ಐಷಾರಾಮಿ ಕಾರು ವಶಕ್ಕೆ ಪಡೆದ ವಿಚಾರ: ಕಾರು ಬಿಡುಗಡೆ ಕೋರಿ ಹೈಕೋರ್ಟ್​ ಮೆಟ್ಟಿಲೇರಿದ ದುಲ್ಕರ್ ಸಲ್ಮಾನ್| Dulquer Salmaan

Untitled design - 2025-09-27T124009.181
Published on

Dulquer Salmaan: ಆಪರೇಷನ್ ನಮ್ಖೋರ್ ಕಾರ್ಯಾಚರಣೆ ಭಾಗವಾಗಿ ಭೂತಾನ್​ನಿಂದ ಭಾರತಕ್ಕೆ ಕಳ್ಳಸಾಗಾಣೆ ಮಾಡಲಾದ ಆರೋಪದ ಮೇಲೆ, ವಶಪಡಿಸಿಕೊಂಡಿರುವ ತಮ್ಮ ಐಷಾರಾಮಿ ಕಾರುಗಳನ್ನು ಬಿಡುಗಡೆ ಕೋರಿ ನಟ ದುಲ್ಕರ್ ಸಲ್ಮಾನ್ ಕೇರಳ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ ಎಂದು ಶನಿವಾರ(ಸೆ.27) ವರದಿಯಾಗಿದೆ.

ದುಲ್ಕಾರ್ ಸಲ್ಮಾನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾ. ಜಿಯಾದ್ ರೆಹಮಾನ್ ಎಎ ಅವರು ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಗೆ ನೋಟಿಸ್ ಜಾರಿ ಮಾಡಿದ್ದು, ಸೆ. 30ರಂದು ವಿಚಾರಣೆಗೆ ಹಾಜರಾಗಿ ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.

ಅರ್ಜಿಯಲ್ಲಿ ನಟ ದುಲ್ಕರ್ ಸಲ್ಮಾನ್, ವಾಹನಗಳನ್ನು ಕಾನೂನುಬದ್ಧವಾಗಿ ಖರೀದಿಸಲಾಗಿದ್ದು, ದಾಖಲೆಗಳನ್ನು ಪರಿಶೀಲಿಸದೆ ಕಸ್ಟಮ್ಸ್ ಅಧಿಕಾರಿಗಳು ಪೂರ್ವಾಗ್ರಹ ಪೀಡಿತವಾಗಿ ಅದನ್ನು ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ವಾಹನ ಖರೀದಿ ಇನ್‌ವಾಯ್ಸ್ ಸೇರಿದಂತೆ ತಮ್ಮ ಪ್ರತಿನಿಧಿಗಳು ಹಸ್ತಾಂತರಿಸಿದ ಯಾವುದೇ ದಾಖಲೆಗಳನ್ನು ಪರಿಶೀಲಿಸದೆ ಅಧಿಕಾರಿಗಳು ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಎಲ್ಲಾ ಕಾರ್ಯವಿಧಾನಗಳನ್ನು ಅನುಸರಿಸಿ ಮತ್ತು ಕಸ್ಟಮ್ಸ್ ಸುಂಕವನ್ನು ಪಾವತಿಸುವ ಮೂಲಕ ನಾನು ವಾಹನವನ್ನು ಖರೀದಿಸಿದ್ದೇನೆ ಹೇಳಿದ್ದಾರೆ.

ದುಲ್ಕರ್ ಅವರ ಎರಡು ಲ್ಯಾಂಡ್ ರೋವರ್ ಕಾರು ಮತ್ತು ಎರಡು ನಿಸ್ಸಾನ್ ಪೆಟ್ರೋಲ್ ಕಾರುಗಳು ಕಸ್ಟಮ್ಸ್ ಅಧಿಕಾರಿಗಳ ಅನುಮಾನಕ್ಕೆ ಒಳಗಾಗಿವೆ. ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ವಶಕ್ಕೆ ಪಡೆಯಲು ತೆಗೆದುಕೊಂಡ ಕ್ರಮವನ್ನು ರದ್ದುಗೊಳಿಸಿ ಕಾರು ಬಿಡುಗಡೆ ಮಾಡಿಸಿಕೊಡುವಂತೆ ಮನವಿ ಮಾಡಿದ್ದಾರೆ.

ಕಾರನ್ನು ಕಸ್ಟಮ್ಸ್ ಅಧಿಕಾರಿಗಳ ಕಸ್ಟಡಿಯಲ್ಲಿ ಇಡುವುದರಿಂದ ಹಾನಿಯಾಗುವ ಸಾಧ್ಯತೆಯಿದೆ. ಈ ವಾಹನವನ್ನು ಆರ್ಪೀ ಪ್ರಮೋಟರ್ಸ್ ಪ್ರೈವೇಟ್ ಲಿಮಿಟೆಡ್‌ನಿಂದ ಕಾನೂನಿನ ಪ್ರಕಾರ ಹಣ ಪಾವತಿಸಿ ಖರೀದಿಸಲಾಗಿದೆ. ಹಬೀಬ್ ಮೊಹಮ್ಮದ್ ಎಂಬವರಿಂದ ಖರೀದಿಸಿದ್ದು, ಅವರ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net