

ಕಲಬುರಗಿ : ಭೀಮಾ ನದಿಯಲ್ಲಿ ಉಂಟಾಗಿರುವ ಪ್ರವಾಹ ಕ್ಷಣ ಕ್ಷಣಕ್ಕೂ ಗಂಭೀರಗೊಳ್ಳುತ್ತಲೇ ಇದೆ. ಜೇವರ್ಗಿ ಸಮೀಪದ ಕಟ್ಟಿಸಂಗಾವಿವಹಳೇಯ ಸೇತುವೆ ನೀರಿನಲ್ಲಿ ಮುಳುಗಿದೆ. ಹೊಸ ಸೇತುವೆಗೆ ನೀರು ತಾಗಿಕೊಂಡು ಹೋಗುತ್ತಿದೆ. ಹೀಗಾಗಿ ಅಪಾಯ ಮಟ್ಟ ಮೀರುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಸೇತುವೆ ಮೇಲೆ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.
ಇದರಿಂದಾಗಿ ಬೀದರ್- ಕಲಬುರಗಿ- ಬೆಂಗಳೂರು ಹೆದ್ದಾರಿಯಲ್ಲಿ ಸಂಪರ್ಕ ಕಡಿತಗೊಂಡಿದೆ. ಬೆಂಗಳೂರು, ಹುಬ್ಬಳ್ಳಿ ಇನ್ನಿತರ ಕಡೆಯಿಂದ ಕಲಬುರಗಿ ಕಡೆಗೆ ಬರುತ್ತಿದ್ದ ಹಲವಾರು ಬಸ್ ಹಾಗೂ ವಾಹನಗಳು ಸಾಲುಗಟ್ಟಿ ಕಿಲೋ ಮೀಟರ್ ಗಟ್ಟಲೇ ನಿಂತುಕೊಂಡಿವೆ. ಪ್ರಯಾಣಿಕರು ಪರದಾಡುತ್ತಿದ್ದಾರೆ.