರೆ. ಕೆಲವರು ಈ ವಿಡಿಯೋವನ್ನು ಕೃತಕ ಬುದ್ಧಿಮತ್ತೆ (AI) ಬಳಸಿ ಕುಶಲತೆಯಿಂದ ರಚಿಸಲಾಗಿದೆ ಅಥವಾ ಡಿಜಿಟಲ್ ಆಗಿ ರಚಿಸಲಾಗಿದೆ ಎಂದು ವಾದಿಸುತ್ತಿದ್ದಾರೆ.
एक बार फिर से अमेजन के जंगलों में बड़े एनाकोंडा सांप को देखा गया। pic.twitter.com/ssn0AjihQB
— Dr. Sheetal yadav (@Sheetal2242) May 8, 2025
ವಿಡಿಯೋದಲ್ಲಿನ ರೆಸಲ್ಯೂಶನ್ ಮಟ್ಟವು ಹೈ-ಡೆಫಿನಿಷನ್ನಿಂದ ಕೂಡಿದೆ. ಕ್ಯಾಮೆರಾದಲ್ಲಿ ತೆಗೆದು ಶಾಟ್ಗಳಿಗಿಂತ ಹೆಚ್ಚು ನೈಜವಾಗಿದ್ದು, ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇನ್ನು ಡೀಪ್‌ಫೇಕ್ ಮತ್ತು ಜನರೇಟಿವ್ AI ಟೆಕ್ನಾಲಜಿ ಆಗಮನದ ಬಳಿಕ ಸತ್ಯ ಮತ್ತು ಸುಳ್ಳಿನ ನಡುವಿನ ಗೆರೆ ಹೆಚ್ಚು ಹೆಚ್ಚು ಮಸುಕಾಗುತ್ತಿದೆ. ಯಾವುದು ಸತ್ಯ? ಯಾವುದು ಸುಳ್ಳು ಎಂದು ನಂಬಲಾಗದಷ್ಟರ ಮಟ್ಟಿಗೆ ಎಐ ಜಾದೂ ಮಾಡುತ್ತಿದೆ.
ಅಂದಹಾಗೆ, ಸದ್ಯ ವೈರಲ್ ಆಗಿರುವ ವಿಡಿಯೋವನ್ನು ಯಾವುದೇ ಸರ್ಕಾರಿ ಸಂಸ್ಥೆಯು ದೃಢೀಕರಿಸಿಲ್ಲ ಮತ್ತು ಮೆಟಾಡೇಟಾ ಅಥವಾ ಸ್ಥಳ ಟ್ಯಾಗ್ ಮಾಡದೆ, ವಿಡಿಯೋ ಹಂಚಿಕೊಂಡಿರುವುದರಿಂದ ವಿಡಿಯೋದ ಮೂಲ ಮತ್ತು ದೃಢೀಕರಣವು ಸದ್ಯಕ್ಕೆ ಅನಿಶ್ಚಿತವಾಗಿದೆ. ಬಹುತೇಕ ಅದು ಎಐನಿಂದ ರಚಿಸಲಾದ ವಿಡಿಯೋ ಎಂದು ಹೇಳಬಹುದಾಗಿದೆ.
