ನ್ಯೂಸ್

ಗುಟ್ಖಾ ಉಗುಳುತ್ತಾ ಕಾರಿನಲ್ಲಿ ಮಾಸ್ಕ್ ಧರಿಸದೆ ಬಂದ ಅಧಿಕಾರಿ! ನಡುರಸ್ತೆಯಲ್ಲಿ ಹೈಡ್ರಾಮ

arunakunigal

ಕಲಬುರಗಿ: ಕರೊನಾ ರೂಲ್ಸ್​ ಕಟ್ಟುನಿಟ್ಟಾಗಿ ಪಾಲಿಸುತ್ತಾ ಇತರರಿಗೂ ಮಾದರಿ ಆಗಬೇಕಿದ್ದ ಸರ್ಕಾರಿ ಅಧಿಕಾರಿಯೊಬ್ಬರು ಗುಟ್ಖಾ ಉಗುಳುತ್ತಾ ಕಾರಿನಲ್ಲಿ ಮಾಸ್ಕ್ ಧರಿಸದೆ ಬಂದಿದ್ದಲ್ಲದ್ದೇ ಇದನ್ನು ಪ್ರಶ್ನಿಸಿದ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಘಟನೆ ನಗರದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.

ಆಹಾರ ಮತ್ತು ನಾಗರಿಕ ಇಲಾಖೆಯಲ್ಲಿ ಅನ್ನಭಾಗ್ಯ ಯೋಜನೆಯ ಇನ್​ಸ್ಪೆಕ್ಟರ್​ ಬಸವರಾಜ್ ಕಾರಿನಲ್ಲಿ ಮಾಸ್ಕ್ ಧರಿಸದೆ ಬಂದು ಪೊಲೀಸರ ಜತೆ ವಾಗ್ವಾದ ನಡೆಸಿದವರು. ಪೊಲೀಸರ ತಪಾಸಣೆ ವೇಳೆ 'ನಾನು ಇನ್​ಸ್ಪೆಕ್ಟರ್ ಸರ್' ಅಂತಾ ಬಚಾವ್ ಆಗೋಕೆ ಯತ್ನಿಸಿದರು. 'ಬೆಳಗ್ಗೆಯಿಂದ ಕೆಲಸದಲ್ಲಿ ಬಿಜಿಯಾಗಿದ್ದೇನೆ, ಕೆಲಸದ ಮೇಲೆ ಬಂದಿದ್ದೀನಿ ಬಿಡಿ' ಎಂದು ನೈಟ್​ ಡ್ರಸ್​ ಧರಿಸಿಕೊಂಡು ವಾಗ್ವಾದ ನಡೆಸುತ್ತಿದ್ದರು.

ಮಾಸ್ಕ್ ಹಾಕದೆ ಬಂದ ತಪ್ಪಿಗೆ ಅಧಿಕಾರಿಗೆ ಪೊಲೀಸರು 250 ರೂಪಾಯಿ ದಂಡ ಹಾಕಿದರು. ಪೊಲೀಸರು ಫೈನ್ ಹಾಕುವಾಗ ಅಧಿಕಾರಿ ತನ್ನ ಹೆಸರನ್ನು ತಪ್ಪಾಗಿ ಹೇಳಿದರು. ಅಧಿಕಾರಿಯ ಓರಿಜಿನಲ್ ಹೆಸರು ಬಸವರಾಜ್ ಎಂದಿದ್ದರೂ ದಂಡದ ರಶೀದಿಯಲ್ಲಿ ದಶರಥ ಅಂತಾ ಬರೆಸಿಕೊಂಡು ದಂಡ ಕಟ್ಟಿ ಹೋದರು.