ನ್ಯೂಸ್

ಎಂಟು ವರ್ಷದ ಈ ಬಾಲಕಿ ಟಿವಿ ನೋಡುವ ಸ್ಟೈಲೇ ವಿಚಿತ್ರ!; ವಿಡಿಯೋ ವೈರಲ್

ನವದೆಹಲಿ: ಟಿವಿಯನ್ನು ವೀಕ್ಷಿಸುವ ಭಂಗಿ ಕೆಲವರದ್ದು ವಿಭಿನ್ನವಾಗಿರುತ್ತದೆ. ಕೆಲವರು ಕುರ್ಚಿಯಲ್ಲಿ ಹಿಂದೆ ಬಾಗಿಕೊಂಡು, ಮತ್ತೆ ಕೆಲವರು ಟೇಬಲ್ ಮೇಲೆ ಕಾಲೇರಿಸಿಕೊಂಡು, ಇನ್ನು ಕೆಲವರು ಮಲಗಿಕೊಂಡು ಟಿವಿ ನೋಡುವುದಿದೆ. ಆದರೆ ಇಲ್ಲೊಬ್ಬಳು ಬಾಲಕಿ ಇವರೆಲ್ಲರಿಗಿಂತ ವಿಚಿತ್ರವಾಗಿ ಟಿವಿ ವೀಕ್ಷಿಸುತ್ತಾಳೆ.

ಸ್ಪೈಡರ್​ ಗರ್ಲ್ ಎಂದು ಕರೆಯಲಾಗುವ ಎಂಟು ವರ್ಷದ ಈ ಬಾಲಕಿ ಮನೆಯ ಗೋಡೆ ಮೇಲೆ ಛಾವಣಿಗೆ ತಾಗಿಕೊಂಡಂತೆ ಒರಗಿ ಕುಳಿತು ಟಿವಿ ನೋಡುತ್ತಾಳೆ. ಈಕೆಯ ತಾಯಿ ಮಗಳ ಈ ವಿಚಿತ್ರ ಸಾಹಸದ ವಿಡಿಯೋ ಹಂಚಿಕೊಂಡಿದ್ದು ಇದು ವೈರಲ್ ಆಗುತ್ತಿದೆ.

ಛಾವಣಿ ಭಾಗದಲ್ಲಿ ಎರಡು ಗೋಡೆಗಳು ಸೇರುವ ಮೂಲೆಯಲ್ಲಿ ಈಕೆ ಕಾಲು ಮಡಚಿ ಕುಳಿತುಕೊಂಡು ಟಿವಿ ನೋಡುವ ದೃಶ್ಯ ನಿಜಕ್ಕೂ ಅಚ್ಚರಿಪಡುವಂತಿದೆ. ಇದಕ್ಕೆ ಆ ಗೋಡೆಗೆ ಹಾಕಲಾದ ಟೈಲ್ಸ್​ ಸ್ವಲ್ಪ ಸಹಕಾರಿ ಆಗಿದ್ದರೂ ಇರಬಹುದು ಎಂದು ಕೆಲವರು ಹೇಳಿಕೊಂಡಿದ್ದರೂ ಬಾಲಕಿಯ ಮಟ್ಟಿಗೆ ಇದೊಂಥರ ಸಾಹಸದ ರೀತಿಯಲ್ಲೇ ಕಾಣಿಸುತ್ತಿದೆ.