ಅಂದಹಾಗೆ ವಿಶ್ವದ ಅತ್ಯಂತ ತೂಕದ ಮತ್ತು ಉದ್ದದ ಹಾವು ಎಂಬ ದಾಖಲೆಯು ಹಸಿರು ಅನಾಕೊಂಡಾ ಹೆಸರಿನಲ್ಲಿದೆ. ಈ ಹಾವುಗಳು ಹೆಚ್ಚಾಗಿ ದಕ್ಷಿಣ ಅಮೆರಿಕದ ತೇವ ಪ್ರದೇಶ ಮತ್ತು ನದಿಗಳನ್ನು ಕಂಡುಬರುತ್ತವೆ. ತಮ್ಮ ಮಿಂಚಿನ ವೇಗ ಮತ್ತು ದೊಡ್ಡ ದೊಡ್ಡ ಬೇಟೆಯನ್ನೂ ಬಹುಬೇಗ ಉಸಿರುಗಟ್ಟಿಸಿ, ಸಂಪೂರ್ಣವಾಗಿ ನುಂಗುವ ಸಾಮರ್ಥ್ಯಕ್ಕೆ ಹಸಿರು ಅನಕೊಂಡ ಹೆಸರುವಾಸಿಯಾಗಿದೆ. ಹವಾಮಾನ ಬದಲಾವಣೆ, ಆವಾಸಸ್ಥಾನದ ಅವನತಿ ಮತ್ತು ಮಾಲಿನ್ಯದಂತಹ ಬೆದರಿಕೆಗಳನ್ನು ನಿಯಂತ್ರಿಸಿ, ಪ್ರತಿಯೊಂದು ವಿಶಿಷ್ಟ ಪ್ರಭೇದಗಳಿಗೆ ಸಹಾಯ ಮಾಡಲು ಹಸಿರು ಅನಾಕೊಂಡಾಗಳ ಸಂರಕ್ಷಣಾ ಕಾರ್ಯತಂತ್ರಗಳನ್ನು ಈಗ ಮರು ಮೌಲ್ಯಮಾಪನ ಮಾಡಬೇಕಾಗಿದೆ. ಈ ವಿಚಾರದಲ್ಲಿ ತಡಮಾಡದೆ ಈ ಭೂಮಿ ಮೇಲಿನ ಪ್ರಾಣಿ ಮತ್ತು ಸಸ್ಯ ಪ್ರಭೇದಗಳ ವೈವಿಧ್ಯತೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ತುರ್ತು ಅಗತ್ಯವನ್ನು ಈ ಸಂಶೋಧನೆಗಳು ಎತ್ತಿ ತೋರಿಸಿದೆ.
ಇದನ್ನೂ ಓದಿ: ಒಂದು ವೇಳೆ ಇದೇನಾದರೂ ಸಂಭವಿಸಿದರೆ… ವಿಶ್ವ ಭೂಪಟದಲ್ಲಿ ಪಾಕಿಸ್ತಾನ ಇರುವುದಿಲ್ಲ! Pakistan
ಹಸಿರು ಅನಾಕೊಂಡಾ ಸೇರಿದಂತೆ ಐತಿಹಾಸಿಕವಾಗಿ ನಾಲ್ಕು ಅನಾಕೊಂಡಾ ಪ್ರಭೇದಗಳನ್ನು ಪತ್ತೆಹಚ್ಚಲಾಗಿದೆ. ಈ ಹಸಿರು ಅನಾಕೊಂಡಾಗಳು ಸರೀಸೃಪ ಪ್ರಪಂಚದ ನಿಜವಾದ ದೈತ್ಯ ಜೀವಿಗಳಾಗಿವೆ. ವಯಸ್ಸಾದ ಹೆಣ್ಣು ಅನಕೊಂಡ ಏಳು ಮೀಟರ್ಗಿಂತಲೂ ಹೆಚ್ಚು ಉದ್ದ ಬೆಳೆಯುತ್ತವೆ ಮತ್ತು 250 ಕೆಜಿಗಿಂತ ಹೆಚ್ಚು ತೂಕವಿರುತ್ತವೆ. ಈ ಹಾವುಗಳು ಹೆಚ್ಚಾಗಿ ನೀರಿನಲ್ಲಿ ಚೆನ್ನಾಗಿ ಹೊಂದಿಕೊಳ್ಳುತ್ತವೆ. ಈ ಹಾವಿನಲ್ಲಿ ಮೂಗಿನ ಹೊಳ್ಳೆಗಳು ಮತ್ತು ಕಣ್ಣುಗಳು ತಲೆಯ ಮೇಲಿರುತ್ತವೆ. ಈ ಕಾರಣದಿಂದ ತಮ್ಮ ದೇಹದ ಉಳಿದ ಭಾಗವು ನೀರಿನಲ್ಲಿ ಮುಳುಗಿರುವಾಗಲೂ ಎಲ್ಲವನ್ನು ನೋಡಬಹುದು ಮತ್ತು ಸುಲಭವಾಗಿ ಉಸಿರಾಡಬಹುದು. ಅನಾಕೊಂಡಾಗಳು ದೊಡ್ಡ ಕಪ್ಪು ಚುಕ್ಕೆಗಳೊಂದಿಗೆ ಆಲಿವ್-ಬಣ್ಣವನ್ನು ಹೊಂದಿರುತ್ತವೆ ಮತ್ತು ಸುತ್ತಮುತ್ತಲಿನ ಪ್ರದೇಶಗಳೊಂದಿಗೆ ಬೆರೆಯಲು ಇದು ಅನುವು ಮಾಡಿಕೊಡುತ್ತದೆ.
