ನ್ಯೂಸ್

ಬಟ್ಟೆ ಸರಿಸಿ ತೊಡೆ ಸವರುತ್ತಿದ್ದ.. ತುಟಿಗೆ ಚುಂಬಿಸಿ ಪ್ಯಾಂಟ್​ ಬಿಚ್ಚಿದ್ದ... ಬೆಂಗ್ಳೂರಲ್ಲಿ ಬಾಲಿವುಡ್​ ನಟಿ ಅನುಭವಿಸಿದ ನೋವು ಅಷ್ಟಿಷ್ಟಲ್ಲ

ಮುಂಬೈ: ಬಾಲಿವುಡ್​ ನಟಿ ಕುಬ್ರಾ ಸೇಠ್​ 17ನೇ ವಯಸ್ಸಿನಲ್ಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರಂತೆ. ಅದೂ ಬೆಂಗಳೂರಲ್ಲಿ ಎಂಬ ಆಘಾತಕಾರಿ ಸಂಗತಿ ಇದೀಗ ಬಯಲಾಗಿದೆ. ಆ ವಯಸ್ಸಲ್ಲಿ ಅನುಭವಿಸಿದ ನರಕಯಾತನೆಯನ್ನ ಇದೀಗ ಅವರೇ ಬಹಿರಂಗಪಡಿಸಿದ್ದಾರೆ. 'ಕಾರಿನಲ್ಲಿ ಹೋಗುವಾಗ ಬಟ್ಟೆಯನ್ನು ಸರಿಸಿ ನನ್ನ ತೊಡೆಯನ್ನು ಸವರುತ್ತಿದ್ದ... ನಮ್ಮ ಮನೆಗೆ ಬಂದು ನನ್ನ ಕೆನ್ನೆಗೆ ಮುತ್ತಿಟ್ಟು ನೀನಂದ್ರೆ ನನಗಿಷ್ಟ ಎನ್ನುತ್ತಿದ್ದ... ಹೋಟೆಲ್​ನಲ್ಲಿ ತುಟಿಗೆ ಚುಂಬಿಸಿ ಪ್ಯಾಂಟ್​ ಬಿಚ್ಚಿದ್ದ... ನಾನಾಗ ಅಸಹಾಯಕಳಾಗಿದ್ದೆ...' ಎಂದು ಬರೆದುಕೊಂಡಿದ್ದಾರೆ.

ಕುಬ್ರಾ ಸೇಠ್​ ನಟಿ ಮಾತ್ರವಲ್ಲ, ಉತ್ತಮ ಬರಹಗಾರ್ತಿಯೂ ಹೌದು. ಇವರು ಬರೆದ 'ಓಪನ್​ ಬುಕ್​'(Open Book: Not quite a Memoir) ಇತ್ತೀಚಿಗೆ ಬಿಡುಗಡೆಯಾಗಿದೆ. ಈ ಪುಸ್ತಕಲ್ಲಿ ತಾನು ಬಾಲ್ಯದಲ್ಲಿ ಅನುಭವಿಸಿದ ಲೈಂಗಿಕ ಕಿರುಕುಳದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

