ಲೈಫ್‌ಸ್ಟೈಲ್

ಚಳಿಗಾಲದಲ್ಲಿ ಹೆಚ್ಚಾಗುತ್ತೆ ವಿಟಮಿನ್​ ಡಿ ಕೊರತೆ: ತಪ್ಪದೇ ಈ ಆಹಾರಗಳನ್ನು ನಿಮ್ಮ ಡಯಟ್​ನಲ್ಲಿ ಸೇರಿಸಿಕೊಳ್ಳಿ | Vitamin D In Winter

Vitamin D In Winter: ಚಳಿಗಾಲದಲ್ಲಿ ಹೆಚ್ಚು ಸೂರ್ಯನ ಬೆಳಕು ಇರುವುದಿಲ್ಲ. ಮುಂಜಾನೆಯೇ ಕೊರೆಯುವ ಚಳಿ ಇರುತ್ತದೆ. ಅಲ್ಲದೆ, ಮೋಡ ಮುಸುಕಿದ ವಾತಾವರಣ ಇರುತ್ತದೆ. ಇದರಿಂದಾಗಿ ಮನೆ ಬಿಟ್ಟು ಹೊರಗಡೆ ಬರಲು ಸಹ ಸಾಧ್ಯವಾಗುವುದಿಲ್ಲ. ಬೆಚ್ಚಗೆ ಮನೆಯಲ್ಲಿಯೇ ಇರಬೇಕು ಅನಿಸುತ್ತದೆ.

ಇನ್ನು ಸೂರ್ಯ ಬೆಳಕು ಕೂಡ ಚಳಿಗಾಲದಲ್ಲಿ ಕಡಿಮೆ ಇರುತ್ತದೆ. ನಮ್ಮ ದೇಹಕ್ಕೆ ಸೂರ್ಯ ಬಿಸಿಲು ಬೀಳದೆ ದೇಹದಲ್ಲಿ ವಿಟಮಿನ್ ಡಿ ಕೊರತೆ ಉಂಟಾಗಬಹುದು. ಹೀಗಾಗಿ ಚಳಿಗಾಲದಲ್ಲಿ ವಿಟಮಿನ್ ಡಿ ಕೊರತೆ ತಪ್ಪಿಸಲು, ನಿಮ್ಮ ಡಯಟ್​ನಲ್ಲಿ ಕೆಲವು ಆಹಾರಗಳನ್ನು ತಪ್ಪದೇ ಸೇರಿಸಿಕೊಳ್ಳಬೇಕು. ಆ ಆಹಾರಗಳು ಯಾವುವು ಎಂಬುದನ್ನು ನಾವೀಗ ತಿಳಿಯೋಣ.

ಅಣಬೆಗಳು ಉತ್ತಮ ಪ್ರಮಾಣದ ವಿಟಮಿನ್ ಡಿ ಅನ್ನು ಹೊಂದಿರುತ್ತವೆ. ನಿಯಮಿತವಾಗಿ ಅಣಬೆಗಳನ್ನು ತಿನ್ನುವುದರಿಂದ ಡಿ ವಿಟಮಿನ್ ಕೊರತೆಯನ್ನು ಹೋಗಲಾಡಿಸಬಹುದು. ಇದಲ್ಲದೆ, ನಿಮ್ಮ ಡಯಟ್​ನಲ್ಲಿ ಮೊಸರನ್ನು ಕೂಡ ಸೇರಿಸಬಹುದು ಮತ್ತು ಕಿತ್ತಳೆ ಹಣ್ಣಿನಲ್ಲಿಯೂ ವಿಟಮಿನ್ ಡಿ ಸೇರಿದಂತೆ ಅನೇಕ ಪೋಷಕಾಂಶಗಳು ಉತ್ತಮ ಪ್ರಮಾಣದಲ್ಲಿವೆ. ಹೀಗಾಗಿ ಈ ಆಹಾರಗಳನ್ನು ಚಳಿಗಾಲದಲ್ಲಿ ತಪ್ಪದೇ ಸೇವಿಸಿ.

ಮಾಂಸಾಹಾರಿ ಆಹಾರ ಪದಾರ್ಥಗಳು

ನೀವು ಮಾಂಸಾಹಾರಿಯಾಗಿದ್ದರೆ, ನಿಮ್ಮ ಡಯಟ್​ನಲ್ಲಿ ಕೊಬ್ಬಿನಾಂಶ ಇರುವ ಮೀನುಗಳನ್ನು ಸಹ ಸೇರಿಸಿಕೊಳ್ಳಬಹುದು. ಇದರ ಹೊರತಾಗಿ, ಕೆಂಪು ಮಾಂಸವು ಉತ್ತಮ ಪ್ರಮಾಣದ ವಿಟಮಿನ್ ಡಿ ಅನ್ನು ಒದಗಿಸುತ್ತದೆ. ನೀವು ಬಯಸಿದರೆ, ಮೊಟ್ಟೆಗಳನ್ನು ನಿಮ್ಮ ಡಯಟ್​ನಲ್ಲಿ ಸೇರಿಸುವ ಮೂಲಕ ಪ್ರಮುಖ ವಿಟಮಿನ್ ಡಿ ಕೊರತೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನಿವಾರಿಸಬಹುದು.

ಡೈರಿ ಉತ್ಪನ್ನಗಳು ಸಹ ಉಪಯುಕ್ತ

ವಿಟಮಿನ್ ಡಿ ಸಮೃದ್ಧವಾಗಿರುವ ಡೈರಿ ಉತ್ಪನ್ನಗಳು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಡಿ ವಿಟಮಿನ್ ಕೊರತೆಯನ್ನು ಹೋಗಲಾಡಿಸಲು, ಪ್ರತಿದಿನ ಹಾಲು ಕುಡಿಯಲು ಪ್ರಾರಂಭಿಸಿ. ಇದಲ್ಲದೆ, ಪನೀರ್ ಅನ್ನು ಸೇವಿಸುವುದರಿಂದ ವಿಟಮಿನ್ ಡಿ ಕೊರತೆಯನ್ನು ತಪ್ಪಿಸಬಹುದು.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್​ ನೆಟ್​” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.