ಈ ಹಾವುಗಳು ದಕ್ಷಿಣ ಅಮೆರಿಕಾದ ಅಮೆಜಾನ್ ಮತ್ತು ಒರಿನೊಕೊ ಜಲಾನಯನ ಪ್ರದೇಶಗಳಲ್ಲಿನ ಸೊಂಪಾದ, ಸಂಕೀರ್ಣವಾದ ಜಲಮಾರ್ಗಗಳಲ್ಲಿ ವಾಸಿಸುತ್ತವೆ. ತಮ್ಮ ತಾಳ್ಮೆ ಮತ್ತು ಆಶ್ಚರ್ಯಕರ ಚುರುಕುತನಕ್ಕೆ ಹೆಸರುವಾಸಿಯಾಗಿವೆ. ಹಸಿರು ಅನಾಕೊಂಡಾಗಳು ವಿಷಕಾರಿಯಲ್ಲ. ಬದಲಾಗಿ ದೊಡ್ಡ ಹಾಗೂ ಹೊಂದಿಕೊಳ್ಳುವ ದವಡೆಗಳನ್ನು ಬಳಸಿ ಬೇಟೆಯಾಡುತ್ತವೆ. ಬೇಟೆಯನ್ನು ನುಂಗುವ ಮೊದಲು ತಮ್ಮ ಬಲವಾದ ದೇಹದಿಂದ ಬೇಟೆಯನ್ನು ಪುಡಿಮಾಡುತ್ತದೆ.
ಹಸಿರು ಅನಾಕೊಂಡಾಗಳು ತಮ್ಮ ಪರಿಸರ ವ್ಯವಸ್ಥೆಗಳಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರಮುಖವಾಗಿವೆ. ಅನಾಕೊಂಡಾಗಳು ಪರಿಸರ ಬದಲಾವಣೆ ವಿಚಾರದಲ್ಲಿ ಹೆಚ್ಚು ಸಂವೇದನಾಶೀಲವಾಗಿವೆ. ಆರೋಗ್ಯಕರ ಅನಕೊಂಡ ಜನಸಂಖ್ಯೆಯು ಸಾಕಷ್ಟು ಆಹಾರ ಸಂಪನ್ಮೂಲಗಳು ಮತ್ತು ಶುದ್ಧ ನೀರನ್ನು ಹೊಂದಿರುವ ಉತ್ತಮ ಪರಿಸರ ವ್ಯವಸ್ಥೆಗಳನ್ನು ಸೂಚಿಸುತ್ತದೆ. ಅನಕೊಂಡ ಸಂಖ್ಯೆಗಳು ಕಡಿಮೆಯಾಗುವುದು ಪರಿಸರದ ಅಸಮತೋಲನಕ್ಕೆ ಕಾರಣವಾಗಬಹುದು. ಆದ್ದರಿಂದ ಯಾವ ಯಾವ ಅನಕೊಂಡ ಜಾತಿಗಳು ಅಸ್ತಿತ್ವದಲ್ಲಿವೆ ಎಂಬುದನ್ನು ತಿಳಿದುಕೊಳ್ಳುವುದು ಮತ್ತು ಅವುಗಳ ಸಂಖ್ಯೆಯನ್ನು ಮೇಲ್ವಿಚಾರಣೆ ಮಾಡುವುದು ನಿರ್ಣಾಯಕವಾಗಿದೆ ಎಂದು ಸಂಶೋಧನೆ ತಿಳಿಸಿದೆ. (ಏಜೆನ್ಸೀಸ್)
ಈ ದಿನಾಂಕಗಳಂದು ಜನಿಸಿದ ಮಹಿಳೆಯರು ತಮ್ಮ ಗಂಡಂದಿರಿಗೆ ಅದೃಷ್ಟ ತರುವ ದೇವತೆಯರಂತೆ! Numerology