ನ್ಯೂಸ್

ರಾಜ್ಯದಲ್ಲಿ ಮತ್ತೆ ಗಗನಕ್ಕೇರಿದ ತರಕಾರಿ ಬೆಲೆ! ಟೊಮ್ಯಾಟೊ-120, ತೊಂಡೆಕಾಯಿ-170, ಇತರ ಬೆಲೆ ಎಷ್ಟಿದೆ ನೋಡಿ

ಬೆಂಗಳೂರು: ರಾಜ್ಯದಲ್ಲಿ ಮತ್ತೆ ತರಕಾರಿ ಬೆಲೆ ಗಗನಕ್ಕೇರಿದ್ದು, ಟೊಮ್ಯಾಟೊ ಬೆಲೆ 100ರ ಗಡಿ ದಾಟಿದೆ.

ಇತ್ತೀಚಿಗೆ 100ರ ಗಡಿದಾಟಿದ್ದ ಟೊಮ್ಯಾಟೊ ದರ ಕಳೆದ ವಾರ ಇಳಿದಿತ್ತು. ವಾರದ ಹಿಂದೆ 50- 60 ರೂಪಾಯಿ ಇದ್ದ ಬೆಲೆ ಇದೀಗ ದುಪ್ಪಟ್ಟಾಗಿದೆ. ಬೆಂಗಳೂರಿನ ಕೆ.ಆರ್​.ಮಾರುಕಟ್ಟೆಯಲ್ಲಿ ಒಂದು ಕೆಜಿ ಟೊಮ್ಯಾಟೊ ಬೆಲೆ 120 ರೂಪಾಯಿ ಇದೆ. ಬೆಂಗಳೂರಿನ ಹಾಪ್​ಕಾಮ್ಸ್​ನಲ್ಲಿಯೇ ಈ ಬೆಲೆ ಇದೆ. ಇನ್ನು ಚಿಲ್ಲರೆ ಅಂಗಡಿಗಳಲ್ಲಿ ಇದರ ಬೆಲೆ ಮತ್ತಷ್ಟು ಹೆಚ್ಚಿದೆ. ಟೊಮ್ಯಾಟೊ ಮಾತ್ರವಲ್ಲ, ಒಟ್ಟಾರೆ ಎಲ್ಲ ತರಕಾರಿ ಬೆಲೆಯೂ ಗ್ರಾಹಕರ ಕೈಸುಡುತ್ತಿದೆ.

ಬೆಂಗಳೂರಲ್ಲಿ ತರಕಾರಿ ದರ

ಕ್ಯಾಪ್ಸಿಕಂ- 120 ರೂ.

ಬೀನ್ಸ್​- 99 ರೂಪಾಯಿ

ಬಿಳಿ ಬದನೆಕಾಯಿ- 114 ರೂಪಾಯಿ

ತೊಂಡೆಕಾಯಿ- 170 ರೂಪಾಯಿ

ನವಿಲುಕೋಸು- 84 ರೂಪಾಯಿ

ಮೂಲಂಗಿ- 84 ರೂಪಾಯಿ

ಬೀಟ್​ರೋಟ್​-64 ರೂಪಾಯಿ

ಟೊಮ್ಯಾಟೊ-120 ರೂಪಾಯಿ

ಧಾರಾಕಾರ ಮಳೆಯಿಂದಾಗಿ ಬೆಳೆಹಾನಿ ಸಂಭವಿಸಿದ್ದು, ಆಹಾರ ಉತ್ಪಾದನೆಕ್ಕೆ ಭಾರೀ ಪೆಟ್ಟು ಕೊಟ್ಟಿದೆ. ಫಸಲು ಗಿಡದಲ್ಲೇ ಕೊಳೆಯುತ್ತಿದೆ. ಇಳುವರಿ ಕಡಿಮೆಯಾಗಿದ್ದು, ಸಹಜವಾಗಿ ಬೆಲೆ ಏರಿಕೆ ಆಗುತ್ತಿದೆ. ಚಿಲ್ಲರೆ ಅಂಗಡಿಗಳಲ್ಲಿ ತರಕಾರಿ ಬೆಲೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿದೆ.