ಒಂದು ಗಂಟೆಯೊಳಗೆ ಸಿಗದಿದ್ರೆ... ಪ್ರಿಯಕರನ ಬಳಿ ಕ್ಷಮೆಯಾಚಿಸಿ ಸಾವಿಗೆ ಶರಣಾದ ಯುವತಿ! Young woman

Young woman
Published on

Young woman : ಯುವತಿಯೊಬ್ಬಳು ತನ್ನ ಪ್ರಿಯಕರನ ಬಳಿ ಕ್ಷಮೆ ಕೇಳಿ ಸಾವಿಗೆ ಶರಣಾಗಿರುವ ಘಟನೆ ಗುಜರಾತಿನ ಬನಸ್ಕಾಂತ ಜಿಲ್ಲೆಯ ಪಾಲನ್‌ಪುರದಲ್ಲಿ ನಡೆದಿದೆ.

ಮೃತಳನ್ನು ರಾಧಾ ಠಾಕೂರ್​ (27) ಎಂದು ಗುರುತಿಸಲಾಗಿದೆ. ಈಕೆ ಬ್ಯೂಟಿ ಪಾರ್ಲರ್​ ನಡೆಸುತ್ತಿದ್ದಳು. ಬಹಳ ತಿಂಗಳಿಂದ ತನ್ನ ಪತಿಯಿಂದ ಬೇರ್ಪಟ್ಟು ಸಹೋದರಿಯೊಂದಿಗೆ ಪಾಲನ್‌ಪುರದಲ್ಲಿ ನೆಲೆಸಿದ್ದಳು. ಭಾನುವಾರ ಕೆಲಸ ಮುಗಿಸಿ ಮನೆಗೆ ಬಂದ ರಾಧ, ಅಕ್ಕನ ಜೊತೆ ಊಟ ಮಾಡಿ ನಿದ್ದೆಗೆ ಜಾರಿದಳು. ಮರುದಿನ ಬೆಳಗ್ಗೆ ರಾಧಾ ಶವವಾಗಿ ಪತ್ತೆಯಾಗಿದ್ದಾಳೆ.

ರಾಧಾಳ ಫೋನ್ ಪರಿಶೀಲಿಸಿದಾಗ ಕೆಲ ಆಡಿಯೋ ದಾಖಲೆಗಳು ಬೆಳಕಿಗೆ ಬಂದಿವೆ. ಆಕೆ ಬೇರೆಯೊಬ್ಬ ಯುವಕನ ಜತೆ ಫೋನ್‌ನಲ್ಲಿ ಸಂಪರ್ಕದಲ್ಲಿದ್ದಿದ್ದು ತಿಳಿದುಬಂದಿದೆ. ರಾಧಾಳ ಸಹೋದರಿ ತಕ್ಷಣ ಸಮೀಪದ ಪೊಲೀಸ್​ ಠಾಣೆಗೆ ಭೇಟಿ ನೀಡಿ ಅಪರಿಚಿತ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ರಾಧಾಳ ಮೊಬೈಲ್​ ಅನ್ನು ಪರಿಶೀಲಿಸಿದ್ದಾರೆ. ರೆಕಾರ್ಡ್ ಆಗಿರುವ ಆಡಿಯೋದಲ್ಲಿ ಆಕೆ ತನ್ನ ಪ್ರಿಯಕರ ಬಳಿ ಕ್ಷಮೆ ಕೇಳಿರುವುದು ಪತ್ತೆಯಾಗಿದೆ. ಆಕೆ ಕ್ಷಮೆ ಕೇಳಿದ್ದು ಯಾಕೆ ಎಂಬುದನ್ನು ತಿಳಿದುಕೊಳ್ಳಲು ಮತ್ತಷ್ಟು ತನಿಖೆ ನಡೆಸಿದಾಗ ಅನೇಕ ಸಂಗತಿಗಳು ಬಯಲಾಗಿದೆ.

