ಇಬ್ಬರು ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ! ಡ್ರಗ್​ ಪೆಡ್ಲರ್​ ಅರೆಸ್ಟ್​ | Drug Peddler

Arrest
Published on

Drug Peddler : ಮಾದಕ ದ್ರವ್ಯ ಮಾರಾಟಗಾರನೊಬ್ಬ ಸಕಿನಾಕಾ ಪೊಲೀಸ್​ ತಂಡದ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದು, ಇಬ್ಬರು ಅಧಿಕಾರಿಗಳು ಗಾಯಗೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಘಟನೆಯ ಬಗ್ಗೆ

ಪೊಲೀಸರ ಪ್ರಕಾರ, ಅಕಿನ್ ಖಾನ್ (27) ಆರೋಪಿ ಎಂದು ಗುರುತಿಸಲಾಗಿದೆ.  ಈ ಹಿಂದೆ ಪಾಲ್ವರ್​ ಮತ್ತು ಕರ್ನಾಟಕದ ಎರಡು ಮಾದಕವಸ್ತು ಉತ್ಪಾದನಾ ಕಾರ್ಖಾನೆಗಳ ಜಾಡು ಹಿಡಿದು ಸುಮಾರು 390 ಕೋಟಿ ರೂ. ಮೌಲ್ಯದ ಸರಕುಗಳನ್ನು ವಶಪಡಿಸಿಕೊಂಡಿದ್ದರು. ಆ ಗ್ಯಾಂಗ್​​ನೊಂದಿಗೆ ಈತ ಸಂಬಂಧ ಹೊಂದಿದ್ದ ಎಂದು ತಿಳಿಸಿದ್ದಾರೆ.

ಸಕಿನಾಕಾ ಪೊಲೀಸರಿಗೆ ಈತನ ಬಗ್ಗೆ ಮಾಹಿತಿ ಬಂದ ನಂತರ, ಅಂಧೇರಿ ಪಶ್ಚಿಮದ ಸಬ್‌ವೇ ಪ್ರದೇಶದ ಪತ್ರೆ ವಾಲಿ ಚಾಲ್ ಮತ್ತು ಫರುಖಿಯಾ ಮಸೀದಿ ಬಳಿ ಆತನನ್ನು ಬಂಧಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಆರೋಪಿ ತನ್ನ ಜೇಬಿನಲ್ಲಿರುವ ಚಾಕುವನ್ನು ತೆಗೆದು ಪೊಲೀಸರ ಮೇಲೆ ಹಲ್ಲೆ ನಡೆಸುವುದಾಗಿ ಬೆದರಿಕೆ ಹಾಕಿದ್ದಾನೆ. ಇನ್ನು ಆತನನ್ನು ಬಂಧಿಸಲು ಪ್ರಯತ್ನಿಸಿದಾಗ ಇಬ್ಬರ ಪೊಲೀಸರ ಮೇಲೆ ಇರಿದಿದ್ದಾನೆ ಎಂದು ತಿಳಿಸಿದ್ದಾರೆ.

ಈ ಘಟನೆಯಲ್ಲಿ ಸಬ್-ಇನ್ಸ್‌ಪೆಕ್ಟರ್ ಶಾಹಿಕಾಂತ್ ಪಾಟೀಲ್ (51) ಮತ್ತು ಕಾನ್‌ಸ್ಟೆಬಲ್ ಪಂಕಜ್ ಪರದೇಶಿ (38) ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಡಿಎನ್ ನಗರ ಪೊಲೀಸರು ಅಕಿನ್ ಖಾನ್ ವಿರುದ್ಧ ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net