ನ್ಯೂಸ್

'ನೀನು ಗಂಡಾಗಿದ್ದರೆ, ಕಾಲರ್​ ಹಿಡಿದು ಕೊಡುತ್ತಿದ್ದೆ' ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿದ ಕಾಂಗ್ರೆಸ್​ ನಾಯಕ

ಭೋಪಾಲ್​: ಮಧ್ಯಪ್ರದೇಶ ಕಾಂಗ್ರೆಸ್​ ಶಾಸಕರೊಬ್ಬರು ಮಹಿಳಾ ಅಧಿಕಾರಿಯ ಮೇಲೆ ದರ್ಪ ತೋರಿಸಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ನೀನು ಗಂಡಾಗಿದ್ದರೆ ನಿನ್ನ ಕಾಲರ್​ ಹಿಡಿಯುತ್ತಿದ್ದೆ ಎಂದು ಹೇಳಿರುವ ವಿಡಿಯೋ ಇದೀಗ ವೈರಲ್​ ಆಗಿದೆ.

ಕಾಂಗ್ರೆಸ್​ ಶಾಸಕ ಹರ್ಷ್​ ವಿಜಯ್​ ಟ್ರ್ಯಾಕ್ಟರ್​ ರ್ಯಾಲಿ ನಡೆಸುವ ಕುರಿತಾಗಿ ಮೆಮೋರೆಂಡಮ್​ ನೀಡಲು ಉಪ ವಿಭಾಗೀಯ ಮೆಜಿಸ್ಟ್ರೇಟ್​ (ಎಸ್​ಡಿಎಂ) ಕಚೇರಿಗೆ ಹೋಗಿದ್ದರು. ಈ ವೇಳೆ ಎಸ್​ಡಿಎಂ ಕಾಮಿನಿ ಠಾಕೂರ್​ ಅವರು ಶಾಸಕರನ್ನು ಭೇಟಿ ಮಾಡುವಲ್ಲಿ ತಡವಾಗಿದೆ. ಇದರಿಂದ ಸಿಟ್ಟಿಗೆದ್ದ ಶಾಸಕ ಮಹಿಳಾ ಅಧಿಕಾರಿಯೊಂದಿಗೆ ಜಗಳ ಆರಂಭಿಸಿದ್ದಾರೆ. ನಾನು ಶಾಸಕ ಎನ್ನುವ ಮಾತನ್ನು ಒತ್ತಿ ಹೇಳಿದ್ದಾರೆ. ನೀನು ಹೆಣ್ಣು. ಹೆಣ್ಣಲ್ಲದೆ ಗಂಡಾಗಿದ್ದಿದ್ದರೆ ನಾನು ನಿನ್ನ ಕಾಲರ್​ ಹಿಡಿದು ಮೆಮೋರೆಂಡಮ್ ಕೊಟ್ಟು ಹೋಗುತ್ತಿದ್ದೆ ಎಂದು ಬೆದರಿಸಿದ್ದಾರೆ.

ಶಾಸಕರ ಈ ಜಗಳದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಅಧಿಕಾರಿಗಳಿಗೆ ಗೌರವ ನೀಡುವ ಬದಲು ಅವರು ತೋರಿರುವ ದರ್ಪದ ಬಗ್ಗೆ ಜನರು ಮಾತನಾಡಿಕೊಳ್ಳಲಾರಂಭಿಸಿದ್ದಾರೆ. (ಏಜೆನ್ಸೀಸ್​)