'ನನಗೆ ಆಗ 17 ವರ್ಷ ವಯಸ್ಸು. ನಮ್ಮ ಕುಟುಂಬ ಆರ್ಥಿಕವಾಗಿ ತುಂಬಾ ಸಮಸ್ಯೆ ಎದುರಿಸುತ್ತಿತ್ತು. ನಮ್ಮ ಅಮ್ಮನಿಗೆ ಬೆಂಗಳೂರಿನ ರೆಸ್ಟೋರೆಂಟ್​ ಮಾಲೀಕನೊಬ್ಬ (X ಅಂಕಲ್​) ಸಹಾಯ ಮಾಡುತ್ತಿದ್ದ. ನಮ್ಮ ಮನೆಯಲ್ಲಿ ಈತನನ್ನು ದೇವರು ಎಂದೇ ಭಾವಿಸಿದ್ದರು. ನಾನು ಮತ್ತು ನನ್ನ ಅಣ್ಣ ಈತನನ್ನು ಅಂಕಲ್​ ಎಂದೇ ಕರೆಯುತ್ತಿದ್ದೆವು. ನಾನು ಮತ್ತು ನನ್ನ ಅಣ್ಣ ಡ್ಯಾನಿಷ್​ ಇಬ್ಬರೂ ಈ ರೆಸ್ಟೋರೆಂಟ್‌ಗೆ ಆಗಾಗ್ಗೆ ಹೋಗುತ್ತಿದ್ದವು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ದಿನಕಳೆದಂತೆ X ಅಂಕಲ್​ ತನ್ನ ವರಸೆ ಬದಲಿಸಿದ. 'ನನ್ನನ್ನು ಅಂಕಲ್ ಎನ್ನಬೇಡ' ಎನ್ನುತ್ತಿದ್ದ. ಒಮ್ಮೆ ಕಾರಿನಲ್ಲಿ ಹೋಗುವಾಗ ಆತ ನನ್ನ ಬಟ್ಟೆ ಸರಿಸಿ ತೊಡೆಯನ್ನು ಕೈಯಿಂದ ಉಜ್ಜುತ್ತಾ ನಗುತ್ತಿದ್ದ... ಆ ಕ್ಷಣ ನಾನ್​ ಶಾಕ್​ ಆದೆ. ನಮ್ಮ ಮನೆಗೆ ಪದೇಪದೆ ಬರುತ್ತಿದ್ದ. ಆಗ ನನ್ನಮ್ಮ ಆತನಿಗೆ ಅಡುಗೆ ಮಾಡಿ ಬಡಿಸುತ್ತಿದ್ದಳು. ಅಮ್ಮನ ಮುಂದೆಯೇ ಆತ ನನ್ನ ಕೆನ್ನೆಗೆ ಮುತ್ತಿಡುತ್ತಿದ್ದ...'

ಒಮ್ಮೆ ಆತ ನನ್ನನ್ನು ಹೋಟೆಲ್​ಗೆ ಕರೆದೊಯ್ದು ನನ್ನ ತಲೆ ಹಿಡಿದು ತುಟಿಗೆ ಚುಂಬಿಸಿದ. ಆಗ ನಾನು ಗೊಂದಲಕ್ಕೆ ಒಳಗಾದೆ. ಒಂದು ಮಾತನ್ನೂ ಆಡಲಿಲ್ಲ, ನಾನು ಕೂಗಬೇಕಿತ್ತು ಕೂಗಲಿಲ್ಲ. ಅಲ್ಲಿಂದ ಓಡಬೇಕಿತ್ತು.. ಓಡಲಿಲ್ಲ. ಶಾಕ್​ನಲ್ಲಿದ್ದೆ. ಅವನು ತನ್ನ ಪ್ಯಾಂಟ್​ ಬಿಚ್ಚಿದ... ನನ್ನ ಕನ್ಯತ್ವ ಕಳೆದುಹೋಗುತ್ತಿದೆ... ಎಂದು ಅನ್ನಿಸುತ್ತಿತ್ತು' ಎಂದು ತಾನು ಅನುಭಸಿದ ಕಿರುಕುಳದ ಬಗ್ಗೆ ನಟಿ ಕುಬ್ರಾಸೇಠ್​ ಪುಸ್ತಕದಲ್ಲಿ ವಿವರಿಸಿದ್ದಾರೆ.

'ಈ ಘಟನೆಯ ನಂತರ X ಅಂಕಲ್​ ಬೇರೊಬ್ಬಳ ಜೊತೆ ಮದುವೆಯಾದ. ಎರಡು ಮಕ್ಕಳ ತಂದೆಯೂ ಆದ. ನನ್ನ ಮೇಲೆ ಆತ ಎಸಗಿದ ಕೃತ್ಯವನ್ನು ಹೊರಗಡೆ ಬಾಯಿಬಿಟ್ಟರೆ ಎಂಬ ಭಯವೂ ಆತನಿಗೆ ಇತ್ತು. ನನಗೆ ಜೀವ ಬೆದರಿಕೆಯನ್ನೂ ಹಾಕಿದ್ದ. ನಾನು ಆಗ ಈ ಬಗ್ಗೆ ಯಾರ ಬಳಿಯೂ ಹೇಳಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ' ಎಂದು ಕುಬ್ರಾ ಸೇಠ್ ತನ್ನ ಬಾಲ್ಯದಲ್ಲಿ ಹಾಗೂ ಯೌವ್ವನದಲ್ಲಿ ಅನುಭವಿಸಿದ ನೋವುಗಳು ಆತ್ಮಚರಿತ್ರೆ 'ಓಪನ್​ ಬುಕ್​' ಬಹಿರಂಗ ಮಾಡಿದ್ದಾರೆ.