ನ್ಯೂಸ್

ಅಕ್ರಮ ಗಾಂಜಾ ಮಾರಾಟ: ಒಂದೇ ಮನೆಯ ಮೂವರು ಮಹಿಳೆಯರು ಅರೆಸ್ಟ್​!| Women

Women: ಪುಣೆಯ ಖುಲೇವಾಡಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಹಿನ್ನಲೆ, ಒಂದೇ ಕುಟುಂಬದ ಮೂವರು ಮಹಿಳೆಯರನ್ನು ಶನಿವಾರ (ಸೆ.​27) ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಖುಲೇವಾಡಿಯ ನಿವಾಸಿಗಳಾದ ಸೋನಾಬಾಯಿ ಅಂಕುಶ ಪವಾರ್ (50), ಸುವರ್ಣ ಅಶೋಕ್ ಪವಾರ್ (25) ಮತ್ತು ಶಾಲನ್ ಕಾಂತಿಲಾಲ್ ಜಾಧವ್ (45) ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ಖುಲೇವಡಿಯಲ್ಲಿ ಕೆಲವು ಮಹಿಳೆಯರು ಅಕ್ರಮವಾಗಿ ಗಾಂಜಾ ಮಾರುವುದಾಗಿ ಪೊಲೀಸರಿಗೆ ಬಂದ ಮಾಹಿತಿಯ ಪ್ರಕಾರ, ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ವೇಳೆ ಒಂದೇ ಮನೆಯ ಮೂವರು ಮಹಿಳೆಯರು ಗಾಂಜಾ ಮಾರುತ್ತಿರುವುದನ್ನು ತಿಳಿದ ಕೂಡಲೇ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದು, ಅವರಿಂದ 30 ಸಾವಿರ ರೂಪಾಯಿ ಮೌಲ್ಯದ 1,560 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಇನ್ನು ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದು, ಅಕ್ರಮ ದಂಧೆಯಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿ ಗೋವಿಂದ್​ ಜಾಧವ್​ ಸುದ್ದಿಮೂಲಗಳಿಗೆ ತಿಳಿಸಿದ್ದಾರೆ. (ಏಜೆನ್ಸೀಸ್​)