ಮೃತ ರಾಧಾ ತನ್ನ ಪ್ರಿಯಕರನ ಬಳಿ ಫೋಟೋ ಕೇಳುತ್ತಿದ್ದಳು. ಆದರೆ, ಆತ ಮಾತ್ರ ಫೋಟೋ ಕಳುಹಿಸುತ್ತಿರಲಿಲ್ಲ. ಘಟನೆ ನಡೆದ ದಿನ ಒಂದು ಗಂಟೆಯೊಳಗೆ ನಿನ್ನ ಫೋಟೋ ಸಿಗದಿದ್ದರೆ ಏನಾಗುತ್ತೆ ನೋಡಿಕೋ ಎಂದು ರಾಧಾ ಎಚ್ಚರಿಕೆ ನೀಡಿರುವುದು ಆಡಿಯೋದಲ್ಲಿದೆ.

ಇನ್ನೊಂದು ಆಡಿಯೋ ರೆಕಾರ್ಡ್​ ಮಾಡಿರುವ ರಾಧಾ, ತನ್ನ ಪ್ರಿಯಕರನ ಬಳಿ ಕ್ಷಮೆ ಕೇಳಿದ್ದಾಳೆ. ನನ್ನನ್ನು ಕ್ಷಮಿಸಿ, ನಾನು ನಿನ್ನನ್ನು ಕೇಳದೆ ತಪ್ಪು ಮಾಡುತ್ತಿದ್ದೇನೆ. ಆದರೆ, ದುಃಖಿಸಬೇಡ. ನೀನು ಸಂತೋಷವಾಗಿರು, ಜೀವನವನ್ನು ಆನಂದಿಸು ಮತ್ತು ಮದುವೆಯಾಗು. ನಾನು ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಮತ್ತು ಸತ್ತಿದ್ದೇನೆ ಎಂದು ಭಾವಿಸಬೇಡ. ನಾನು ಕೈ ಜೋಡಿಸಿ ನಿನ್ನ ಬಳಿ ಕ್ಷಮೆಯಾಚಿಸುತ್ತೇನೆ. ನೀವು ಖುಷಿಯಾಗಿದ್ದರೆ ನನ್ನ ಆತ್ಮಕ್ಕೆ ಶಾಂತಿ ಸಿಗುತ್ತದೆ. ನನ್ನ ಕೆಲಸ ಮತ್ತು ಜೀವನದ ಮೇಲಿರುವ ಅಸಮಧಾನದಿಂದ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ ಎಂದು ರಾಧಾ ತನ್ನ ಸಾವಿಗೂ ಮುನ್ನ ಆಡಿಯೋ ರೆಕಾರ್ಡಿಂಗ್‌ನಲ್ಲಿ ಹೇಳಿದ್ದಾರೆ.

ಸದ್ಯ ಪೊಲೀಸರು ಮಹಿಳೆಯ ಆತ್ಮಹತ್ಯೆಗೆ ನಿಖರ ಕಾರಣ ಏನಿರಬಹುದೆಂದು ತಿಳಿದುಕೊಳ್ಳಲು ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ

ಇತ್ತೀಚೆಗಷ್ಟೇ ಬೆಂಗಳೂರು ಮೂಲದ ಸಾಫ್ಟ್‌ವೇರ್ ಡೆವಲಪರ್ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತ್ನಿ ನಿಕಿತಾ ಹಾಗೂ ಆಕೆಯ ಕುಟುಂಬಸ್ಥರು ಹಾಕಿರುವ ಸುಳ್ಳು ಪ್ರಕರಣಗಳಿಂದ ಬೇಸತ್ತು 80 ನಿಮಿಷಗಳ ವಿಡಿಯೋ ರೆಕಾರ್ಡ್ ಮಾಡಿ, 24 ಪುಟಗಳ ಸೂಸೈಡ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿತು. ಅಲ್ಲದೆ, ಸುಪ್ರೀಂಕೋರ್ಟ್ ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ಆತ್ಮಹತ್ಯೆಯ ಬಗ್ಗೆ ದೇಶಾದ್ಯಂತ ಬಿಸಿ ಬಿಸಿ ಚರ್ಚೆ ನಡೆಯುತ್ತಿರುವ ಸಮಯದಲ್ಲಿ, ಗುಜರಾತಿನ ರಾಧಾ ಆತ್ಮಹತ್ಯೆ ಮಾಡಿಕೊಂಡಿರುವುದು ಚರ್ಚೆಯ ವಿಷಯವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net